ಬಾಗಲಕೋಟೆ : ರಾಜ್ಯದಲ್ಲಿ ನವೆಂಬರ್ ನಲ್ಲಿ ಕ್ರಾಂತಿ ಆಗುವ ಕುರಿತು ಭಾರಿ ಚರ್ಚೆ ನಡೆಯುತ್ತಿದ್ದು ಇದರ ಮಧ್ಯೆ ಸಿಎಂ ಬದಲಾವಣೆ ಕುರಿತು ಕೂಡ ಹಲವು ಚರ್ಚೆಗಳು ನಡೆಯುತ್ತಿವೆ. ಇನ್ನು ಸಿಎಂ ಬದ್ಲಾವಣೆ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದ್ದು, ಶಾಸಕರ ಬೆಂಬಲ ಮತ್ತು ಕಾಂಗ್ರೆಸ್ ಹೈಕಮಾಂಡ್ ನ ಆಶೀರ್ವಾದವಿಲ್ಲದೇ ಯಾರೂ ಕೂಡಾ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಡಿ.ಕೆ.ಶಿವಕುಮಾರ್ ಅವರು ಹೈಕಮಾಂಡ್ ನಿರ್ಧಾರದ ಆಧಾರದ ಮೇಲೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಆಗಬಹುದು. ಇದಕ್ಕೆ ಶಾಸಕರ ಬೆಂಬಲದ ಅಗತ್ಯವಿಲ್ಲ ಎಂದು ಹೇಳಿದ್ದರು. ಈ ಕುರಿತು ಸಿಎಂ ಸಿದ್ದರಾಮಯ್ಯನವರನ್ನು ಪ್ರಶ್ನಿಸಿದಾಗ, “ನಾನು ಅಂತಹ ವಿಷಯಗಳಿಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ. ಹೈಕಮಾಂಡ್ ಎಂದರೆ ಹೈಕಮಾಂಡ್. ಶಾಸಕರು ಮತ್ತು ಹೈಕಮಾಂಡ್ ಎರಡೂ ಬಹಳ ಮುಖ್ಯ. ಶಾಸಕರ ಅಭಿಪ್ರಾಯವಿಲ್ಲದೆ ಯಾರೂ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ. ಶಾಸಕರ ಬಹುಮತ ಇದ್ದರೆ ಮಾತ್ರ ಒಬ್ಬರು ಸಿಎಂ ಆಗಬಹುದು ಎಂದರು.