ಚಾಮರಾಜನಗರ : ಇತ್ತೀಚೆಗೆ ದೇವಾಲಯದ ಕಾಣಿಕೆ ಹುಂಡಿಗಳಲ್ಲಿ ವಿಚಿತ್ರವಾದ ಹರಕೆ, ಬೇಡಿಕೆಗಳನ್ನಿಟ್ಟುಕೊಂಡು ಪತ್ರಗಳನ್ನು ಹಾಕುವುದು ಹೆಚ್ಚಾಗುತ್ತಿದೆ. ಮನಸ್ಸಿನಲ್ಲಿ ಅದೇನೋ ಹರಕೆ, ಬೇಡಿಕೆಯನ್ನಿಟ್ಟುಕೊಂಡು ಕಾಗದದಲ್ಲಿ ಬರೆದು ಅದನ್ನು ಹುಂಡಿಗೆ ಹಾಕುವುದು ಸಾಮಾನ್ಯವಾಗಿದೆ.
ಅದೇ ರೀತಿ ಚಾಮರಾಜನಗರ ತಾಲೂಕಿನ ಮುಕ್ಕಡಹಳ್ಳಿ ಮಾಯಮ್ಮ ದೇವಾಲಯದಲ್ಲಿ ಭಕ್ತರೊಬ್ಬರು ವಿಚಿತ್ರ ಬೇಡಿಕೆಯ ಪತ್ರವನ್ನು ಹುಂಡಿಗೆ ಹಾಕಿದ್ದಾರೆ. ‘ದೇವರೇ ನನ್ನ ಮೂರ್ತಿ ಬಿಟ್ಟು ನನ್ನ ಕುತ್ತಿಗೆಗೆ ಬೇರೆ ಯಾರೂ ಕೂಡ ತಾಳಿ ಕಟ್ಟಬಾರದು’ ಎಂದು ಪತ್ರ ಬರೆದು ಹುಂಡಿಗೆ ಹಾಕಿದ್ದಾರೆ. ಸದ್ಯ ಈ ಪತ್ರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹುಡುಗಿ ಕರುಣಿಸು ದೇವರೇ
ಇತ್ತೀಚೆಗೆ ಚಾಮರಾಜನಗರದ ಚಾಮರಾಜೇಶ್ವರ ದೇವಾಲಯ ಹುಂಡಿ ಎಣಿಕೆ ಕಾರ್ಯ ನಡೆದಿದೆ. ಈ ಸಂದರ್ಭದಲ್ಲಿ ಯುವಕನೋರ್ವ ನನಗೆ ಹುಡುಗಿ ಕರುಣಿಸು, ಪ್ರೀತಿಯ ದೇವರೆ.. ಶಿವಲಿಂಗದ ಚಿತ್ರ ಬರೆದು ಹುಂಡಿಗೆ ಹಾಕಿ ಭಕ್ತನಿಂದ ಪತ್ರದ ಮೂಲಕ ಬೇಡಿಕೊಂಡಿದ್ದು, ಯುವತಿ ಭಾವಚಿತ್ರ, ಆಹ್ವಾನ ಪತ್ರಿಕೆಗಳು ಕೂಡ ಹುಂಡಿಯಲ್ಲಿ ಪತ್ತೆಯಾದ ಘಟನೆ ಬೆಳಕಿಗೆ ಬಂದಿತ್ತು. ಇದೀಗ ಚಾಮರಾಜನಗರ ತಾಲೂಕಿನ ಮುಕ್ಕಡಹಳ್ಳಿ ಮಾಯಮ್ಮ ದೇವಾಲಯದಲ್ಲಿ ಭಕ್ತರೊಬ್ಬರು ವಿಚಿತ್ರ ಬೇಡಿಕೆಯ ಪತ್ರವನ್ನು ಹುಂಡಿಗೆ ಹಾಕಿದ್ದಾರೆ.
BIGG NEWS : ‘CCB’ ಪೊಲೀಸರ ಕಾರ್ಯಾಚರಣೆ : ಬೆಂಗಳೂರಿನಲ್ಲಿ 6.30 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ