ಬೆಂಗಳೂರು: ಬಿಜೆಪಿಯಿಂದ ಯಾರೂ ಕಾಂಗ್ರೆಸ್ ಗೆ ಹೋಗಲ್ಲ. ಕಾಂಗ್ರೆಸ್ನಿಂದಲೇ ಬಹಳಷ್ಟು ಜನ ಬಿಜೆಪಿಗೆ ಬರ್ತಾರೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಗೆ ಮರಳಿ ಬರುವಂತೆ ಡಿಕೆಶಿ ಆಹ್ವಾನ ವಿಚಾರವಾಗಿ ಪ್ರತಿಕ್ರಿಸಿದ ಅವರು, ನಾವೆಲ್ಲ ಅನರ್ಹರಾದಾಗ ಡಿಕೆಶಿ, ಸಿದ್ದರಾಮಯ್ಯ ಅವರು ಏನೆಲ್ಲ ಮಾತಾಡಿದಾರೆ ಅಂತ ಸದನದಲ್ಲಿ ಎಲ್ಲರೂ ನೋಡಿದ್ದಾರೆ. ನಮ್ಮ ರಾಜಕೀಯ ಸಮಾಧಿ ಆಯ್ತು ಅಂತೆಲ್ಲ ಮಾತಾಡಿದರು. ಸಮಾಧಿ ಆದವರನ್ನು ಈಗ ಡಿಕೆಶಿ ಮತ್ಯಾಕೆ ಕರೀತಿದಾರೆ ಎಂದು ಸಚಿವ ಬಿ ಸಿ ಪಾಟೀಲ್ ತಿರುಗೇಟು ನೀಡಿದರು.
ಅವರು ಕರೀತಿದಾರೆ, ಬಿಟ್ಟು ಹೋದವರು ಬರಬಹುದು ಅಂತ ಕರೀತಿದಾರೆ. ನಮ್ಮವರು ಯಾರೂ ಅರ್ಜಿ ಹಾಕಿಲ್ಲ. ಕಾಂಗ್ರೆಸ್ನಲ್ಲಿ ಅಭ್ಯರ್ಥಿಗಳ ಕೊರತೆ ಆಗಿರಬಹುದು. ಹಾಗಾಗಿ ಹಳೇ ಗಂಡನ ಪಾದವೇ ಗತಿ ಅಂತ ಕರೀತಿರಬಹುದು ಎಂದರು.ಬಿಜೆಪಿ ತೊರೆದ ಮಾಜಿ ಶಾಸಕ ಯು.ಬಿ. ಬಣಕಾರ್ ಬಗ್ಗೆ ಪ್ರತಿಕ್ರಿಯಿಸುತ್ತಾ, ಯು.ಬಿ. ಬಣಕಾರ್ ಅವರು ಯಾವ ಪಕ್ಷ ಸೇರಿದ್ದಾರೆ ಅಂತ ಗೊತ್ತಿಲ್ಲ. ಅವರು ಕಾಂಗ್ರೆಸ್ ಸೇರಿದ್ಮೇಲೆ ನನ್ನ ಎದುರಾಳಿ ಆಗಿ ಸ್ಪರ್ಧಿಸಬಹುದು. ಬಣಕಾರ್ ಅವರನ್ನು ನಾನು ಹೊಸದಾಗಿ ಎದುರಿಸ್ತಿಲ್ಲ. ಈಗಾಗಲೇ ಮೂರು ಸಲ ಅವರ ವಿರುದ್ಧ ಕುಸ್ತಿ ಮಾಡಿದ್ದೇನೆ ಎಂದರು.