ಬೆಂಗಳೂರು : ಕರ್ನಾಟಕದಲ್ಲಿ ಕನ್ನಡಿಗರಿಗೆಲ್ಲಾ ಸುರಕ್ಷತೆ ಇಲ್ಲದಂತಾಗಿದೆ. ಬೇರೆ ಬೇರೆ ರಾಜ್ಯದಿಂದ ಕರ್ನಾಟಕಕ್ಕೆ ಆಗಮಿಸಿ ಇಲ್ಲಿಯೇ ಜೀವನ ರೂಪಿಸಿಕೊಂಡು, ಅವರಿಗೆ ಇಲ್ಲಿಯ ಅನ್ನ ನೀರು ಬೇಕೇ ಹೊರತು, ಕನ್ನಡಿಗರು ಮಾತ್ರ ಬೇಡ ಅನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹೌದು ಕನ್ನಡ ಮಾತನಾಡಿದ್ದಕ್ಕೆ ಯುಪಿ ಗ್ಯಾಂಗ್ ನಿಂದ ಕನ್ನಡಿಗ ಕಾರ್ಮಿಕನ ಮೇಲೆ ಹಲ್ಲೆ ನಡೆಸಲಾಗಿದೆ. ಬೆಂಗಳೂರಿನ ಆನೇಕಲ್ ಪಟ್ಟಣದಲ್ಲಿ ಈ ಒಂದು ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಹಿಂದಿ ಮಾತಾಡುವಂತೆ ಕಾರ್ಮಿಕನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಶಿವಲಿಂಗ (40) ಹಲ್ಲೆಗೆ ಒಳಗಾದಂತಹ ವ್ಯಕ್ತಿ ಎಂದು ತಿಳಿದುಬಂದಿದೆ.
ಶಿವಲಿಂಗ ಕೈಮಗ್ಗದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ. ಬೆಳಿಗ್ಗೆ ಕೆಲಸ ಮಾಡುವ ವೇಳೆ ಸ್ವಲ್ಪ ಕಾಲು ತೆಗಿ ಎಂದು ಯುಪಿ ಮೂಲದ ಕಾರ್ಮಿಕನಿಗೆ ಹೇಳಿದ್ದಕ್ಕೆ, ಹಿಂದಿ ಮಾತನಾಡು ಕನ್ನಡ ಅಲ್ಲ ಎಂದು ನನ್ನ ಮೇಲೆ ಉತ್ತರ ಪ್ರದೇಶದ ಮೂಲದ ಕಾರ್ಮಿಕರು ಹಲ್ಲೆ ಮಾಡಿದ್ದಾರೆ. ಮಾಲಿಕರಿಗೆ ನಾವು ಎಷ್ಟು ಮುಖ್ಯವೋ ಅವರು ಕೂಡ ಅಷ್ಟೇ ಮುಖ್ಯವಾಗಿದ್ದಾರೆ. ಹೀಗಾಗಿ ಅವರು ಏನು ಮಾಡದ ಸ್ಥಿತಿಯಲ್ಲಿ ಇದ್ದಾರೆ ಎಂದು ಹಲ್ಲೆಗೆ ಒಳಗಾದಂತಹ ಶಿವಲಿಂಗ ಅಳಲು ತೋಡಿಕೊಂಡಿದ್ದಾರೆ.