ಮಂಗಳೂರು: ಶಿರಾಡಿ ಘಾಟ್ನಲ್ಲಿ ಸುರಂಗ ಮಾರ್ಗ ಸಾಧ್ಯವಿಲ್ಲ ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಇಂದಿನ ಸ್ಥಿತಿಗತಿ ಕುರಿತು ಕೇಳಿದ ಪ್ರಶ್ನೆಗೆ ಲೋಕಸಭೆಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಉತ್ತರಿಸುವ ಮೂಲಕ ಸ್ಪಷ್ಟನೆ ನೀಡಿದ್ದಾರೆ
BIG NEWS : 2023ರ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪುಟಿನ್ ಭಾರತಕ್ಕೆ ಭೇಟಿ?: ರಷ್ಯಾದ ಶೆರ್ಪಾ ಹೇಳಿದ್ದೇನು?
ಹಾಗಾಗಿ ಸದ್ಯಕ್ಕೆ ಹಾಸನ ಮತ್ತು ದಕ್ಷಿಣ ಕನ್ನಡದ ನಡುವೆ ಸಂಪರ್ಕ ಕಲ್ಪಿಸುವ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಶಿರಾಡಿ ಘಾಟ್ನಲ್ಲಿನಿರ್ಮಿಸಲು ಉದ್ದೇಶಿಸಿರುವ ಹಸಿರು ಸುರಂಗ ಮಾರ್ಗ ಯೋಜನೆ ಸಾಧ್ಯವಿಲ್ಲ, ಇದರ ಬದಲಾಗಿ ಶಿರಾಡಿ ಘಾಟ್ನಲ್ಲಿ 26-ಕಿಮೀ ಘಾಟ್ ಸ್ಟ್ರೆಚ್ನಲ್ಲಿ ಚತುಷ್ಪಥ ರಸ್ತೆಗಾಗಿ ವಿವರವಾದ ಯೋಜನಾ ವರದಿಯನ್ನು (ಡಿಪಿಆರ್) ತಯಾರಿಸಲಾಗುತ್ತಿದೆ ಎಂದಿದ್ದಾರೆ
BIG NEWS : 2023ರ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪುಟಿನ್ ಭಾರತಕ್ಕೆ ಭೇಟಿ?: ರಷ್ಯಾದ ಶೆರ್ಪಾ ಹೇಳಿದ್ದೇನು?
ಈ ಬಗ್ಗೆ ಶಿರಾಡಿ ಘಾಟ್ ವಿಭಾಗದಲ್ಲಿ ಸುರಂಗಗಳ ನಿರ್ಮಾಣವು ಬೃಹತ್ ಹೂಡಿಕೆಯನ್ನು ಒಳಗೊಂಡಿದೆ. ಆ ಹೂಡಿಕೆಗೆ ಮತ್ತು ಅಲ್ಲಿ ಸುರಂಗದ ಕಾಮಗಾರಿ ಮಾಡಲು ತೊಂದರೆ ಎದುರಾಗಬಹುದು. ಶಿರಾಡಿ ಘಾಟ್ನಲ್ಲಿ ಸದ್ಯಕ್ಕೆ ಅಸ್ತಿತ್ವದಲ್ಲಿರುವ ದ್ವಿಪಥದ ರಸ್ತೆಯನ್ನು ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿಪಡಿಸಲು ಸಚಿವಾಲಯವು ನಿರ್ಧರಿಸಿದೆ. ಇದಕ್ಕಾಗಿ NHAI ಈಗಾಗಲೇ DPR ಸಲಹೆಗಾರರನ್ನು ತೊಡಗಿಸಿಕೊಂಡಿದೆ. ಅದರ ವರದಿ ಪ್ರಗತಿಯಲ್ಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸ್ಪಷ್ಟನೆ ನೀಡಿದ್ದಾರೆ
BIG NEWS : 2023ರ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪುಟಿನ್ ಭಾರತಕ್ಕೆ ಭೇಟಿ?: ರಷ್ಯಾದ ಶೆರ್ಪಾ ಹೇಳಿದ್ದೇನು?