ಬೆಂಗಳೂರು: ರಾಜ್ಯ ಸರ್ಕಾರದಿಂದ ರೈತ ವಿದ್ಯಾನಿಧಿ ವಿದ್ಯಾರ್ಥಿ ವೇತನಕ್ಕಾಗಿ ವಿದ್ಯಾರ್ಥಿಗಳು ಆದಾಯ ಪ್ರಮಾಣ ಪತ್ರವನ್ನು ಸಲ್ಲಿಸಲು ಫೆಬ್ರವರಿ.29, 2024ರವರೆಗೆ ಅವಕಾಶ ನೀಡಲಾಗಿದೆ.
ಈ ಸಂಬಂಧ ಕೃಷಿ ಇಲಾಖೆಯಿಂದ ಅಧಿಕೃತ ಆದೇಶವನ್ನು ಹೊರಡಿಸಲಾಗಿದ್ದು 2023-24ನೇ ಸಾಲಿನ ಮುಖ್ಯಮಂತ್ರಿ ರೈತ ವಿದ್ಯಾನಿಧಿ ವಿದ್ಯಾರ್ಥಿವೇತನಕ್ಕೆ ಆದಾಯ ಪ್ರಮಾಣ ಪತ್ರವನ್ನು ಸಲ್ಲಿಸಲು ಫೆ.29ರವರೆಗೆ ಕಾಲಾವಕಾಶವನ್ನು ನೀಡಲಾಗಿದೆ ಎಂದು ತಿಳಿಸಿದೆ.
ಈ ವಿದ್ಯಾರ್ಥಿವೇತನವನ್ನು ಭೂರಹಿತ ಕೃಷಿ ಕಾರ್ಮಿಕರ ಮಕ್ಕಳಿಗೆ ನೀಡಲಾಗುತ್ತಿದೆ. ಇದಕ್ಕಾಗಿ ಅರ್ಜಿ ಸಲ್ಲಿಸುವಂತ ವಿದ್ಯಾರ್ಥಿಗಳು ಅವರ ಪೋಷಕರ ಆದಾಯವು ಸಾಮಾನ್ಯ ವರ್ಗದವರಿಗೆ 2.50 ಲಕ್ಷ ರೂಪಾಯಿ ಮೀರಬಾರದು ಎಂಬುದಾಗಿ ಷರತ್ತು ವಿಧಿಸಿದೆ.
ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವಂತ ಮುಖ್ಯ ಉದ್ದೇಶವನ್ನು ರೈತ ವಿದ್ಯಾನಿಧಿ ವಿದ್ಯಾರ್ಥಿವೇತನದ ಉದ್ದೇಶವಾಗಿದೆ. ಈ ಯೋಜನೆಯಡಿ 2500 ರೂ ಮತ್ತು ಗರಿಷ್ಠ 110000 ರೂ ವಿದ್ಯಾರ್ಥಿವೇತನ ನೀಡಲಾಗುತ್ತದೆ ಎಂಬುದಾಗಿ ತಿಳಿಸಿದೆ.
BREAKING: ISROದಿಂದ ‘ಇನ್ಸಾಟ್-3ಡಿಎಸ್ ಹವಾಮಾನ ಉಪಗ್ರಹ’ ಯಶಸ್ವಿಯಾಗಿ ಉಡಾವಣೆ | INSAT-3DS satellite
‘SSLC, ದ್ವಿತೀಯ PUC ವಾರ್ಷಿಕ ಪರೀಕ್ಷೆ’ಯಲ್ಲಿ ‘ಅಕ್ರಮ ತಡೆ’ಗೆ ‘ಶಿಕ್ಷಣ ಇಲಾಖೆ’ಯಿಂದ ಮಹತ್ವದ ಕ್ರಮ