ಕಲಬುರ್ಗಿ : ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಭಾರಿ ಚರ್ಚೆಯಾಗುತ್ತಿದ್ದು ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲೂ ಕೂಡ ಬಿಜೆಪಿ ನಾಯಕರು ಸಿಎಂ ಸಿದ್ದರಾಮಯ್ಯ ಅವರನ್ನು ನಾಯಕತ್ವ ಬದಲಾವಣೆ ವಿಚಾರವಾಗಿ ಕೆಣಕಿದ್ದರು ಅವರಿಗೆ ಈಗಲೂ ನಾನೇ ಸಿಎಂ ಮುಂದೆಯೂ ನಾನೇ ಸಿಎಂ ಆಗಿರುತ್ತೇನೆ ಅಂತ ಖಡಕ್ ತಿರುಗೇಟು ನೀಡಿದ್ದರು.
ಇದೀಗ ಕಲ್ಬುರ್ಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಪಕ್ಷ ಯಾರೊಬ್ಬ ನಾಯಕನಿಂದ ಬೆಳೆದಿಲ್ಲ ನಾನೇ ಪಕ್ಷ ಕಟ್ಟಿದ್ದೇನೆ ಎಂದು ಯಾರು ಹೇಳಬಾರದು ಕಾಂಗ್ರೆಸ್ ಪಕ್ಷ ಕಾರ್ಯಕರ್ತರಿಂದ ಕಟ್ಟಿದ ಪಕ್ಷ ಅಂದಮೇಲೆ ಎಲ್ಲರ ಪಾತ್ರವೂ ಕೂಡ ಇರುತ್ತದೆ ಯಾರು ಒಬ್ಬರಿಂದಲೇ ಪಕ್ಷ ಇದೆ ಎನ್ನಬಾರದು ಹೈಕಮಾಂಡ್ ಯಾವ ಗೊಂದಲವು ಮಾಡುತ್ತಿಲ್ಲ ಆದರೆ ಇಲ್ಲಿನ ನಾಯಕರು ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಎಂದು ಖಡಕ್ ಸಂದೇಶ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷ ಯಾವಾಗಲೂ ಕೂಡ ಯಾರೇ ಲೀಡರ್ ಬಂದರು, ಕಾಂಗ್ರೆಸ್ ಕಾರ್ಯಕರ್ತರು ಸಪೋರ್ಟ್ ಮಾಡುತ್ತಾರೆ. ಅದಕ್ಕೆ ಯಾರು ನನ್ನಿಂದ ಆಗಿದೆ ನಾನು ಪಕ್ಷ ಕಟ್ಟಿದೀನಿ ಅಂತ ಹೇಳಬಾರದು ಕೆಲವು ಕಾರ್ಯಕರ್ತರು ಕೂಡ ಪಕ್ಷ ಇವರು ಕಟ್ಟಿದ್ದಾರೆ ಅವರು ಕಟ್ಟಿದ್ದಾರೆ ಅಂತ ಹೇಳುತ್ತಿರುತ್ತಾರೆ. ಹಾಗಾಗಿ ಅದನ್ನ ಬಿಟ್ಟುಬಿಡ








