ಬೆಂಗಳೂರು : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಈಗಾಗಲೇ ಬಿಜೆಪಿ ಜೆಡಿಎಸ್ ಹಾಗೂ ಕಾಂಗ್ರೆಸ್ ಸಕಲಸಿದ್ಧತೆ ಮಾಡಿಕೊಂಡಿದ್ದು, ಮಂಡ್ಯ ಕ್ಷೆತ್ರದಿಂದ ಸುಮಲತಾ ಅಂಬರೀಶ್ ಒಂದು ಒಳ್ಳೆ ಸ್ಪರ್ಧಿಸಿದರೆ ಬೆಂಬಲಿಸುವುದಾಗಿ ನಟ ದರ್ಶನ್ ಈ ಹಿಂದೆ ಹೇಳಿಕೆ ನೀಡಿದರು ಇದೀಗ ಕಿಚ್ಚ ಸುದೀಪ್ ಕೂಡ ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದಾರೆ.
‘ಬಿಮಾ ಸುಗಮ್’ಗೆ ‘IRDAI’ ಅನುಮೋದನೆ : ಕೈಗೆಟುಕಲಿವೆ ‘ವಿಮಾ ಪಾಲಿಸಿ’ಗಳು, ‘ಖರೀದಿ ನೀತಿ, ಕ್ಲೈಮ್-ಇತ್ಯರ್ಥ’ ಸುಲಭ
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸದ್ಯಕ್ಕೆ ನನಗೆ ಯಾರು ಕೂಡ ಚುನಾವಣಾ ಪ್ರಚಾರಕ್ಕೆ ಬನ್ನಿ ಎಂದು ಕರೆದಿಲ್ಲ. ಕೊನೆ ಸಾರಿ ಹೋದಾಗ ಯಾರ ಪರವಾಗಿ ಯಾರಗೋಸ್ಕರ ಹೋಗಿದ್ದೆ ಅಂತ ಹೇಳಿದ್ದೇನೆ. ಇದೀಗ ಪ್ರಚಾರಕ್ಕೆ ಬನ್ನಿ ಅಂತ ಸದ್ಯಕ್ಕೆ ಯಾರು ಕರೆದಿಲ್ಲ ಎಂದು ತಿಳಿಸಿದರು.
BREAKING : ಮಾಸ್ಕೊದಲ್ಲಿ ಉಗ್ರರ ದಾಳಿ ಪ್ರಕರಣ : ಮೃತಪಟ್ಟವರ ಸಂಖ್ಯೆ 93, ಗಾಯಗೊಂಡವರ ಸಂಖ್ಯೆ 145ಕ್ಕೆ ಏರಿಕೆ
ಸದ್ಯ ಸಿನೆಮಾ ಶೂಟಿಂಗ್ ನಡೆಯುತ್ತಿದೆ. ಅದರಲ್ಲಿ ನಾನು ಬ್ಯುಸಿ ಇದಿನಿ. ಸಿನೆಮಾ ಶೂಟಿಂಗ್ ಮುಗಿದ ಬಳಿಕ ನೋಡೋಣ. ಏಕೆಂದರೆ ಎಲೆಕ್ಷನ್ಗೂ ನನಗೂ ಬಹಳ ದೂರವಿದೆ ಅಕಸ್ಮಾತ್ ಸಿನಿಮಾ ಬಿಟ್ಟು ರಾಜಕಾರಣಕ್ಕೆ ಹೋದರೆ ಅಲ್ಲಿ ಬೇರೆ ವಾತಾವರಣ ಸೃಷ್ಟಿ ಆಗಬಹುದು. ಹಾಗಾಗಿ ಚುನಾವಣಾ ಪ್ರಚಾರಕ್ಕೆ ಸದ್ಯ ಯಾರು ಕರೆದಿಲ್ಲ ಸಿನಿಮಾ ಶೂಟಿಂಗ್ ಮುಗಿದ ಬಳಿಕ ನೋಡೋಣ ಎಂದು ಸ್ಪಷ್ಟಪಡಿಸಿದರು.