Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದ ಜನತೆಯ ಗಮನಕ್ಕೆ : ಇಲ್ಲಿದೆ ಕರ್ನಾಟಕದ 31 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಸಂಪರ್ಕ ವಿವರಗಳ ಪಟ್ಟಿ.!

ALERT : ಅತಿಯಾದ ನಿದ್ರೆ ಬರುತ್ತಿದೆಯೇ? ಇದು ಮಾರಕ ಕಾಯಿಲೆಗಳ ಸಂಕೇತವಿರಬಹುದು ಎಚ್ಚರ!

Money

ಕರ್ನಾಟಕ ಸೇರಿದಂತೆ ಅತಿಹೆಚ್ಚು ಸಾಲವಿರುವ ರಾಜ್ಯಗಳ ಸಂಪೂರ್ಣ ಮಾಹಿತಿ ಇಲ್ಲಿದೆ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ವಾಲ್ಮೀಕಿ ನಿಗಮದ ಪ್ರಕರಣ’ದಲ್ಲಿ ಯಾರನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ: ಸಚಿವ ಬಿ.ನಾಗೇಂದ್ರ ಸ್ಪಷ್ಟನೆ
KARNATAKA

‘ವಾಲ್ಮೀಕಿ ನಿಗಮದ ಪ್ರಕರಣ’ದಲ್ಲಿ ಯಾರನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ: ಸಚಿವ ಬಿ.ನಾಗೇಂದ್ರ ಸ್ಪಷ್ಟನೆ

By ವಸಂತ್‌ ಬಿ ಈಶ್ವರಗೆರೆ

ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ನಿಗಮದ ಕೇಂದ್ರ ಕಛೇರಿಯ ಅಧೀಕ್ಷಕರಾದ ಚಂದ್ರಶೇಖರ್ ರವರ ಆತ್ಮಹತ್ಯೆ ಪ್ರಕರಣ ನನಗೆ ಅತೀವ ನೋವು ತಂದಿದೆ ಈ ಹಣ ದುರುಪಯೋಗ ಪ್ರಕರಣದಲ್ಲಿ ನಮ್ಮ ಇಲಾಖೆ ಅಧಿಕಾರಿಗಳು ಹಾಗೂ ಬ್ಯಾಂಕ್ ಅಧಿಕಾರಿಗಳು ಯಾರೇ ಇರಲಿ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಕಾನೂನಿನ ಅಡಿಯಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ನಾಗೇಂದ್ರ ತಿಳಿಸಿದರು.

ಮಂಗಳವಾರ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಮುಖ್ಯ ಖಾತೆಯಲ್ಲಿ ಹಿಂದಿನ ಸಾಲಿನ ಹಾಗೂ 2024-25 ನೇ ಸಾಲಿನ ಯೋಜನೆಗಳಿಗೆ ಮೀಸಲಿಟ್ಟ 187 ಕೋಟಿ ಮೊತ್ತದಲ್ಲಿ 88 ಕೋಟಿ ಹಣವನ್ನು ನನಗೆ ಹಾಗೂ ನಿಗಮದ ಅಧ್ಯಕ್ಷರ ಗಮನಕ್ಕೂ ಬಾರದೇ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಎಂ.ಜಿ ರಸ್ತೆಯ ಶಾಖೆಯ ಅನಧಿಕೃತ ಖಾತೆಗೆ ವರ್ಗಾವಣೆ ಆಗಿರುತ್ತದೆ. ನಿನ್ನೆ ಪ್ರಕರಣ ಬೆಳಕಿಗೆ ಬಂದ ನಂತರ ಇಲಾಖೆ ಅಧಿಕಾರಗಳು ಕೂಡ ಇದು ನಮಗೆ ಯಾವುದೇ ರೀತಿಯ ಮಾಹಿತಿ ಇಲ್ಲದೆ ದುರುಪಯೋಗ ಆಗಿದೆ ಎಂದು ತಿಳಿಸಿದ್ದಾರೆ. ‘

ಇನ್ನು ವಾಲ್ಮೀಕಿ ನಿಗಮದ ಎಂ. ಡಿ ಜೆ. ಜೆ. ಪದ್ಮನಾಭ ಹಾಗೂ ಲೆಕ್ಕಾಧಿಕಾರಿ ಪರುಶುರಾಮ್ ಹಾಗೂ ಬ್ಯಾಂಕ್ ವ್ಯವಸ್ಥಾಪಕಿ ಶುಚಿಸ್ಮಿತಾ 3 ಜನ ನನ್ನ ಸಾವಿಗೆ ನೇರ ಕಾರಣರಾದವರು ಎಂದು ಸಾವಿನ ಹೇಳಿಕೆ ಪತ್ರದಲ್ಲಿ ಇದ್ದು ಈ ಕುರಿತು ನಿನ್ನೆ ಆರ್ಥಿಕ ಇಲಾಖೆಯ ಮುಖ್ಯ ಅಧಿಕಾರಿಗಳ ತಂಡ ನಿಗಮದ ಕೇಂದ್ರ ಕಚೇರಿಗೆ ತೆರಳಿ ಎಲ್ಲಾ ಲೆಕ್ಕಪತ್ರಗಳನ್ನು ಸುಧೀರ್ಘವಾಗಿ ಪರಿಶೀಲನೆ ನಡೆಸಿದ ವೇಳೆ ನಿಗಮದ ಅಧಿಕಾರಿಗಳಿಗೆ ತಿಳಿಯದ ನಕಲು ಸಹಿ ಬಳಸಿ ದೊಡ್ಡ ಮೊತ್ತದ ಹಣ ವರ್ಗಾವಣೆ ಆಗಿದೆ ಎಂದು ತಿಳಿದು ಬಂದಿದೆ.

ಈಗಾಗಲೇ ಸರ್ಕಾರದ ಮುಖ್ಯಕಾರ್ಯದರ್ಶಿಗಳು ಹಾಗೂ ನಮ್ಮ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ನಿಗಮದ ಎಂ. ಡಿ. ಪದ್ಮನಾಭ ಅವರಿಂದ ನಿನ್ನೆ ಸರ್ಕಾರಕ್ಕೆ ವರದಿ ಪಡೆದಿದ್ದು ನಿನ್ನೆ ಮುಖ್ಯಮಂತ್ರಿಗಳು ಇದರ ಬಗ್ಗೆ ವರದಿ ಪರಿಶೀಲನೆ ನಡೆಸಿದ್ದಾರೆ, ಇದರ ಬಗ್ಗೆ ಬ್ಯಾಂಕ್ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ.ಆದರೆ ಎಫ್.ಎಸ್.ಎಲ್ ವರದಿ ಬಂದರೆ ಸಹಿ ನಕಲು ಆಗಿದೆಯಾ ಅಥವಾ ಇವರೇ ಈ ಪ್ರಕರಣದಲ್ಲಿ ಶಾಮಿಲು ಆಗಿದ್ದಲ್ಲಿ ಕೆಲಸದಿಂದ ವಜಾಗೊಳಿಸಿ ಕಾನೂನು ರೀತಿಯಲ್ಲಿ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರ ಸರ್ಕಾರವು ಯಾವುದೇ ಇಂತಹ ಪ್ರಕರಣಗಳನ್ನು ಸಹಿಸಿಕೊಳ್ಳಲ್ಲ ಇನ್ನು ನಾನು ಕೂಡ ಈಗಾಗಲೇ ಈ ಪ್ರಕರಣದಲ್ಲಿ ದುರುಪಯೋಗ ಆಗಿರುವ ಎಲ್ಲಾ ಹಣವನ್ನು ವಾಪಾಸ್ ನಿಗಮದ ಖಾತೆಗೆ ಪಡೆದುಕೊಳ್ಳಲು ಬ್ಯಾಂಕ್ ಗೆ ಅಂತಿಮ ಗಡುವು ನೀಡಿ ಎಂದು ನಿನ್ನೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೆ. ಈಗಾಗಲೇ 88 ಕೋಟಿ ಹಣದ ಪೈಕಿ 28 ಕೋಟಿ ಹಣವು ನಮ್ಮ ನಿಗಮದ ಖಾತೆಗೆ ಮರುಪಾವತಿ ಆಗಿದೆ ಇನ್ನುಳಿದ ಸುಮಾರು 60ಕೋಟಿ ಹಣವನ್ನು ಅತೀ ಶೀಘ್ರದಲ್ಲಿ ವಾಪಸ್ ಪಡೆಯುತ್ತೇವೆ ಬಡವರ ಕಲ್ಯಾಣಕ್ಕೆ ಮಿಸಲಿಟ್ಟ ಹಣವನ್ನು ಕಾನೂನು ಬಾಹಿರವಾಗಿ ಯಾರು ಪಡೆಯದಂತೆ ಕಾಪಾಡುವುದು ನನ್ನ ಹಾಗೂ ನಿಗಮದ ಅಧ್ಯಕ್ಷರ ಆದ್ಯ ಕರ್ತವ್ಯವಾಗಿದೆ ಎಂದಿದ್ದಾರೆ.

ಈಗಾಗಲೇ ಸಿ. ಐ. ಡಿ ಅಧಿಕಾರಿಗಳು ವರದಿ ಪಡೆಯಲು ತನಿಖೆ ಶುರುಮಾಡಿದ್ದು. ವರದಿ ನಮ್ಮ ಸರ್ಕಾರಕ್ಕೆ ಸಲ್ಲಿಕೆಯಾದ ತಕ್ಷಣವೇ ಈ ಪ್ರಕರಣದಲ್ಲಿ ಯಾರು ಆರೋಪಿ ಎಂದು ಸಾಬೀತು ಅವರನ್ನು ಕೆಲಸದಿಂದ ವಜಾಗೊಳಿಸಿ ಕಾನೂನಿನ ಅಡಿಯಲ್ಲಿ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಕಾಂಗ್ರೆಸ್ಸಿನ ಪುಡಿ ರೌಡಿಗಳು ಕನ್ನಡಿಗರನ್ನು ಒಡೆದು ಆಳೋಕೆ ಕರ್ನಾಟಕದಲ್ಲಿ ಟೂಲ್ ಕಿಟ್ ಅಜೆಂಡಾ ಪ್ರದರ್ಶನ: BJP

BREAKING: ದೆಹಲಿ ಗಲಭೆ ಪ್ರಕರಣ: ‘ಉಮರ್ ಖಾಲಿದ್’ಗೆ ಜಾಮೀನು ನಿರಾಕರಿಸಿದ ಕೋರ್ಟ್ | Delhi Riots conspiracy case

Share. Facebook Twitter LinkedIn WhatsApp Email

Related Posts

ರಾಜ್ಯದ ಜನತೆಯ ಗಮನಕ್ಕೆ : ಇಲ್ಲಿದೆ ಕರ್ನಾಟಕದ 31 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಸಂಪರ್ಕ ವಿವರಗಳ ಪಟ್ಟಿ.!

2 Mins Read

ALERT : ಅತಿಯಾದ ನಿದ್ರೆ ಬರುತ್ತಿದೆಯೇ? ಇದು ಮಾರಕ ಕಾಯಿಲೆಗಳ ಸಂಕೇತವಿರಬಹುದು ಎಚ್ಚರ!

2 Mins Read
Money

ಕರ್ನಾಟಕ ಸೇರಿದಂತೆ ಅತಿಹೆಚ್ಚು ಸಾಲವಿರುವ ರಾಜ್ಯಗಳ ಸಂಪೂರ್ಣ ಮಾಹಿತಿ ಇಲ್ಲಿದೆ

3 Mins Read
Recent News

ರಾಜ್ಯದ ಜನತೆಯ ಗಮನಕ್ಕೆ : ಇಲ್ಲಿದೆ ಕರ್ನಾಟಕದ 31 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಸಂಪರ್ಕ ವಿವರಗಳ ಪಟ್ಟಿ.!

ALERT : ಅತಿಯಾದ ನಿದ್ರೆ ಬರುತ್ತಿದೆಯೇ? ಇದು ಮಾರಕ ಕಾಯಿಲೆಗಳ ಸಂಕೇತವಿರಬಹುದು ಎಚ್ಚರ!

Money

ಕರ್ನಾಟಕ ಸೇರಿದಂತೆ ಅತಿಹೆಚ್ಚು ಸಾಲವಿರುವ ರಾಜ್ಯಗಳ ಸಂಪೂರ್ಣ ಮಾಹಿತಿ ಇಲ್ಲಿದೆ

BREAKING : ಮಂಡ್ಯದಲ್ಲಿ ಘೋರ ದುರಂತ : ಕೆರೆಯಲ್ಲಿ ಈಜಲು ಹೋಗಿ ಇಬ್ಬರು ಯುವಕರ ದುರ್ಮರಣ!

State News
KARNATAKA

ರಾಜ್ಯದ ಜನತೆಯ ಗಮನಕ್ಕೆ : ಇಲ್ಲಿದೆ ಕರ್ನಾಟಕದ 31 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಸಂಪರ್ಕ ವಿವರಗಳ ಪಟ್ಟಿ.!

By kannadanewsnow57 KARNATAKA 2 Mins Read

ಬೆಂಗಳೂರು: ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಸಾರ್ವಜನಿಕರಿಗೆ ಜಿಲ್ಲಾ ಮಟ್ಟದ ಮಾಹಿತಿ ಮತ್ತು ದೂರುಗಳ ಸಲ್ಲಿಕೆಗೆ ಅನುಕೂಲವಾಗುವಂತೆ ಕರ್ನಾಟಕದ ಎಲ್ಲಾ 31…

ALERT : ಅತಿಯಾದ ನಿದ್ರೆ ಬರುತ್ತಿದೆಯೇ? ಇದು ಮಾರಕ ಕಾಯಿಲೆಗಳ ಸಂಕೇತವಿರಬಹುದು ಎಚ್ಚರ!

Money

ಕರ್ನಾಟಕ ಸೇರಿದಂತೆ ಅತಿಹೆಚ್ಚು ಸಾಲವಿರುವ ರಾಜ್ಯಗಳ ಸಂಪೂರ್ಣ ಮಾಹಿತಿ ಇಲ್ಲಿದೆ

BREAKING : ಮಂಡ್ಯದಲ್ಲಿ ಘೋರ ದುರಂತ : ಕೆರೆಯಲ್ಲಿ ಈಜಲು ಹೋಗಿ ಇಬ್ಬರು ಯುವಕರ ದುರ್ಮರಣ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.