ಬೆಂಗಳೂರು : ಕಾರ್ಯಕರ್ತರಂತೆ ನಾನು ಕೂಡ ಅವರನ್ನ ದೇವರೆಂದು ನೋಡುತ್ತೇನೆ ಎಂದು ಸಚಿವ ಸತೀಶ್ ಜಾರಕಿಹೊಳಿ ಅವರ ಹೇಳಿಕೆಗೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ತಿರುಗೇಟು ನೀಡಿದ್ದು ಇಂತಹ ಉಸರವಳ್ಳಿ ರಾಜಕಾರಣಿಗಳಿಂದಲೇ ಉತ್ತರ ಕರ್ನಾಟಕ ಅಭಿವೃದ್ಧಿ ಇನ್ನೂ ಮರೀಚಿಕೆಯಾಗಿದೆ ಎಂದು ಕಿಡಿ ಕಾರಿದ್ದಾರೆ.
ಟ್ವೀಟ್ ನಲ್ಲಿ ಸತೀಶ್ ಜಾರಕಿಹೊಳಿ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ವ್ಯಕ್ತಿ ಪೂಜೆ ಮಾಡೋದಿಲ್ಲ, ದೇವರಲ್ಲಿ ನಂಬಿಕೆಯಿಲ್ಲ, ಹಿಂದೂ ಪೂಜೆಗಳಲ್ಲಿ, ಆಚರಣೆಗಳಲ್ಲಿ ನಂಬಿಕೆ ಇಲ್ಲದವರು ರಾಜಕೀಯ ಅಸ್ತಿತ್ವಕ್ಕಾಗಿ ಸಿದ್ದರಾಮಯ್ಯನವರನ್ನು ತಮ್ಮ ‘ಮನೆ ದೇವ’ ರಾಗಿ ಮಾಡಿಕೊಂಡಿರುವ ನೀವು ಎಂತ ಅವಕಾಶವಾದಿಗಳು ಎಂದು ಜನತೆಗೆ ಗೊತ್ತಾಗುತ್ತಿದೆ.ಸಂದರ್ಭಕ್ಕೆ ತಕ್ಕಂತೆ ಊಸರವಳ್ಳಿಯ ರೀತಿ ಬಣ್ಣ ಬದಲಿಸುವ ರಾಜಕಾರಣಿಗಳಿಂದಲೇ ಉತ್ತರ ಕರ್ನಾಟಕಕ್ಕೆ ಅಭಿವೃದ್ಧಿ ಮರೀಚಿಕೆ ಆಗಿರುವುದುಎಂದು ಬರೆದುಕೊಂಡಿದ್ದಾರೆ.
ಜಾರಕಿಹೊಳಿ ಹೇಳಿದ್ದೇನು?
ನಿನ್ನೆ ಬೆಳಗಾವಿಯ ಹುಕ್ಕೇರಿ ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಬಳಿಕ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಕಾರ್ಯಕರ್ತರಂತೆ ನಾನು ಕೂಡ ಅವರನ್ನ ದೇವರೆಂದು ನೋಡುತ್ತೇನೆ ಎಂದು ತಿಳಿಸಿದ್ದಾರೆ.
ಅವರವರ ನಾಯಕರನ್ನ ಭಕ್ತಿಪೂರ್ವಕವಾಗಿ ದೇವರ ರೂಪದಲ್ಲಿ ನೋಡುತ್ತಾರೆ. ದೇವರ ರೂಪದಲ್ಲಿ ನೋಡಲು ತಪ್ಪೇನಿಲ್ಲ. ದೇವರೇ ಬೇರೆ ಮನುಷ್ಯರೇ ಬೇರೆ. ಮೋದಿ, ಯಡಿಯೂರಪ್ಪ, ದೇವೆಗೌಡ ಅವರನ್ನ ಅವರ ಕಾರ್ಯಕರ್ತರು ದೇವರು ಎಂದು ನೋಡುತ್ತಾರೆ. ಅದರಲ್ಲಿ ತಪ್ಪೇನಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಡಿಸಿಎಂ ಮಾಡಲು ಕಿತ್ತಾಟದ ವಿಚಾರವಾಗಿ ಮಾತನಾಡಿದ ಅವರು, ನಾವು ಸಭೆ ನಡೆಸಿದ್ದು ನಿಜ. ಸಭೆಯಲ್ಲಿ ಡಿಸಿಎಂ ಸ್ಥಾನ ಕೇಳುವ ವಿಚಾರ ಚರ್ಚೆ ಆಗಿಲ್ಲ. ಡಿಸಿಎಂ ಆಗಬೇಕು ಎಂದು ಯಾರೂ ಕೇಳೇ ಇಲ್ಲ ಎಂದಿದ್ದಾರೆ.
ವ್ಯಕ್ತಿ ಪೂಜೆ ಮಾಡೋದಿಲ್ಲ, ದೇವರಲ್ಲಿ ನಂಬಿಕೆಯಿಲ್ಲ, ಹಿಂದೂ ಪೂಜೆಗಳಲ್ಲಿ, ಆಚರಣೆಗಳಲ್ಲಿ ನಂಬಿಕೆ ಇಲ್ಲದವರು ರಾಜಕೀಯ ಅಸ್ತಿತ್ವಕ್ಕಾಗಿ ಸಿದ್ದರಾಮಯ್ಯನವರನ್ನು ತಮ್ಮ 'ಮನೆ ದೇವ' ರಾಗಿ ಮಾಡಿಕೊಂಡಿರುವ ನೀವು ಎಂತ ಅವಕಾಶವಾದಿಗಳು ಎಂದು ಜನತೆಗೆ ಗೊತ್ತಾಗುತ್ತಿದೆ. ಸಂದರ್ಭಕ್ಕೆ ತಕ್ಕಂತೆ ಊಸರವಳ್ಳಿಯ ರೀತಿ ಬಣ್ಣ ಬದಲಿಸುವ ರಾಜಕಾರಣಿಗಳಿಂದಲೇ… https://t.co/8bkUfJF0JH
— Basanagouda R Patil (Yatnal) (@BasanagoudaBJP) January 7, 2024