ಹಾಸನ : ರಾಜ್ಯದ ಹಲವು ಕಡೆ ಕಾಡಾನೆ ಹಾವಳಿ ಜೋರಾಗಿದ್ದು, ಅದರಲ್ಲೂ ಚಿಕ್ಕಮಗಳೂರಿನಲ್ಲಿ ಇತ್ತೀಚೆಗೆ ಕಾಡಾನೆ ಜನರ ನಿದ್ದೆಗೆಡಿಸಿತ್ತು.
ಇದೀಗ ಒಂದಲ್ಲ, ಎರಡಲ್ಲ ಹಾಸನದಲ್ಲಿ 25 ಕಾಡಾನೆ ಪ್ರತ್ಯಕ್ಷವಾಗಿದ್ದು, ಇದನ್ನು ಕಂಡ ಜನರು ಬೆಚ್ಚಿಬಿದ್ದಿದ್ದಾರೆ.,
ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಕಿರೆಹಳ್ಳೆ ಬಳಿ ಕಾಡಾನೆ ಗುಂಪು ಪ್ರತ್ಯಕ್ಷವಾಗಿದೆ. ಬರೋಬ್ಬರಿ 25 ಆನೆಗಳ ಹಿಂಡು ರಸ್ತೆಯಲ್ಲಿ ಸಾಗುತ್ತಿದ್ದು, ಇದನ್ನು ಕಂಡ ಜನರು ಬೆಚ್ಚಿಬಿದ್ದಿದ್ದಾರೆ. ಕಾಡಾನೆ ಭಯದಿಂದ ಜನರು ತಮ್ಮ ತೋಟಗಳಿಗೆ ಹೋಗದೇ ಮನೆಯಲ್ಲಿ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ, ಕೂಲಿ ಕಾರ್ಮಿಕರು ಕೂಡ ತೋಟಗಳಿಗೆ ಕೆಲಸಕ್ಕೆ ಹೋಗುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಆನೆಗಳನ್ನು ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಕಳಸದಲ್ಲಿ ಮನೆ ಬಾಗಿಲಿಗೆ ಕಾಡಾನೆ
ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಜೋರಾಗಿದೆ. ಕೂಲಿ ಕಾರ್ಮಿಕರು, ರೈತರು ಜಮೀನಿಗೆ ತೆರಳಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ ಕಾಡಾನೆ ಜನರ ನಿದ್ದೆಗೆಡಿಸಿದೆ. ಕಳಸ ತಾಲೂಕಿನ ಗಣಪತಿಕಟ್ಟೆ ಗ್ರಾಮದಲ್ಲಿ ಸಂಜೆಯಾಗುತ್ತಿದ್ದಂತೆ ಕಾಡಾನೆಗಳು ಮನೆ ಬಾಗಿಲಿಗೆ ಬರುತ್ತಿವೆ.
ಕಳಸ ಹಲವು ಕಡೆ ಸುತ್ತಮುತ್ತಲಿನ ಗ್ರಾಮದ ಜನ ಸಂಜೆಯಾಗುತ್ತಿದ್ದಂತೆ ಮನೆಯಿಂದ ಹೊರಬರೋದಕ್ಕೂ ಹೆದರುವ ಸ್ಥಿತಿ ಎದುರಾಗಿದೆ. ಕಳಸ ತಾಲೂಕಿನ ಗಣಪತಿಕಟ್ಟೆಯಲ್ಲಿ ಎರಡು ಕಾಡಾನೆಗಳು ಬೀಡುಬಿಟ್ಟಿದ್ದು , ಕಾಡಾನೆಗಳು ಸಂಚರಿಸುವುದನ್ನು ಸ್ಥಳೀಯರು ನೋಡಿದ್ದಾರೆ. ಕಾಡಾನೆ ಸೆರೆಹಿಡಿಯಲು ಗ್ರಾಮದ ಜನರು ಆಗ್ರಹಿಸಿದ್ದಾರೆ.
ರಾಯಚೂರಿನ RTPSನಲ್ಲಿ ಭೀಕರ ದುರಂತ: ಆಯತಪ್ಪಿ ಕೆಳಗೆ ಬಿದ್ದು ಮೂವರು ಕಾರ್ಮಿಕರಿಗೆ ಗಾಯ, ಸ್ಥಿತಿ ಗಂಭೀರ
ಪೊಲೀಸರ ಕಾರ್ಯವೈಖರಿ ಬಗ್ಗೆ ನನಗೆ ತೃಪ್ತಿ ಇದೆ : ಗೃಹ ಸಚಿವ ಆರಗ ಜ್ಞಾನೇಂದ್ರ
ಪೊಲೀಸರ ಕಾರ್ಯವೈಖರಿ ಬಗ್ಗೆ ನನಗೆ ತೃಪ್ತಿ ಇದೆ : ಗೃಹ ಸಚಿವ ಆರಗ ಜ್ಞಾನೇಂದ್ರ