ನೋಯ್ಡಾ: ದೇಶದೆಲ್ಲೆಡೆ ಸೋಮವಾರ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗಿದ್ದು, ಜನರು ಬಣ್ಣಗಳಲ್ಲಿ ಮಿಂದೆದ್ದರು. ಇದರ ನಡುವೆಯೇ ಅಂತರ್ಜಾಲದಲ್ಲಿ ವೀಡಿಯೋವೊಂದು ಹರಿದಾಡಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದ್ದಲ್ಲದೆ, ಕ್ರಮಕ್ಕೆ ಆಗ್ರಹಿಸುತ್ತಿದ್ದಂತೆ ಎಚ್ಚೆತ್ತ ಉತ್ತರ ಪ್ರದೇಶದ ಪೊಲೀಸರು ವೀಡಿಯೊದಲ್ಲಿದ್ದವರಿಗೆ ಭಾರಿ ದಂಡ ವಿಧಿಸಿದ್ದಾರೆ.
ಹೌದು ವೈರಲ್ ವಿಡಿಯೋದಲ್ಲಿ, ಇಬ್ಬರು ಹುಡುಗಿಯರು ಸ್ಕೂಟರ್ ಮೇಲೆ ಕುಳಿತು ಬಾಲಿವುಡ್ ನ “ಮೋಹೆ ರಂಗ್ ಲಗಾಡೆ” ಹಾಡಿಗೆ ನೃತ್ಯ ಮಾಡುತ್ತಿದ್ದಾರೆ. ಹುಡುಗಿಯರು ನೃತ್ಯ ಮಾಡುತ್ತಿದ್ದರಾ, ಅಶ್ಲೀಲ ಕೃತ್ಯಗಳಲ್ಲಿ ತೊಡಗಿದ್ದರಾ ಅಥವಾ ಪ್ರಣಯದಲ್ಲಿ ಮಗ್ನರಾಗಿದ್ದರಾ ಎಂದು ವೀಡಿಯೋ ವೀಕ್ಷಿಸಿದ ನೆಟ್ಟಿಗರು ಅಸಮಾಧಾನ ಹೊರಹಾಕಿದ್ದರು. ವೈರಲ್ ವೀಡಿಯೊ ವಿರುದ್ದ ಕ್ರಮಕ್ಕೆ ಒತ್ತಾಯಿಸಿದ್ದರು.
ಚಲಿಸುತ್ತಿದ್ದ ಸ್ಕೂಟರ್‌ನಲ್ಲಿ ಹುಡುಗಿಯರು ಮುಖಾಮುಖಿಯಾಗಿ ಕುಳಿತು ಒಬ್ಬರ ಮೇಲೊಬ್ಬರು ಬಿದ್ದು, ಅಶ್ಲೀಲವಾಗಿ ವರ್ತಿಸುತ್ತ ಬಣ್ಣ ಬಳಿದುಕೊಳ್ಳುತ್ತಿದ್ದರು. ಹುಡುಗಿಯರು ಈ ಕೃತ್ಯ ನಡೆಸುತ್ತಿರುವಾಗ ಹುಡುಗ ಸ್ಕೂಟರ್ ಓಡಿಸುತ್ತಿದ್ದ. ಮತ್ತೊಬ್ಬ ವ್ಯಕ್ತಿ ವಿಡಿಯೋ ಚಿತ್ರೀಕರಿಸಿದ್ದು, ವಿಡಿಯೋ ಚಿತ್ರೀಕರಿಸಿದವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.
ವಿಡಿಯೋ ವೈರಲ್ ಆದ ನಂತರ ನೋಯಿಡಾ ಪೊಲೀಸರು ದುಷ್ಕೃತ್ಯವೆಸಗಿದವರನ್ನು ಪತ್ತೆ ಹಚ್ಚಿದ್ದು, ಬರೋಬ್ಬರಿ 33,000 ರೂ. ದಂಡ ವಿಧಿಸಿದ್ದಾರೆ. ಈ ಬಗ್ಗೆ ಪೊಲೀಸರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಮಾಹಿತಿ ನೀಡಿದ್ದಾರೆ. ನಿಯಮಗಳ ಪ್ರಕಾರ ಇ-ಚಲನ್ ಮೂಲಕ ರೂ. 33000 ದಂಡ ನೀಡುವ ಮೂಲಕ ಸಂಚಾರ ನಿಯಮಗಳ ಉಲ್ಲಂಘನೆಗಾಗಿ ಸಂಬಂಧಪಟ್ಟ ವಾಹನದ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.
#HoliCelebration@uptrafficpolice @Uppolice @dtptraffic
गाड़ी नंबर – (UP16C – X0866)
बिना हेलमेट इए ड्राइविंग ट्रिपिंलिंग और स्टंट किया जा रहा है आपसे अनुरोध है इन लोगो पर करएवाही करें @zoo_bear @WasimAkramTyagi @007AliSohrab pic.twitter.com/FpJXzGWtfr— Shiekh Mohd Aqib (@Mohd_Aqib9) March 25, 2024
उक्त शिकायत का संज्ञान लेते हुए संबंधित वाहन के विरुद्ध यातायात नियमों का उल्लंघन करने पर नियमानुसार ई-चालान (जुर्माना 33000/- रुपए) की कार्यवाही की गई है।
यातायात हेल्पलाइन नं0- 9971009001 pic.twitter.com/8iOBgEESgW— Noida Traffic Police (@noidatraffic) March 25, 2024