ಬೆಂಗಳೂರು : ಪ್ರಜ್ವಲ್ ಅಶೀಲ ವಿಡಿಯೋ ಪೆನ್ ಡ್ರೈವ್ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೆನ್ನೆ ವಕೀಲ ದೇವರಾಜೇಗೌಡ ಡಿಸಿಎಂ ಡಿಕೆ ಶಿವಕುಮಾರ್ ಅವರು ಕೋಟಿ ಆಫರ್ ಆರೋಪ ಮಾಡಿದ್ದರು. ಇದೀಗ ಈ ಒಂದು ವಿಷಯಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬೀ ವೈ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದು, ಪ್ರಜ್ವಲ್ ಕೇಸ್ ನಲ್ಲಿ ಯಾರನ್ನು ಪ್ರೊಟೆಕ್ಟ್ ಮಾಡುವ ಪ್ರಶ್ನೆಯೇ ಇಲ್ಲ. ಹಾಗಾಗಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಈ ವಿಚಾರದಲ್ಲಿ ಯಾವುದೇ ಪಕ್ಷ ಮತ್ತೊಂದು ಚರ್ಚೆ ಇಲ್ಲ.ಘಟನೆ ನಡೆದಿರುವುದು ಅಕ್ಷಮ್ಯ ಅಪರಾಧವಾಗಿದೆ. ಪೆನ್ ಡ್ರೈವ್ ಹಿಂದಿರುವವರಿಗೂ ಸರಿಯಾದ ಶಿಕ್ಷೆ ಆಗಬೇಕು. ಇಲ್ಲಿ ಯಾರನ್ನು ಪ್ರೊಟೆಕ್ಟ್ ಮಾಡುವ ಪ್ರಶ್ನೆಯೇ ಇಲ್ಲ. ಇದರ ಹಿಂದಿರುವವರ ಹೆಸರುಗಳು ಬೆಳಗೆಗೆ ಬರಬೇಕು ಘಟಾನುಘಟಿಗಳ ಹೆಸರು ಕೇಳಿ ಬರುತ್ತಿರುವುದರಿಂದ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.
ದೇವರಾಜ ಗೌಡ ದಿನಕ್ಕೊಂದು ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಸರಕಾರಕ್ಕೆ ಗಂಭೀರತೆ ಇದ್ದರೆ ಸಿಬಿಐ ತನಿಖೆಗೆ ಕೊಡಬೇಕು.ಈ ಪ್ರಕರಣವನ್ನು ಚರ್ಚಾ ವಸ್ತುವನ್ನಾಗಿ ಬಳಸಿಕೊಳ್ಳುವುದು ಸರಿಯಲ್ಲ. ಯಾವುದೇ ಪಕ್ಷ ಅಂತ ಅಲ್ಲ ವಿಚಾರ ಅಕ್ಷಮ್ಯ ಅಪರಾಧ ಪ್ರಕರಣವನ್ನು ಕೂಡಲೇ ಸಿಬಿಐಗೆ ವಹಿಸಬೇಕು ಎಂದು ಅವರು ಒತ್ತಾಯಿಸಿದರು.
ಆರು ಪದವೀಧರ ಶಿಕ್ಷಕರ ಕ್ಷೇತ್ರಗಳ ಪೈಕಿ ಬಿಜೆಪಿ 4 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ಬೆಂಗಳೂರಿನಲ್ಲಿ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ ಹೇಳಿಕೆ ನೀಡಿದರು. ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಸುರೇಶ್ ಸಜ್ಜನ್ ನಾಮಪತ್ರ ಸಲ್ಲಿಸಿದ್ದಾರೆ.ಇಂದು ಬಿ ಎಸ್ ಯಡಿಯೂರಪ್ಪ ಭೇಟಿಯಾಗಿ ಚುನಾವಣಾ ಕಣದಿಂದ ಹಿಂದೆ ಸರಿರುವುದಾಗಿ ಸುರೇಶ ಸಜ್ಜನ್ ಹೇಳಿದ್ದಾರೆ.ದಕ್ಷಿಣ ಕ್ಷೇತ್ರದಲ್ಲಿ ಲಿಂಗರಾಜಗೌಡ ಹೆಸರು ಘೋಷಿಸಲಾಗಿದೆ. ಅವರನ್ನು ಮನವೊಲಿಸಿ, ನಾಮಪತ್ರ ವಾಪಸ್ ಪಡೆಯುವುದಾಗಿ ಹೇಳಿದ್ದಾರೆ ಬೇರೆ ಕ್ಷೇತ್ರಗಳ ವಿಚಾರ ಇಂದು ಅಥವಾ ನಾಳೆಯೊಳಗೆ ಬಗೆಹರಿಯಲಿದೆ ಎಂದು ಬಿ ವೈ ವಿಜಯೇಂದ್ರ ತಿಳಿಸಿದರು.