ಮಂಡ್ಯ : ಇಂದಿನ ಜನತಾ ದರ್ಶನ ಸಭೆಗೆ ಬರದಂತೆ ಅಧಿಕಾರಿ ವರ್ಗಕ್ಕೆ ರಾಜ್ಯಸರ್ಕಾರ ಸುತ್ತೋಲೆ ಹೋರಡಿಸಿರುವದಕ್ಕೆ ಕೇಂದ್ರ ಸಚಿವ HD ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದು, ಯಾವುದೇ ಕಾರಣಕ್ಕೂ ನನ್ನ ಜನತಾ ದರ್ಶನ ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಗುಡಗಿದ್ದು ಕಾರ್ಯಕ್ರಮಕ್ಕೆ ಬರುವಂತೆ ಮಂಡ್ಯ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದೆ. ಕಾರ್ಯಕ್ರಮಕ್ಕೆ ತೆರಳದಂತೆ ಜಿಲ್ಲಾಡಳಿತಕ್ಕೆ ರಾಜ್ಯ ಸರ್ಕಾರ ಸೂಚನೆ ನೀಡಿದೆ. ಕಾರ್ಯಕ್ರಮಕ್ಕೆ ತೇರಳದಂತೆ ಅಧಿಕಾರಿಗಳು ಸುತ್ತೋಲೆ ಹೊರಡಿಸಿದ್ದಾರೆ.
ಅಧಿಕಾರಿಗಳ ವಿರುದ್ಧ ದೋಷಿಸುವುದಿಲ್ಲ. ಆದರೆ ರಾಜ್ಯ ಸರ್ಕಾರ ತನ್ನ ಸಣ್ಣತನ ತೋರುತ್ತಿದೆ ಇದು ನನ್ನ ಮನೆಯ ಕಾರ್ಯಕ್ರಮವಲ್ಲ ಇದು ಜನರಿಗೋಸ್ಕರ ಮಾಡುತ್ತಿರುವ ಕಾರ್ಯಕ್ರಮ.ಅಧಿಕಾರಿಗಳು ಇಲ್ಲದಿದ್ದರೂ ಜನತಾದರ್ಶನ ಮಾಡುತ್ತೇವೆ ಎಂದು ಮಂಡ್ಯದಲ್ಲಿ ಕೇಂದ್ರ ಸಚಿವ ಎಚ್‍ಡಿ ಕುಮಾರಸ್ವಾಮಿ ಹೇಳಿಕೆ ನೀಡಿದರು.
ನನ್ನ ಜನತಾ ದರ್ಶನ ಯಾರಿದಂಲೂ ತಪ್ಪಿಸಲು ಸಾಧ್ಯವಿಲ್ಲ.ರಾಜ್ಯ ಸರ್ಕಾರ ಜನರ ಸಮಸ್ಯೆ ಬಗೆ ಹರಿಸುವ ಕೆಲಸಕ್ಕೆ ಕಡಿವಾಣ ಹಾಕಿ ಸಣ್ಣತನ ತೋರಿದೆ.ನಾನು ಈ ವಿಚಾರದಲ್ಲಿ ಅಧಿಕಾರಿ ವರ್ಗವನ್ನು ದೋಷಿಸಲು ಹೋಗಲ್ಲ.ನನ್ನ ಜನತಾ ದರ್ಶನ ಕಡಿವಾಣ ಹಾಕಲು ಸರ್ಕಾರ ಸುತ್ತೋಲೆ ಹೊರಡಿಸಿದೆ.ಮಂಡ್ಯದ ಜನತಾ ದರ್ಶನ ಸಭೆಯಲ್ಲಿ ರಾಜ್ಯ ಸರ್ಕಾರದ ವಿರುದ್ದ ಎಚ್ಡಿಕೆ ಆಕ್ರೋಶ ಹೊರಹಾಕಿದರು.