ವಿಜಯನಗರ : ರಾಜ್ಯದಲ್ಲಿ ಸಿಎಂ ಕುರ್ಚಿಗಾಗಿ ಭಾರಿ ದೊಡ್ಡ ಚರ್ಚೆ ನಡೆಯುತ್ತಿದ್ದು, ಡಿಸಿಎಂ ಡಿಕೆ ಶಿವಕುಮಾರ್ ಜೊತೆಗೆ ಹೋಗೋ ಪ್ರಶ್ನೆಯೇ ಇಲ್ಲ. ಅಲ್ಲದೆ ನಮಗೆ ಯಾವುದೇ ಆಫರ್ ಇಲ್ಲ. ಹಾಗಾಗಿ ಚುನಾವಣೆಗೆ ಹೋಗುವುದು ನಮ್ಮ ನಿಲುವು ಎಂದು ವಿಪಕ್ಷ ನಾಯಕ ಆರ್ ಅಶೋಕ ಸ್ಪಷ್ಟಪಡಿಸಿದ್ದಾರೆ.
ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಡಿಕೆ ಶಿವಕುಮಾರ್ ಹಿಂದೆ ಯಾರಿದ್ದಾರೆ ಗೌಪ್ಯ ಮತದಾನ ಮಾಡಿ ಅಂತಿದ್ದಾರೆ ಗೌಪ್ಯ ಮತದಾನ ಮಾಡಿ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಿದ್ದಾರೆ ಕಾಂಗ್ರೆಸ್ ಪಕ್ಷ ಸತ್ತ ಹೆಣ ಇದ್ದಂತೆ ಸಿದ್ದರಾಮಯ್ಯ ಹಿಂದೆ ಡಿಕೆ ಶಿವಕುಮಾರ್ ಮುಂದೆ ಹೊತ್ತುಕೊಂಡು ಹೋಗಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಒಕ್ಕಲಿಗ ಎಂದು ಯಾರು ಹೇಳಿದರು? ನಮಗೂ ಅವರಿಗೂ ಸಂಬಂಧ ಇಲ್ಲ ಎಂದು ಪ್ರತಿಪಕ್ಷ ನಾಯಕ ಅಶೋಕ್ ಹೇಳಿಕೆ ನೀಡಿದರು.








