ಹುಬ್ಬಳ್ಳಿ: ಇಂದು ಭಾರತೀಯ ಜನತಾ ಪಾರ್ಟಿಯವರ ಬಳಿ ಇರುವಷ್ಟು ಹಣ ಯಾರ ಬಳಿನೂ ಇಲ್ಲ. ಹಣದಲ್ಲಿ ನಾವು ಅವರಿಗೆ ಸ್ಪರ್ಧೆ ಮಾಡಲು ಸಾಧ್ಯವಿಲ್ಲ. ಆದರೆ ನಮ್ಮಲ್ಲಿ ಪ್ರಾಮಾಣಿಕತೆ ಇದೆ. ಒಳ್ಳೆತನದಿಂದ ನಾವು ಜನರ ಮನಸ್ಸು ಗೆಲ್ಲುತ್ತೇವೆ ಎಂದು ಆಮ್ ಆದ್ಮಿ ಪಾರ್ಟಿ ಉಪಾಧ್ಯಕ್ಷ ಭಾಸ್ಕರ್ ರಾವ್ ಹೇಳಿದ್ದಾರೆ.
BIGG NEWS: ರಾಮ ಮಂದಿರವನ್ನು ಸ್ಫೋಟಿಸಲು PFI ಅಲ್ಲ, ರಾವಣ, ಜಿನ್ನಾ ವಂಶಸ್ಥರಿಂದಲೂ ಸಾಧ್ಯವಿಲ್ಲ: ಈಶ್ವರಪ್ಪ
ರಾಜ್ಯದಲ್ಲಿ ಬಿಜೆಪಿಗೆ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯೋದಕ್ಕೆ ಯಾವ ನೈತಿಕತೆಯೂ ಇಲ್ಲ. 40 ಪರ್ಸೆಂಟ್ನಲ್ಲಿ ಈಗಿನ ಸರ್ಕಾರ ಮುಳುಗಿದೆ. ಇದನ್ನು ಪ್ರಶ್ನೆ ಮಾಡೋಕೆ ಕಾಂಗ್ರೆಸ್ಗೂ ಹಕ್ಕಿಲ್ಲ. ಭ್ರಷ್ಟಾಚಾರ ಅವರದ್ದೇ ಕೂಸು ಎಂದು ವಾಗ್ದಾಳಿ ನಡೆಸಿದ್ದಾರೆ.
ಇಡಿ, ಸಿಬಿಐಗೆ ಒಳಗಾದವರನ್ನು ನಮ್ಮ ಪಾರ್ಟಿಗೆ ಕರೆದುಕೊಳ್ಳಲ್ಲ. ನಾವು ಡಾಕ್ಟರ್, ವಕೀಲರನ್ನ ಪಕ್ಷಕ್ಕೆ ಕರೆದುಕೊಳ್ಳುತ್ತೇವೆ. ಈ ಮೂಲಕ 2023 ರ ಚುನಾವಣೆಯಲ್ಲಿ ಎಲ್ಲ ಕಡೆ ಸ್ಪರ್ಧೆ ಮಾಡುತ್ತೇವೆ. ಕರ್ನಾಟಕ ಚುನಾವಣೆಗೆ ನಮ್ಮ ನಾಯಕರು ಬರ್ತಾರೆ. ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆ ಬಹಳ ಟಫ್ಯಿದೆ ಎಂದರು.