ಬೆಂಗಳೂರು : ಸರ್ಕಾರದಲ್ಲಿ ಹಗರಣ ಆಗಿದೆ ಅಂತ ಯಾರೂ ತಲೆ ತಗ್ಗಿಸಬೇಕಾಗಿಲ್ಲ. ಅಧಿಕಾರಿಗಳು ಇದರಲ್ಲಿ ಭಾಗಿಯಾಗಿದ್ದಾರೆ. ಅಧಿಕಾರಿಗಳ ತಪ್ಪಿನಿಂದಾಗಿ ಹೀಗಾಗಿದೆ. ಈ ಹಗರಣದಲ್ಲಿ ನಮ್ಮ ಶಾಸಕರ ಪಾತ್ರ ಇಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಕಾರ್ಯಕರ್ತರಿಗೆ ಧೈರ್ಯ ತುಂಬಿದ್ದಾರೆ.
KPCC ಕಚೇರಿಯಲ್ಲಿ ನಡೆದ ಸಭೆಯಲ್ಲಿ ವಾಲ್ಮೀಕಿ ಹಗರಣದ ಕುರಿತಂತೆ ಮಾತನಾಡಿದ ಅವರು,ಸರ್ಕಾರದಲ್ಲಿ ಹಗರಣ ಆಗಿದೆ ಅಂತ ಯಾರೂ ತಲೆ ತಗ್ಗಿಸಬೇಕಾಗಿಲ್ಲ. ಅಧಿಕಾರಿಗಳು ಇದರಲ್ಲಿ ಭಾಗಿಯಾಗಿದ್ದಾರೆ. ಅಧಿಕಾರಿಗಳ ತಪ್ಪಿನಿಂದಾಗಿ ಹೀಗಾಗಿದೆ. ಈ ಹಗರಣದಲ್ಲಿ ನಮ್ಮ ಶಾಸಕರ ಪಾತ್ರ ಇಲ್ಲ. ನನ್ನ ಬಳಿ ಆಣೆ ಪ್ರಮಾಣ ಮಾಡಿ ಹೇಳಿದ್ದಾರೆ.
ಯಾರೇ ತಪ್ಪು ಮಾಡಿದ್ದರೂ ಸುಮ್ಮನೆ ಬಿಡೋದಿಲ್ಲ. ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ತೇವೆ. ಹಗರಣ ಆಗಿದೆ ಅಂತ ಕಾರ್ಯಕರ್ತರು ತಲೆ ಕೆಡಿಸಿಕೊಳ್ಳಬೇಕಾದ ಅವಶ್ಯಕತೆ ಇಲ್ಲ ಎಂದು ಕಾರ್ಯಕರ್ತರಿಗೆ ಧೈರ್ಯ ತುಂಬಿದರು.ಕಾರ್ಯಕರ್ತರು ಎಲ್ಲಾ ಕಮಿಟಿಗಳ ರಚನೆ ಮಾಡಬೇಕು. ಯಾವ ಶಾಸಕರು ಸಹ ತಮ್ಮ ಮನೆಗಳಲ್ಲಿ ಮೀಟಿಂಗ್ ಮಾಡಬಾರದು.
ಕಾಂಗ್ರೆಸ್ ಕಚೇರಿ ಚಿಕ್ಕದಿದ್ದರೆ, ಕಲ್ಯಾಣ ಮಂಟಪದಲ್ಲಿ ಸಭೆ ಮಾಡಬೇಕು. ಶಾಸಕರ ಮನೆಯಲ್ಲಿ ಆಫೀಸ್ ನಡೆಸುವ ಹಾಗೆ ಆಗಬಾರದು. ನಾಮಿನೇಷನ್ ವಿಚಾರವಾಗಿ ಸೋಷಿಯಲ್ ಜಸ್ಟೀಸ್ ಇದೆ. ಆಸ್ಪತ್ರೆ, ಕೆಇಬಿ ಕಮಿಟಿ, ಸ್ಕೂಲ್ ಕಮಿಟಿ, ಆಶ್ರಮ ಕಮಿಟಿ ಅಂಬೇಡ್ಕರ್ ಕಮಿಟಿ ಇವೆಲ್ಲ ಸಮಿತಿಗಳು ಆಗಬೇಕು. ಸಾಮಾಜಿಕ ನ್ಯಾಯವನ್ನ ಗಮನದಲ್ಲಿ ಇಟ್ಟುಕೊಂಡು ಕೆಲಸ ಮಾಡುವಂತೆ ಹೇಳಿರುವುದಾಗಿ ತಿಳಿಸಿದರು.