ಹುಬ್ಬಳ್ಳಿ : ಹೆಚ್ಚು ಸ್ಥಾನ ಗೆದ್ದರೆ ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿ ಎಂದು ಯತಿಂದ್ರ ಹೇಳಿ ವಿಚಾರವಾಗಿ ಪ್ರವಾಸೋದ್ಯಮ ಸಚಿವ ಹೆಚ್ ಕೆ ಪಾಟೀಲ್ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿ ಕಾಂಗ್ರೆಸ್ ಸಚಿನ ಪಾರ್ಟಿ ನಾವು ಶಿಸ್ತನ್ನು ಪಾಲಿನ ಮಾಡುತ್ತೇವೆ ಸದ್ಯ ಸಿಎಂ ಬಲಾವಣೆ ಯಾವುದೇ ವಿಷಯ ಪ್ರಸ್ತಾಪ ಇಲ್ಲ ಎಂದು ತಿಳಿಸಿದರು.
ಹುಬ್ಬಳ್ಳಿಯಲ್ಲಿ ಸುದಿಗಾರರೊಂದಿಗೆ ಮಾತನಾಡಿದ ಸಚಿವ ಹೆಚ್ ಕೆ ಪಾಟೀಲ್, ಕಾಂಗ್ರೆಸ್ ಶಿಸ್ತಿನ ಪಾರ್ಟಿ ನಾವು ಶಿಸ್ತನ್ನು ಪಾಲನೆ ಮಾಡುತ್ತೇವೆ ಸದ್ಯ ಸಿಎಂ ಬದಲಾವಣೆ ಯಾವುದೇ ವಿಷಯ ಪ್ರಸ್ತಾಪ ಇಲ್ಲ ಈಗ ಆ ವಿಷಯ ಚರ್ಚೆ ಮಾಡುವುದು ಅನವಶ್ಯಕ ಹಾಗೂ ಅನಗತ್ಯ ಅಭಿವೃದ್ಧಿ ವಿಚಾರದಲ್ಲಿ ಸಿದ್ದರಾಮಯ್ಯ ಹೆಸರು ಕೇಳಿ ಬರುತ್ತಿದೆ. ಇದನ್ನು ಡೈವರ್ಟ್ ಮಾಡಲು ಈ ರೀತಿ ವಿಷಯ ಹೊರಬರುತ್ತಿದೆ ಎಂದು ಹುಬ್ಬಳಿಯಲ್ಲಿ ಪ್ರವಾಸೋದ್ಯಮ ಸಚಿವ ಎಚ್ ಕೆ ಪಾಟೀಲ್ ತಿಳಿಸಿದರು.
ಕಾಂಗ್ರೆಸ್ ತತ್ವ ಸಿದ್ಧಾಂತ ಒಪ್ಪಿ ಬಹಳಷ್ಟು ಜನ ಪಕ್ಷಕ್ಕೆ ಬರುತ್ತಾರೆ. ಮನಸಿದ್ದವರು ಕಾಂಗ್ರೆಸ್ ಪಕ್ಷಕ್ಕೆ ಸೇರಲು ಇದು ಪರ್ವಕಾಲ. ರಾಷ್ಟ್ರದ ಹಿತ ದೃಷ್ಟಿಯಿಂದ ಮುನೇನಕೊಪ್ಪ ಪಕ್ಷದತ್ತ ನೋಡಬೇಕು. ಇಂಡಿಯಾ ಒಕ್ಕೂಟದ ಸಾರಥ್ಯ ನಮ್ಮ ಮಲ್ಲಿಕಾರ್ಜುನ ಖರ್ಗೆಗೆ ಸಿಕ್ಕಿದೆ. ಇಂಡಿಯಾ ಒಕ್ಕೂಟದಲ್ಲಿ ಯಾವುದೇ ಅಪಸ್ವರ ಇಲ್ಲ ಎಂದು ಸಚಿವ ಎಚ್ ಕೆ ಪಾಟೀಲ್ ತಿಳಿಸಿದರು.