Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಐದು ಹುಲಿ ಸಾವು ಪ್ರಕರಣ: ರಾಜ್ಯ ಸರ್ಕಾರದಿಂದ ಡಿಸಿಎಫ್, ಎಸಿಎಫ್ ಗಳಿಗೆ ಕಡ್ಡಾಯ ರಜೆ ನೀಡಿ ಆದೇಶ

30/06/2025 7:08 PM

BREAKING: ನಾಳೆ ಮಧ್ಯಾಹ್ನ 1 ಗಂಟೆಗೆ ‘ಕರ್ನಾಟಕ ದ್ವಿತೀಯ PUC ಪರೀಕ್ಷೆ-3’ರ ಫಲಿತಾಂಶ ಪ್ರಕಟ | Karnataka PUC Exam-3 Results

30/06/2025 6:55 PM

BREAKING ; ‘BCCI’ನಿಂದ 10.65 ಕೋಟಿ ರೂ. ಪರಿಹಾರ ಕೋರಿ ‘ಲಲಿತ್ ಮೋದಿ’ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ‘ಸುಪ್ರೀಂ ಕೋರ್ಟ್’

30/06/2025 6:54 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಉಪ ಚುನಾವಣೆ ಸೋಲಿನಿಂದ ಯಾರು ಎದೆಗುಂದಬೇಕಿಲ್ಲ: ಬಿಜೆಪಿ ಕಾರ್ಯಕರ್ತರಿಗೆ ಬಿ.ವೈ.ವಿಜಯೇಂದ್ರ ಪತ್ರ
KARNATAKA

ಉಪ ಚುನಾವಣೆ ಸೋಲಿನಿಂದ ಯಾರು ಎದೆಗುಂದಬೇಕಿಲ್ಲ: ಬಿಜೆಪಿ ಕಾರ್ಯಕರ್ತರಿಗೆ ಬಿ.ವೈ.ವಿಜಯೇಂದ್ರ ಪತ್ರ

By kannadanewsnow0926/11/2024 11:27 AM

ಬೆಂಗಳೂರು: ರಾಜ್ಯದ ಮೂರು ಉಪ ಚುನಾವಣೆಯಲ್ಲಿ ಬಿಜೆಪಿ ಸೋಲಿನಿಂದಾಗಿ ಯಾರೂ ಎದೆಗುಂದಬೇಕಿಲ್ಲ. ಸರ್ಕಾರದ ಪ್ರಭಾವವನ್ನು ಆಧರಿಸಿ ಈ ಚುನಾವಣಾ ಫಲಿತಾಂಶಗಳು ಹೊರಹೊಮ್ಮುತ್ತವೆ ಎಂಬುದಾಗಿ ಬಿಜೆಪಿ ಕಾರ್ಯಕರ್ತರಿಗೆ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಪತ್ರದಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ಬಿಜೆಪಿ ಕಾರ್ಯಕರ್ತರಿಗೆ ಪತ್ರ ಬರೆದಿರುವಂತ ಅವರು, ಅದರಲ್ಲಿ ಸಹೃದಯ ಕಾರ್ಯಕರ್ತ ಬಂಧುಗಳೇ, ಉಪಚುನಾವಣೆ ಫಲಿತಾಂಶಗಳು ಪಕ್ಷ ಸಂಘಟನೆಯ ಸಾಮರ್ಥ್ಯ ಹಾಗೂ ಪ್ರಭಾವವನ್ನು ಬಿಂಬಿಸುವ ಅಳತೆಗೋಲಾಗಿರುವುದಿಲ್ಲ. ಸ್ಥಳೀಯ ಸಮಸ್ಯೆಗಳು ಹಾಗೂ ಸರ್ಕಾರದ ಪ್ರಭಾವವನ್ನು ಆಧರಿಸಿ ಈ ಚುನಾವಣಾ ಫಲಿತಾಂಶಗಳು ಹೊರಹೊಮ್ಮುತ್ತವೆ.

ಸದ್ಯ ರಾಜ್ಯದಲ್ಲಿ ನಡೆದ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ನಮ್ಮ ಪಕ್ಷ ಎರಡು ಕ್ಷೇತ್ರಗಳಲ್ಲಿ, ಮಿತ್ರ ಪಕ್ಷ ಜೆಡಿಎಸ್ ಒಂದು ಕ್ಷೇತ್ರದಲ್ಲಿ ಪರಾಜಯಗೊಂಡಿರುವ ಕಾರಣದಿಂದ ನಾವ್ಯಾರೂ ಎದೆಗುಂದಬೇಕಿಲ್ಲ. ನಿರೀಕ್ಷೆಯಂತೆ ಆಡಳಿತ ಪಕ್ಷ ಕಾಂಗ್ರೆಸ್‌ನ ಅಧಿಕಾರ ದುರುಪಯೋಗ ಹಾಗೂ ಆಮಿಷಗಳು ಮತದಾರರನ್ನು ದಿಕ್ಕು ತಪ್ಪಿಸುವ ನಿಟ್ಟಿನಲ್ಲಿ ಪರಿಣಾಮ ಬೀರಿದೆ ಎಂಬುದು ನಿಸ್ಸಂಶಯ, ಆದರೂ ಉಪಚುನಾವಣೆಯ ಈ ಸೋಲನ್ನು ನಾವು ಸಕಾರಾತ್ಮಕವಾಗಿಯೇ ಸ್ವೀಕರಿಸೋಣ, ಈ ಫಲಿತಾಂಶ ಭವಿಷ್ಯತ್ತಿನಲ್ಲಿ ನಮಗೆ ಮುಂದಿರುವ ಸವಾಲುಗಳನ್ನು ಎಚ್ಚರಿಸುವ ಸಂಕೇತವೂ ಆಗಿದೆ ಎಂದು ಭಾವಿಸೋಣ.

ಭಾರತೀಯ ಜನತಾ ಪಾರ್ಟಿ ಅಧಿಕಾರದ ಬೆನ್ನು ಹತ್ತಿ ರಾಜಕಾರಣ ಮಾಡುವುದಕ್ಕಾಗಿ ಜನ್ಮತಾಳಿದ್ದಲ್ಲ. ಉದಾತ್ತ ಉದ್ದೇಶ ಹಾಗೂ ಗುರಿಯನ್ನಿಟ್ಟುಕೊಂಡು ಯೋಜಿತವಾಗಿ ಬೆಳೆದು ಕೋಟ್ಯಂತರ ಸಮರ್ಪಣಾ ಕಾರ್ಯಕರ್ತರನ್ನು ದೇಶ ಕಟ್ಟುವ ಬದ್ಧತೆಗಾಗಿ ಸಜ್ಜುಗೊಳಿಸಿದ ಪಕ್ಷ, ಕರ್ನಾಟಕದಲ್ಲಿ ಭಾರತೀಯ ಜನತಾ ಪಾರ್ಟಿಯ ಬೆಳವಣಿಗೆಯ ಪ್ರತಿ ಹಂತವೂ ಚಾರಿತ್ರಿಕ ದಾಖಲೆಗಳಾಗಿವೆ. ಪಕ್ಷದ ಕಾರ್ಯಕರ್ತರಾಗಿ ನಾವೆಲ್ಲರೂ ಹೆಮ್ಮೆಪಡುವ ನಿಟ್ಟಿನಲ್ಲಿ ದಕ್ಷಿಣ ಭಾರತದಲ್ಲಿ ಪಕ್ಷಕ್ಕೆ ಹೆಬ್ಬಾಗಿಲು ತೆರೆದು ಕೊಟ್ಟ ರಾಜ್ಯ ‘ಕರ್ನಾಟಕ’ಎಂಬ ಹೆಗ್ಗಳಿಕೆ ನಮ್ಮದಾಗಿದೆ.

ಕಳೆದ ಒಂದೂವರೆ ವರ್ಷದಿಂದ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಮಾನ್ಯ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನ ವಿರೋಧಿ ಹಾಗೂ ಅಭಿವೃದ್ಧಿ ಶೂನ್ಯ ಆಡಳಿತದೊಂದಿಗೆ ಹತ್ತು ಹಲವು ಹಗರಣಗಳಲ್ಲಿ ಸಿಲುಕಿಕೊಂಡು ರಾಜ್ಯದ ಗೌರವ ಹಾಗೂ ಘನತೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಕುಗ್ಗುವಂತಾಗಲು ಕಾರಣವಾಗಿದೆ. ಪರಿಶಿಷ್ಟ ಪಂಗಡದ ಜನರ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣವನ್ನು ಬ್ಯಾಂಕಿನ ಖಾತೆಗೆ ಖನ್ನ ಹಾಕಿ ಲಪಟಾಯಿಸಿದ ಪ್ರಕರಣವೂ ದೇಶದ ಇತಿಹಾಸದಲ್ಲಿಯೇ ಮೊದಲು. ವಕ್ಸ್ ಕಾಯ್ದೆ ಹೆಸರಿನಲ್ಲಿ ರೈತರು, ಮಠಮಾನ್ಯಗಳು ಹಾಗೂ ದೇವಸ್ಥಾನಗಳ ಆಸ್ತಿ ಆಕ್ರಮಿಸಲು ಕಠೋರ ನಿಲುವಿನ ಅಸ್ತ್ರ ಬಳಸಿದ್ದು ಇದೇ ಮೊದಲು. ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡಿ ಕಡು ಬಡವರ ಅನ್ನದ ತಟ್ಟೆಯನ್ನು ನಿರ್ದಯವಾಗಿ ಈ ಸರ್ಕಾರ ಕಿತ್ತುಕೊಳ್ಳಲು ಹೊರಟಿದ್ದೇಕೆ?

ತಾವು ತಪ್ಪೇ ಮಾಡದಿದ್ದರೆ,ಅಕ್ರಮವಾಗಿ ನಿವೇಶನಗಳನ್ನು ಪಡೆಯದಿದ್ದರೆ 14 ನಿವೇಶನಗಳನ್ನು ಮುಡಾಗೆ ಒಪ್ಪಿಸಿದ್ದಾದರೂ ಏಕೆ? ಎಂಬ ಪ್ರಶ್ನೆಗಳು ಇಂದಿಗೂ ಜೀವಂತ. ಕಾನೂನು ವ್ಯವಸ್ಥೆಯಲ್ಲಿ ಇದು ತಾರ್ಕಿಕ ಅಂತ್ಯ ಕಾಣುವವರೆಗೂ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಸರ್ಕಾರದ ಕೆಲವು ಮಂತ್ರಿಗಳು ಪ್ರಾಮಾಣಿಕತೆಯ ಮಾತನಾಡುವ ನೈತಿಕತೆ ಹೊಂದಲು ಸಾಧ್ಯವೇ ಇಲ್ಲ. ಹಣ ಬಲ, ಅಧಿಕಾರ ಬಲದ ಜೊತೆಗೆ ಚುನಾವಣೆಯ ಹಿಂದಿನ ದಿನವನ್ನು ಗುರಿಯನ್ನಾಗಿಸಿಕೊಂಡು ಗೃಹಲಕ್ಷ್ಮೀ ಯೋಜನೆಯ ಹಣವನ್ನು ಮತದಾರರ ಖಾತೆಗೆ ಹಾಕಿದ್ದು ಚುನಾವಣೆಯ ಅನೈತಿಕತೆಯಲ್ಲದೇ ಮತ್ತಿನ್ನೇನು? ದುರ್ಮಾರ್ಗಗಳನ್ನು ಬಳಸಿ ಉಪಚುನಾವಣೆಯನ್ನು ಗೆಲ್ಲುವುದು ಆಡಳಿತ ನಡೆಸುವ ಸಂದರ್ಭದಲ್ಲಿ ಕಾಂಗ್ರೆಸ್ಸಿಗೆ ಹೊಸತೇನೂ ಅಲ್ಲ, ಈ ನಿಟ್ಟಿನಲ್ಲಿ ಈ ಚುನಾವಣೆಯ ಅಪಜಯವನ್ನು ನಾವ್ಯಾರೂ ಹಿನ್ನೆಡೆ ಎಂದು ಪರಿಗಣಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.

ಇದೇ ಕಾಂಗ್ರೆಸ್ ಪಕ್ಷ ತನ್ನ ಆಡಳಿತಾವಧಿಯಲ್ಲಿ ನಂಜನಗೂಡು-ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಗೆದ್ದ ನಂತರ ಸಾರ್ವತ್ರಿಕ ಚುನಾವಣೆಯಲ್ಲಿ ಏಕೆ ಧೂಳಿಪಟವಾಯಿತು ಎಂಬ ಬಗ್ಗೆ ಮುಖ್ಯಮಂತ್ರಿಗಳು ಉತ್ತರಿಸಬೇಕಾಗಿದೆ ತಮ್ಮಭ್ರಷ್ಟತೆಯ ಕರಾಳ ಮುಖ ಒರೆಸಿಕೊಳ್ಳಲು ಈ ಫಲಿತಾಂಶ ಯಾವುದೇ ಕಾರಣಕ್ಕೂ ವಸ್ತ್ರವೂ ಆಗುವುದಿಲ್ಲ, ಅಸ್ತ್ರವೂ ಆಗುವುದಿಲ್ಲ.

ಈ ಸರ್ಕಾರದ ಉಳಿದಿರುವ ಅವಧಿಯನ್ನು ಗಮನಿಸಿಯೂ ಜನರು ಕೆಲವು ನಿರೀಕ್ಷೆಗಳೊಂದಿಗೆ ಈ ಉಪ ಚುನಾವಣೆಯಲ್ಲಿ ಮತ ನೀಡಿರುವ ಸಾಧ್ಯತೆಯನ್ನೂ ನಾವು ಅಲ್ಲಗಳೆಯಲಾಗದು. ಈ ನಿಟ್ಟಿನಲ್ಲಿ ಕಾಂಗ್ರೆಸ್ಸಿಗರು ಉಪ ಚುನಾವಣೆಯ ಗೆಲುವಿಗಾಗಿ ತಮ್ಮ ಬೆನ್ನು ತಟ್ಟಿಕೊಂಡು ಸಂಭ್ರಮಿಸಬೇಕಾಗಿಲ್ಲ, ಅವರ ಮುಂದೆ ದೊಡ್ಡ ಜವಾಬ್ದಾರಿಯಿದೆ, ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಅಭಿವೃದ್ಧಿ ಹಾದಿಯಲ್ಲಿ ಒಂದೇ ಒಂದು ಹೆಜ್ಜೆಯನ್ನೂ ಇಟ್ಟಿಲ್ಲ. ತಮ್ಮಗ್ಯಾರಂಟಿ ಯೋಜನೆಯನ್ನೂ ಸಮರ್ಪಕವಾಗಿ ನಿರ್ವಹಿಸಲಾಗದ ಸ್ಥಿತಿಯನ್ನು ಸರಿದೂಗಿಸಿಕೊಳ್ಳಲು ಇತರ ಅಭಿವೃದ್ಧಿ ಕಾರ್ಯಗಳಿಗೆ ಕಲ್ಲು ಹಾಕಿದ್ದಾರೆ. ಹತ್ತು ಹಲವು ಇಲಾಖೆಗಳು ಕೆಲಸವಿಲ್ಲದೇ ನಿಂತಲ್ಲೇ ನಿಂತಿವೆ.

ಯುವಕರಿಗಾಗಿ ಉದ್ಯೋಗ ಸೃಷ್ಟಿಯಾಗಿಲ್ಲ, ರೈತರಿಗಾಗಿ ಯಾವುದೇ ಹೊಸ ನೀರಾವರಿ ಯೋಜನೆ ಆರಂಭವಾಗಲಿಲ್ಲ, ಮಹಿಳಾ ಉದ್ಯೋಗಕ್ಕಾಗಿ ಕಾರ್ಯಕ್ರಮ ರೂಪಿಸಲಿಲ್ಲ, ಶಿಕ್ಷಣ ಸುಧಾರಣೆಗಾಗಿ ಕನಿಷ್ಟ ಕಾರ್ಯಕ್ರಮವನ್ನೂ ರೂಪಿಸಲಿಲ್ಲ. ಪರಿಶಿಷ್ಟ ಜಾತಿ ಮತ್ತು ವರ್ಗಗಳ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣವನ್ನು ಹಾಗೂ ಹಿಂದುಳಿದವರು, ಅತೀ ಹಿಂದುಳಿದವರು, ಆದಿವಾಸಿಗಳು ಹಾಗೂ ಅಲೆಮಾರಿ ಸಮುದಾಯಗಳ ವಿವಿಧ ಅಭಿವೃದ್ಧಿ ನಿಗಮಗಳ ಚಟುವಟಿಕೆಗಳಿಗೆ ಕನಿಷ್ಟ ಅನುದಾನವನ್ನೂ ನೀಡಲಿಲ್ಲ. ಇಷ್ಟಾಗಿಯೂ ಮೂರು ಉಪಚುನಾವಣೆಯ ಫಲಿತಾಂಶ ತಮ್ಮ ಸಾಧನೆ ಎಂದು ಬೀಗುತ್ತಿರುವ ಕಾಂಗ್ರೆಸ್ಸಿಗರು ಯಾವ ನೈತಿಕತೆಯಿಂದ ಈ ಜಯವನ್ನು ಸಂಭ್ರಮಿಸುತ್ತಾರೆಂದು ಈ ರಾಜ್ಯದ ಜನತೆಗೆ ತಿಳಿಸಬೇಕಿದೆ.

ನಮ್ಮಭಾರತೀಯ ಜನತಾ ಪಾರ್ಟಿಯಲ್ಲಿ ಅಭಿಪ್ರಾಯ ಭೇದಗಳಿಗೆ ಮುಕ್ತ ಅವಕಾಶ ಇದ್ದೇ ಇದೆ, ಅದೇ ರೀತಿಯಲ್ಲಿ ಶಿಸ್ತು, ಸಂಯಮಗಳು ಎಲ್ಲೆ ಮೀರದಂತೆ ನೋಡಿಕೊಳ್ಳುವ ವ್ಯವಸ್ಥೆಯೂ ನಮ್ಮಲ್ಲಿದೆ. ಈ ಕ್ಷಣಕೂ ಪ್ರತಿಯೊಬ್ಬ ಕಾರ್ಯಕರ್ತರು, ಪ್ರಮುಖರು ಹಾಗೂ ಹಿರಿಯರೊಂದಿಗೆ ವಿಶ್ವಾಸ, ಪ್ರೀತಿಯನ್ನು ಬೆಳೆಸುಳಿಸಿಕೊಂಡು ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸಬೇಕು ಎನ್ನುವ ಹಂಬಲ ಹಾಗೂ ಸಂಕಲ್ಪ ನನ್ನದಾಗಿದೆ. ಕಾರ್ಯಕರ್ತರಲ್ಲಿ ವಿನಮ್ರ ವಿನಂತಿ ಏನೆಂದರೆ ರಾಜ್ಯದ ಉಪಚುನಾವಣೆಯ ಫಲಿತಾಂಶದ ಪರಿಣಾಮ ನಮ್ಮ ಸಂಘಟನೆಯ ಮೇಲೆ ಯಾವ ಪ್ರಭಾವವನ್ನೂ ಬೀರಲು ಸಾಧ್ಯವಿಲ್ಲ. ಇದನ್ನು ಸಂಪೂರ್ಣವಾಗಿ ಉಪೇಕ್ಷಿಸೋಣ. ಪಕ್ಕದ ಮಹಾರಾಷ್ಟ್ರದ ಐತಿಹಾಸಿಕ ಮಹಾ ವಿಜಯವನ್ನು ನಾವು ಪ್ರೇರಣೆಯಾಗಿ ಸ್ವೀಕರಿಸಿ, ಭವಿಷ್ಯದ ದಿನಗಳಲ್ಲಿ ಒಂದು ದಿನವೂ ವ್ಯಯ ಮಾಡದೇ ರಾಜ್ಯದಲ್ಲಿ ಮತ್ತೆ ಭಾರತೀಯ ಜನತಾ ಪಾರ್ಟಿಯ ಸರ್ಕಾರವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಸಂಕಲ್ಪ ತೊಡೋಣ.

ಮುಂದೆಯೂ ಮಿತ್ರ ಪಕ್ಷ ಜೆಡಿಎಸ್ ಜತೆಗೆ ಸಹಕಾರದ ಹೆಜ್ಜೆಗಳನ್ನು ಇಡೋಣ. ನಮ್ಮಗುರಿ ಏನಿದ್ದರೂ ಸಂಘಟನೆ ಜತೆಗೇ ಕಾಂಗ್ರೆಸ್ ಸರ್ಕಾರದ ಬಹುಸಂಖ್ಯಾತ ಜನರ ವಿರೋಧಿ ಧೋರಣೆ ಹಾಗೂ ಭ್ರಷ್ಟ ಆಡಳಿತವನ್ನು ಕೊನೆಗಾಣಿಸುವುದಕ್ಕಾಗಿ ಎಂಬ ಶಪಥ ಮಾಡೋಣ. ಆ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತವನ್ನು ‘ನಂಬರ್ -1 ಸ್ಥಾನದಲ್ಲಿ ಕಾಣುವ ಮಹಾಸಂಕಲ್ಪ ತೊಟ್ಟಿರುವ ಪ್ರಧಾನಿ ಮೋದಿ ಅವರ ಹಾದಿಯಲ್ಲಿ ಸದೃಢ ಮನಸ್ಸಿನಿಂದ ಸಾಗೋಣ. ಭಾರತೀಯ ಜನತಾ ಪಾರ್ಟಿಯ ಸುಭದ್ರ ಕೋಟೆಯ ನಡುವೆ ಬಿರುಕು ಮೂಡಿಸಲು ಯತ್ನಿಸುವ ಶಕ್ತಿಗಳನ್ನು ಮೆಟ್ಟಿನಿಂತು ನಮ್ಮೆಲ್ಲರ ‘ಒಗ್ಗಟ್ಟಿನ ಮುಷ್ಠಿ ದೇಶ ಕಟ್ಟುವ ಶಕ್ತಿಯಾಗಲೆಂದು ನಿಮ್ಮೆಲ್ಲರಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಭಿನ್ನವಿಸಿಕೊಳ್ಳುತ್ತೇನೆ. ಈ ನಿಟ್ಟಿನಲ್ಲಿ ಹಿರಿಯರ ಆಶೀರ್ವಾದ, ಪ್ರಮುಖರ ಮಾರ್ಗದರ್ಶನ ಪಡೆದು ಮುಂದಿನ ದಿನಗಳಲ್ಲಿ ಇನ್ನಷ್ಟು ಕ್ರಿಯಾಶೀಲರಾಗಿ ಸಂಘಟನೆಯನ್ನು ಬಲವೃದ್ಧಿಗೊಳಿಸೋಣ. ಬದ್ಧತೆ – ಅಚಲತೆ, ಸಫಲತೆಯ ಪ್ರತೀಕ. ಗುರಿಯಿಟ್ಟು – ಛಲ ಹೊತ್ತು, ಧೈಯ ಮಾರ್ಗದಲ್ಲಿ ಸಾಗೋಣ ಎಂಬುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತಿಳಿಸಿದ್ದಾರೆ.

ಸಹೃದಯ ಕಾರ್ಯಕರ್ತ ಬಂಧುಗಳೇ,

ಉಪ ಚುನಾವಣೆಗಳ ಫಲಿತಾಂಶ ಸಂಘಟನಾ ಶಕ್ತಿಯನ್ನು ಅಳೆಯುವ ಅಳತೆಗೋಲಲ್ಲ, ಭವಿಷ್ಯತ್ತಿನಲ್ಲಿ ಸಂಘಟನೆಯನ್ನು ಬಲ ವೃದ್ಧಿಗೊಳಿಸಲು ನಮ್ಮ ಮುಂದಿರುವ ಸವಾಲುಗಳನ್ನು ನೆನಪಿಸುವ ಸಂಕೇತ. pic.twitter.com/UvrFaxtpC6

— Vijayendra Yediyurappa (@BYVijayendra) November 26, 2024

BREAKING: ಸಿಎಂ ಸಿದ್ಧರಾಮಯ್ಯಗೆ ಮತ್ತೆ ರಿಲೀಫ್: ಡಿ.10ಕ್ಕೆ ‘ಮುಡಾ ಕೇಸ್’ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್ | CM Siddaramaiah

BIG NEWS: ರಾಜ್ಯದಲ್ಲಿ ಇನ್ನೂ ಜೀವಂತ ‘ಬಹಿಷ್ಕಾರ ಪದ್ದತಿ’: ಇವರನ್ನು ಮಾತಾಡಿಸಿದ್ರೆ 5,000 ದಂಡವಂತೆ

Share. Facebook Twitter LinkedIn WhatsApp Email

Related Posts

BREAKING: ಐದು ಹುಲಿ ಸಾವು ಪ್ರಕರಣ: ರಾಜ್ಯ ಸರ್ಕಾರದಿಂದ ಡಿಸಿಎಫ್, ಎಸಿಎಫ್ ಗಳಿಗೆ ಕಡ್ಡಾಯ ರಜೆ ನೀಡಿ ಆದೇಶ

30/06/2025 7:08 PM3 Mins Read

BREAKING: ನಾಳೆ ಮಧ್ಯಾಹ್ನ 1 ಗಂಟೆಗೆ ‘ಕರ್ನಾಟಕ ದ್ವಿತೀಯ PUC ಪರೀಕ್ಷೆ-3’ರ ಫಲಿತಾಂಶ ಪ್ರಕಟ | Karnataka PUC Exam-3 Results

30/06/2025 6:55 PM1 Min Read

ರಾಜ್ಯದ ‘ಗ್ರಾಮೀಣ ಪತ್ರಕರ್ತ’ರಿಗೆ ಗುಡ್ ನ್ಯೂಸ್: ನಾಳೆ ‘ಉಚಿತ ಸಾರಿಗೆ ಬಸ್ ಪಾಸ್’ ವಿತರಣೆಗೆ ಸಿಎಂ ಚಾಲನೆ

30/06/2025 6:43 PM1 Min Read
Recent News

BREAKING: ಐದು ಹುಲಿ ಸಾವು ಪ್ರಕರಣ: ರಾಜ್ಯ ಸರ್ಕಾರದಿಂದ ಡಿಸಿಎಫ್, ಎಸಿಎಫ್ ಗಳಿಗೆ ಕಡ್ಡಾಯ ರಜೆ ನೀಡಿ ಆದೇಶ

30/06/2025 7:08 PM

BREAKING: ನಾಳೆ ಮಧ್ಯಾಹ್ನ 1 ಗಂಟೆಗೆ ‘ಕರ್ನಾಟಕ ದ್ವಿತೀಯ PUC ಪರೀಕ್ಷೆ-3’ರ ಫಲಿತಾಂಶ ಪ್ರಕಟ | Karnataka PUC Exam-3 Results

30/06/2025 6:55 PM

BREAKING ; ‘BCCI’ನಿಂದ 10.65 ಕೋಟಿ ರೂ. ಪರಿಹಾರ ಕೋರಿ ‘ಲಲಿತ್ ಮೋದಿ’ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ‘ಸುಪ್ರೀಂ ಕೋರ್ಟ್’

30/06/2025 6:54 PM

ರಾಜ್ಯದ ‘ಗ್ರಾಮೀಣ ಪತ್ರಕರ್ತ’ರಿಗೆ ಗುಡ್ ನ್ಯೂಸ್: ನಾಳೆ ‘ಉಚಿತ ಸಾರಿಗೆ ಬಸ್ ಪಾಸ್’ ವಿತರಣೆಗೆ ಸಿಎಂ ಚಾಲನೆ

30/06/2025 6:43 PM
State News
KARNATAKA

BREAKING: ಐದು ಹುಲಿ ಸಾವು ಪ್ರಕರಣ: ರಾಜ್ಯ ಸರ್ಕಾರದಿಂದ ಡಿಸಿಎಫ್, ಎಸಿಎಫ್ ಗಳಿಗೆ ಕಡ್ಡಾಯ ರಜೆ ನೀಡಿ ಆದೇಶ

By kannadanewsnow0930/06/2025 7:08 PM KARNATAKA 3 Mins Read

ಬೆಂಗಳೂರು: ಚಾಮರಾಜ ನಗರ ಜಿಲ್ಲೆಯ ಮಲೆಮಹದೇಶ್ವರ ವನ್ಯಜೀವಿ ಪ್ರದೇಶದಲ್ಲಿ ಐದು ಹುಲಿಗಳು ಸಾವನ್ನಪ್ಪಿದ್ದವು. ಈ ಪ್ರಕರಣ ಸಂಬಂಧ ಉಪ ಅರಣ್ಯ…

BREAKING: ನಾಳೆ ಮಧ್ಯಾಹ್ನ 1 ಗಂಟೆಗೆ ‘ಕರ್ನಾಟಕ ದ್ವಿತೀಯ PUC ಪರೀಕ್ಷೆ-3’ರ ಫಲಿತಾಂಶ ಪ್ರಕಟ | Karnataka PUC Exam-3 Results

30/06/2025 6:55 PM

ರಾಜ್ಯದ ‘ಗ್ರಾಮೀಣ ಪತ್ರಕರ್ತ’ರಿಗೆ ಗುಡ್ ನ್ಯೂಸ್: ನಾಳೆ ‘ಉಚಿತ ಸಾರಿಗೆ ಬಸ್ ಪಾಸ್’ ವಿತರಣೆಗೆ ಸಿಎಂ ಚಾಲನೆ

30/06/2025 6:43 PM

ಶನಿಯ ಸ್ಥಾನ ಪಲ್ಲಟದಿಂದ ಈ ಮೂರು ರಾಶಿಯವರಿಗೆ ಶುಭ ಫಲ

30/06/2025 6:36 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.