ಬೆಂಗಳೂರು: ಬಿಬಿಎಂಪಿ ವಶದಲ್ಲಿರುವ ಕೆರೆಗಳ ನಿರ್ವಹಣೆಯಲ್ಲಿ ನಾಗರೀಕರನ್ನು ಒಳಗೊಳ್ಳುವ ಉದ್ದೇಶದಿಂದ ಅಧಿಸೂಚನೆಯನ್ನು ಹೊರಡಿಸಿ ಆಸಕ್ತಿವುಳ್ಳ ನಾಗರೀಕರನ್ನು “ಕೆರೆ ಮಿತ್ರ” ಸ್ವಯಂಸೇವಕರಾಗಿ ನೊಂದಾಯಿಸಿಕೊಳ್ಳಲು ಎರಡು ಬಾರಿ ಕೋರಲಾಗಿತ್ತು, ಅದರಂತೆ 124 ಕೆರೆಗಳಿಗೆ ಈಗಾಗಲೇ ಕೆರೆ ಮಿತ್ರ ಸ್ವಯಂಸೇವಕರನ್ನು ಆಯ್ಕೆ ಮಾಡಲಾಗಿರುತ್ತದೆ.
ಇನ್ನುಳಿದ ಕೆಲವು ಕೆರೆಗಳಿಗೆ ನಾಗರೀಕರು ನೊಂದಾಯಿಸದೇ ಇರುವುದರಿಂದ ಈ ಕೆರೆಗಳಿಗೆ ಹಾಗೂ ಕೆಲವು ಕೆರೆಗಳಿಗೆ ಕೇವಲ ಒಬ್ಬರು ನೊಂದಾಯಿಸಿರುವುದರಿಂದ ಒಟ್ಟಾಗಿ ಎಲ್ಲಾ ಕೆರೆಗಳಿಗೆ ನಾಗರೀಕರನ್ನು “ಕೆರೆ ಮಿತ್ರ” ಸ್ವಯಂ ಸೇವಕರನ್ನಾಗಿ ಪಾಲಿಕೆಯ ವೆಬ್‌ಸೈಟ್‌ನಲ್ಲಿ ನೊಂದಾಯಿಸಿಕೊಳ್ಳಲು ಕೋರಲಾಗಿದೆ.
ಅದರಂತೆ ಬೆಂಗಳೂರಿನ ನಿವಾಸಿಗಳು ಅವರು ವಾಸವಿರುವ ವಾರ್ಡ್/ ಸಮೀಪದಲ್ಲಿರುವ ಕೆರೆಗಳಿಗೆ ಆಸಕ್ತಿ ಇದ್ದಲ್ಲಿ ಕೆರೆ ನಿರ್ವಹಣೆ ಬಗ್ಗೆ ಪ್ರತಿನಿತ್ಯ ಪಲಶೀಲಿಸಿ, ಅಂತರ್ಜಾಲದಲ್ಲಿ ವಿವರಗಳನ್ನು ದಾಖಲಿಸುವ ಮೂಲಕ ಸಾರ್ವಜನಿಕರ ಅವಶ್ಯಕತೆ ಹಾಗೂ ಕೆರೆಗಳ ಆಗೂ ಹೋಗುಗಳನ್ನು ಇನ್ನು ಉತ್ತಮವಾಗಿ ನಿಗಾವಹಿಸಲು ಅನುವು ಮಾಡಿಕೊಳ್ಳುವ ಉದ್ದೇಶದಲ್ಲಿ ಸದರಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. ನೊಂದಾಯಿಸಬಹುದಾದ ಕೆರೆಗಳ ಪಟ್ಟಿಯನ್ನು ವೆಬ್ ಸೈಟ್ ನಲ್ಲಿ ಪಡೆಯಬಹುದಾಗಿರುತ್ತದೆ. ಮುಂದುವರೆದು ಕೆರೆಮಿತ್ರ ನೋಂದಾಣಿಯ ದಿನಾಂಕವನ್ನು 25-03-2024 ರವರೆಗೆ ವಿಸ್ತರಿಸಲಾಗಿದೆ ಎಂದು ಅರಣ್ಯ, ಪರಿಸರ ಮತ್ತು ಹವಾಮಾನ ವೈಪರೀತ್ಯ ನಿರ್ವಹಣೆಯ ವಿಶೇಷ ಆಯುಕ್ತರಾದ ಪ್ರೀತಿ ಗೆಹ್ಲೋಟ್ ರವರು ಸಾರ್ವಜನಿಕ ಪ್ರಕಟಣೆಯ ಮೂಲಕ ತಿಳಿಸಿರುತ್ತಾರೆ.
ಕೆರೆ ಮಿತ್ರರಾಗಲು ನೇರವಾಗಿ ಕೆಳಗಿನ ಲಿಂಕ್ ಮೂಲಕ ನೊಂದಾಯಿಸಿಕೊಳ್ಳಬಹುದು
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಕೆರೆಗಳ ಸಮರ್ಪಕ ನಿರ್ವಹಣೆಯ ಬಗ್ಗೆ ಮೇಲ್ವಿಚಾರಣೆ ನೆಡೆಸಲು ಆಸಕ್ತಿವುಳ್ಳ ಬೆಂಗಳೂರಿನ ನಾಗರೀಕರು https://keremithra.bbmpgov.in/registration ಸದರಿ ಲಿಂಕ್ ಮೂಲಕ ಕೆರೆ ಮಿತ್ರರಾಗಬಹುದಾಗಿದೆ.