ಬೆಂಗಳೂರು : ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್ 27 ರಂದು ಸಂಸದ ಪ್ರಜ್ವಲ ರೇವಣ್ಣ ವಿದೇಶಕ್ಕೆ ಹೋಗಿದ್ದಾನೆ. ಬಂಧನ ಆಗುತ್ತೇನೆ ಎಂದು ವಿದೇಶಕ್ಕೆ ಪ್ರಜ್ವಲ್ ರೇವಣ್ಣ ಹೋಗಿದ್ದಾನೆ. ಪ್ರಜ್ವಲ್ ರೇವಣ್ಣ ಪಾಸ್ಪೋರ್ಟ್ ರದ್ದತಿಗೆ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೆ ಆದರೆ ಇದುವರೆಗೂ ಕೇಂದ್ರ ಸರ್ಕಾರದಿಂದ ಯಾವುದೇ ಉತ್ತರ ಬಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಬೆಂಗಳೂರಿನ ಗೃಹ ಕಚೇರಿ ಕೃಷ್ಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏಪ್ರಿಲ್ 27 ರಂದು ಸಂಸದ ಪ್ರಜ್ವಲ ರೇವಣ್ಣ ವಿದೇಶಕ್ಕೆ ಹೋಗಿದ್ದಾನೆ. ಬಂಧನ ಆಗುತ್ತೇನೆ ಎಂದು ವಿದೇಶಕ್ಕೆ ಪ್ರಜ್ವಲ್ ರೇವಣ್ಣ ಹೋಗಿದ್ದಾನೆ. ಪಾಸ್ ಪೋರ್ಟ್ ರದ್ದು ಮಾಡಲು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೆ. ಆದರೆ ನಾನು ಬರೆದ ಪತ್ರಕ್ಕೆ ಕೇಂದ್ರ ಸರ್ಕಾರ ಇದುವರೆಗೂ ಉತ್ತರಿಸಿಲ್ಲ ಎಂದು ಅವರು ತಿಳಿಸಿದರು.
SIT ಅವರು ಕೋರ್ಟ್ ಅಲ್ಲಿ ವಾರೆಂಟ್ ಪಡೆದು ಪತ್ರ ಬರೆದಿದ್ದರು. ರಾಜ ತಾಂತ್ರಿಕ ಪಾಸ್ಪೋರ್ಟ್ ರದ್ದತಿಗೆ ಎಸ್ಐಟಿ ಸಹ ಪತ್ರ ಬರೆದಿತ್ತು. ನಿನ್ನೆ ನಾನು ಕೇಂದ್ರ ಸರ್ಕಾರಕ್ಕೆ ಎರಡನೇ ಪತ್ರ ಬರೆದಿದ್ದೇನೆ. ಎಸ್ ಐ ಟಿ ಅವರು ಎಲ್ಲ ರೀತಿಯ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಹೇಳಿದರು.
ಪ್ರಜ್ವಲ್ ಜೊತೆಗೆ ಕಾಂಗ್ರೆಸ್ ನಾಯಕರು ಮಾತಾಡಿದ್ದಾರೆ ಎಂದು ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ನನ್ನ ಜೊತೆ ಪ್ರಜ್ವಲ್ ಮಾತಾಡಿಲ್ಲ. ಆದರೆ ಆರ್. ಅಶೋಕ್ ಜೊತೆ ಮಾತನಾಡಿರಬಹುದು. ಪ್ರಜ್ವಲ್ ಅವರ ಪಕ್ಷದವರು ಹೀಗಾಗಿ ಅಶೋಕ್ ಜೊತೆ ಮಾತನಾಡಿರಬಹುದು ಎಂದು ಸಿದ್ದರಾಮಯ್ಯ ತಿಳಿಸಿದರು.
ಯಾವುದೇ ಕಾರಣಕ್ಕೂ ಫೋನ್ ಟ್ಯಾಪಿಂಗ್ ಮಾಡಿಲ್ಲ ಮಾಡುವುದು ಇಲ್ಲ.ಕರ್ನಾಟಕದಿಂದ ಯಾರು ಪ್ರಧಾನಿ ಆಗಲ್ಲ ಅಂತ ನಾನು ಹೇಳಿಲ್ಲ ಆದರೆ ನಾನು ಪ್ರಧಾನಿ ಆಗಲ್ಲ ಅಂತ ಹೇಳಿದ್ದೇನೆಂದು ಸಿಎಂ ಸ್ಪಷ್ಟನೆ ನೀಡಿದರು.