ಹಾವೇರಿ: ಅಕ್ಕಿಆಲೂರ: ಲೋಕಸಭೆ ಚುನಾವಣೆ ನಂತರ ಮತ್ತೆ ರಾಜ್ಯದಲ್ಲಿ ಚುನಾವಣೆ ನಡೆದರೆ ಆಶ್ಚರ್ಯ ಪಡಬೇಕಿಲ್ಲ ಎಂದು ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಭವಿಷ್ಯ ನುಡಿದಿದ್ದಾರೆ.
ಇಂದು ಹಾನಗಲ್ ವಿಧಾನಸಭಾ ಕ್ಷೇತ್ರದ ಅಕ್ಕಿ ಆಲೂರಿನಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯ ನಂತರ ಕಾಂಗ್ರೆಸ್ ಇಬ್ಬಾಗವಾಗುತ್ತದೆ. ಭಾರತ ಸಾಕಷ್ಟು ಪ್ರಧಾನಿಗಳನ್ನು ಕಂಡಿದೆ ಆದರೆ, ನರೇಂದ್ರ ಮೋದಿಯವರಂತ ವ್ಯಕ್ತಿತ್ವ ನಮಗೆ ಸಿಕ್ಕಲ್ಲ, ಪ್ರಮಾಣಿಕತೆ, ಸಮಯ ಪ್ರಜ್ಞೆ, ದೇಶಭಕ್ತಿಯ ಸಂಸ್ಕಾರ ಮೋದಿಯವರಲ್ಲಿ ಇದೆ. ದೇಶಭಕ್ತಿಗೆ ಇನ್ನೊಂದು ಹೆಸರೆ ಮೋದಿಜೀ. ದೇಶದಲ್ಲಿ ಭಯೋತ್ಪಾದನೆ ನಡೆದರೆ ಮನಮೋಹನ ಸಿಂಗ್, ಪಾಕಿಸ್ತಾನಕ್ಕೆ ಪತ್ರ ಬರೆಯುತ್ತಿದ್ದರು, ಆದರೆ ಮೋದಿ, ಮಾತಲ್ಲ ಕೃತಿ ಮೂಲಕ ತಕ್ಕ ಉತ್ತರ ನೀಡಿದರು ಎಂದು ಹೇಳಿದರು.
ದೇಶದ ಬೆಳೆವಿಮೆ ನೇತಾರ ಸಿ.ಎಂ ಉದಾಸಿಯವರು, ಹಾವೇರಿ ಜಿಲ್ಲೆಯಲ್ಲಿ 480 ಕೋಟಿ ಬೆಳೆವಿಮೆ ಬಂದಿದೆ. ವಿಮೆ ಜಾರಿ ಮಾಡುವುದು ಮಾತ್ರವಲ್ಲ. ಯೋಜನೆಯನ್ನು ಜನರಿಗೆ ತಲುಪಿಸುವ ಕಾರ್ಯ ಮೋದಿ ಮಾಡುತ್ತಿದ್ದಾರೆ. ಪ್ರಧಾನಿಗಳಿಗೆ ಯೋಗ್ಯವ್ಯಕ್ತಿ ಮತ್ತೊಬ್ಬರಿಲ್ಲ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಖರ್ಗೆ ಪ್ರಧಾನಿಯಾಗಬೇಕು ಎನ್ನುತ್ತಿದ್ದರೆ, ಕರ್ನಾಟಕದ ಕಾಂಗ್ರೆಸ್ ನವರು, ರಾಹುಲ್ ಗಾಂಧಿ ಎನ್ನುತ್ತಿದ್ದಾರೆ. ಭಾರತಕ್ಕೆ 75 ವರ್ಷದ ನಂತರ ಇಂದು ಜಲಜೀವನ್ ಮಿಷನ್ ಮೂಲಕ ಇಂದು ಮನೆಗೆ ನೀರು ಬರುತ್ತಿದೆ. ಕಳೆದ ಹತ್ತು ವರ್ಷದಲ್ಲಿ 15 ಕೋಟಿ ಜನರನ್ನು ಬಡತನದಿಂದ ಹೊರಗೆ ಬಂದಿದ್ದಾರೆ ಎಂದು ಹೇಳಿದರು.
ಅಕ್ಕಿ ಆಲೂರು ಅಳಿಯ
ನಾನು ಅಕ್ಕಿಆಲೂರ ಅಳಿಯಾ, ಸೇವೆ ಮಾಡಿಸಿಕೊಳ್ಳುವ ಅಳಿಯ ಆಗುವುದಿಲ್ಲ. ಸೇವೆ ಮಾಡುವ ಅಳಿಯಾ ನಾನಾಗುತ್ತೇನೆ ಎಂದು ಹೇಳಿದರು.
ಮಾಜಿ ಸಚಿವ ಮನೋಹರ ತಹಶಿಲ್ದಾರರ ಮಾತನಾಡಿ, ತನ್ನ ದಕ್ಷ ಮತ್ತು ಪ್ರಾಮಣಿಕ ಆಡಳಿತದ ಮೂಲಕ ದೇಶದ ಗಮನ ಸೆಳೆದಿರುವ ಬಸವರಾಜ ಬೊಮ್ಮಾಯಿಯವರ ಶಕ್ತಿ ಸಾಮರ್ಥ್ಯ ಗಮನಿಸಿರುವ ಹೈಕಮಾಂಡ್, ಕೇಂದ್ರಕ್ಕೆ ಆಹ್ವಾನಿಸಿದ್ದಾರೆ. ಜೀವನದ ಪ್ರತಿ ಹೆಜ್ಜೆ ಯಶಸ್ವಿಯ ಹಾದಿಯಲ್ಲಿರುವ ಬೊಮ್ಮಾಯಿಯವರು ಹಾವೇರಿಯಿಂದ ಲೋಕಸಭೆಗೆ ಪ್ರತಿನಿಧಿಸಿದರೆ ನಮ್ಮ ಪೀಳಿಗೆಯ ಭವಿಷ್ಯ ಉಜ್ವಲವಾಗುತ್ತದೆ. ನನ್ನ ಮತ್ತು ಸಿ.ಎಂ ಉದಾಸಿಯವರ ಮಧ್ಯೆ ಕಳೆದ 4 ದಶಕಗಳ ಕಾಲ ಅಭಿವೃದ್ಧಿಗಾಗಿ ತೀವ್ರ ಜಿದ್ದಾಜಿದ್ದಿ ಇತ್ತು, ಆದರೆ ಎಂದಿಗೂ ವೈಯಕ್ತಿಕವಾಗಿ ನಾವು ದ್ವೇಷಮಾಡಿಕೊಂಡಿಲ್ಲ. ನಮ್ಮನ್ನು ದ್ವೇಷಿಸುತ್ತಿದ್ದ ಪರಕೀಯರು ಭಾರತಕ್ಕೆ ಗೌರವ ಕೊಟ್ಟು ಹೆದರುವ ವಾತಾವರಣ ನಡುವೆ ನಿರ್ಮಾಣವಾಗಿದೆ ಎಂದರೆ ಕಾರಣ ನರೇಂದ್ರ ಮೋದಿಜಿಯವರು ಎಂದು ಹೇಳಿದರು.
ಶಿವಮೊಗ್ಗ: ಏಪ್ರಿಲ್.7ರಂದು ಜಿಲ್ಲೆಯ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut
ಬೆಂಗಳೂರಲ್ಲಿ ‘ಕಾಲರಾ’ ರೋಗ ಪತ್ತೆ : ಹೋಟೆಲ್, ರೆಸ್ಟೋರೆಂಟ್, ಕೆಫೆ ಮಾಲೀಕರಿಗೆ ‘BBMP’ ಮಹತ್ವದ ಆದೇಶ