ಮೈಸೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಿಸುವಂತ ಪರಿಸ್ಥಿತಿ ಉದ್ಭವಿಸಿಲ್ಲ. ಸಿದ್ಧರಾಮಯ್ಯ ವಿರುದ್ಧ ಯಾವುದೇ ಹಗರಣದ ಆರೋಪವಿಲ್ಲ. ಸಿಎಂ ಬದಲಿಸಬೇಕು ಅಂದರೆ ಏನಾದ್ರೂ ಹಗರಣ ನಡೆದಿರಬೇಕು ಎಂಬುದಾಗಿ ಶಾಸಕ ಡಾ.ಯತೀಂದ್ರ ಸಿದ್ಧರಾಮಯ್ಯ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಸಿದ್ಧರಾಮಯ್ಯ ಅವರನ್ನು ಬದಲಿಸೋ ಪ್ರಶ್ನೆಯೇ ಇಲ್ಲ. ಅವರ ವಿರುದ್ಧ ಯಾವುದೇ ಅಕ್ರಮದ ಆರೋಪವಿಲ್ಲ. ಹಾಗಾಗಿ ಸಿಎಂ ಬದಲಾವಣೆ ಪ್ರಶ್ನೆಯೇ ಉದ್ಭವಿಸಲ್ಲ ಎಂಬುದಾಗಿ ತಿಳಿಸಿದರು.
ಯಾರೋ ಒಂದಿಬ್ರು ಸಿಎಂ ಬದಲಾವಣೆ ಆಗಬೇಕು ಅಂತಿದ್ದಾರೆ ಅಷ್ಟೇ. ಸಿಎಂ ಬದಲಾವಣೆ ಬಗ್ಗೆ ಹೈಕಮಾಂಡ್ ತೀರ್ಮಾನ ಕೈಗೊಳ್ಳಬೇಕು. ಪಕ್ಷದ ಕಾರ್ಯಕರ್ತನಾಗಿ, ಪರಿಷತ್ ಸದಸ್ಯನಾಗಿ ಹೇಳಬೇಕು ಅಂದರೇ ಈಗಿರುವ ಪರಿಸ್ಥಿತಿ ನೋಡಿದರೇ ಸಿದ್ಧರಾಮಯ್ಯ ಐದು ವರ್ಷ ಪೂರೈಸುತ್ತಾರೆ. ಅದರಲ್ಲಿ ನೋ ಡೌಟ್ಸ್ ಎಂದರು.
ಬೆಂಗಳೂರಿನ KSRTC ಕಚೇರಿಗೆ ದೆಹಲಿ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು, ಅಧಿಕಾರಿಗಳ ತಂಡ ಭೇಟಿ
ರೈಲುಗಳಲ್ಲಿ ‘ಹಲಾಲ್ ಮಾಂಸ’ ಮಾತ್ರ ಪೂರೈಕೆ ನಿಷೇಧ ; ವರದಿ ಕೋರಿ ರೈಲ್ವೆಗೆ NHRC ನೋಟಿಸ್








