ಕಾನ್ಪುರ : ಕಾನ್ಪುರದ ಸರ್ಸಯ್ಯಾ ಘಾಟ್ನಲ್ಲಿ ಪಿಟ್ಬುಲ್ ಹಸುವಿನ ಮೇಲೆ ದಾಳಿ ಮಾಡಿದ ಬಳಿಕ ಮೇಯರ್ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಕಾನ್ಪುರ ನಗರ ವ್ಯಾಪ್ತಿಯಲ್ಲಿ ಪಿಟ್ಬುಲ್ ಮತ್ತು ರಾಟ್ವೀಲರ್ ತಳಿಯ ನಾಯಿಗಳನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
BREAKING NEWS : ‘ಕೋಡಾ ಪೇಮೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್’ನ 3 ಸ್ಥಳಗಳ ಮೇಲೆ ಇ.ಡಿ ದಾಳಿ |ED raids
ಸಾರ್ವಜನಿಕರನ್ನು ರಕ್ಷಿಸುವ ಸಲುವಾಗಿ, ಪಿಟ್ಬುಲ್ ಮತ್ತು ರಾಟ್ವೀಲರ್ ನಾಯಿಗಳನ್ನು ನಗರ ವ್ಯಾಪ್ತಿಯಲ್ಲಿ ನಿಷೇಧಿಸಲಾಗಿದೆ. ಸರ್ಸಯ್ಯಾ ಘಾಟ್ನಲ್ಲಿ ಪಿಟ್ಬುಲ್ ನಾಯಿ ಹಸುವಿನ ಮೇಲೆ ದಾಳಿ ಮಾಡಿದ ಘಟನೆಯ ನಂತರ ಮತ್ತು ಪಿಟ್ಬುಲ್ ನಾಯಿ ದಾಳಿಯ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕಾನ್ಪುರದ ಮೇಯರ್ ಪ್ರಮೀಳಾ ಪಾಂಡೆ ಹೇಳಿದ್ದಾರೆ.
ಇತ್ತೀಚೆಗೆ, ಉತ್ತರ ಪ್ರದೇಶದಲ್ಲಿ ಪಿಟ್ಬುಲ್ ನಾಯಿಯೊಂದು ಹಸುವಿನ ಮೇಲೆ ದಾಳಿ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವಿಡಿಯೋದಲ್ಲಿ, ನಾಯಿ ಹಸುವಿನ ಮೇಲೆ ದಾಳಿ ಮಾಡಿತ್ತು. ಪರಿಣಾಮ ಹಸುವಿನ ದವಡೆ ಮತ್ತು ಮೂಖಕ್ಕೆ ಗಾಯಗಳಾಗಿತ್ತು.
ಸರ್ಸಯ್ಯ ಘಾಟ್ ನಿವಾಸಿಗಳ ಬಳಿ ಒಟ್ಟು ನಾಲ್ಕು ಪಿಟ್ಬುಲ್ ನಾಯಿಗಳು ಉಳಿದಿವೆ ಎಂದು ಮೂಲಗಳು ತಿಳಿಸಿವೆ. ಅವರು ತಮ್ಮ ಮಕ್ಕಳು, ಜಾನುವಾರು ಮತ್ತು ಸಾಕುಪ್ರಾಣಿಗಳ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ.
ಇದಕ್ಕೂ ಮುನ್ನ ಲಕ್ನೋದಲ್ಲಿ ಮಹಿಳೆಯೊಬ್ಬರು ಆಕೆಯ ಮಗನ ಒಡೆತನದ ಪಿಟ್ಬುಲ್ನಿಂದ ಕೊಚ್ಚಿ ಸಾವನ್ನಪ್ಪಿದ್ದರು.
ಮತ್ತೊಂದು ಘಟನೆಯಲ್ಲಿ, ಯುಪಿಯ ಗಾಜಿಯಾಬಾದ್ನಲ್ಲಿ ಸಾಕುಪ್ರಾಣಿ ಪಿಟ್ಬುಲ್, 11 ವರ್ಷದ ಬಾಲಕನ ಮೇಲೆ ದಾಳಿ ಮಾಡಿತ್ತು.
BIG BREAKING NEWS: ‘15000 ಶಾಲಾ ಶಿಕ್ಷಕ’ರ 1:2 ದಾಖಲಾತಿ ಪರಿಶೀಲನಾ ಪಟ್ಟಿ ಪ್ರಕಟ | Teacher Recruitment