ಬೆಳಗಾವಿ : ಮಹಾರಾಷ್ಟ್ರ ಡ್ಯಾಂಗಳನ್ನು ಎತ್ತರ ಹೆಚ್ಚಿಸುವಂತೆ ಎನ್ ಸಿಪಿ ಶಾಸಕರು ಒತ್ತಡ ಹೇರಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಎನ್ ಸಿಪಿ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
BIGG NEWS : ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳ ನಡುವಿನ ಗಡಿ ವಿಚಾರ ವಿವಾದವೇ ಅಲ್ಲ : ಮಾಜಿ ಸಿಎಂ ಸಿದ್ದರಾಮಯ್ಯ
ಸುವರ್ಣಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ಯಾಂಗಳನ್ನು ಎತ್ತರ ಮಾಡಲು ಅವರ ತಾತನ ಮನೆಯದ್ದಲ್ಲ. ನ್ಯಾಯಯುತವಾಗಿ ನೀರು ಹಂಚಿಕೆ ಮಾಡಲಾಗಿದೆ. ಶಾಸನ ಸಭೆಗೆ ಬಂದ ಮೇಲೆ ನಡವಳಿಕೆ ಮೇಲೆ ಗಮನ ಇರಬೇಕು. ನಮಗೆ ನ್ಯಾಯಯುತವಾಗಿ ನೀರು ಸಿಕ್ಕಿದೆ. ನೀರು ಹಂಚಿಕೆ ಬಂದ್ ಮಾಡಲು ಯಾರಿಗೂ ಅಧಿಕಾರ ಇಲ್ಲ ಎಂದರು.
ಇನ್ನು ಮಹಾರಾಷ್ಟ್ರ ಸರ್ಕಾರದ ಅಧಿವೇಶನದಲ್ಲಿ ಮಹಾರಾಷ್ಟ್ರದಲ್ಲಿರುವ ಡ್ಯಾಂಗಳ ಎತ್ತರ ಹೆಚ್ಚಿಸಬೇಕು. ಇದರಿಂದ ಕರ್ನಾಟಕ್ಕೆ ನೀರು ಹೋಗದಂತೆ ತಡೆಯಬೇಕು ಎಂದು ಎನ್ ಸಿಪಿ ಶಾಸಕರು ಒತ್ತಡ ಹೇರಿದ್ದರು.
BIGG NEWS : ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳ ನಡುವಿನ ಗಡಿ ವಿಚಾರ ವಿವಾದವೇ ಅಲ್ಲ : ಮಾಜಿ ಸಿಎಂ ಸಿದ್ದರಾಮಯ್ಯ