ಬೆಂಗಳೂರು: ಅಕ್ರಮವಾಗಿ ಮರ ಕಡಿದಿದ್ದರ ಕಾರಣ ಟ್ಯಾಕ್ಸಿಕ್ ಚಿತ್ರ ತಂಡದ ವಿರುದ್ಧ ಎಫ್ಐಆರ್ ದಾಖಲಾಗಿದೆ. ಆದರೇ ಇದೇ ಕಾರಣಕ್ಕೆ ಚಿತ್ರ ಬಿಡುಗಡೆಗೆ ಯಾವುದೇ ತೊಂದ್ರೆ ಇಲ್ಲ. ಚಿತ್ರತಂಡದ ನಿರ್ಧರಿಸಿದಂತೆ ಸಿನಿಮಾ ಬಿಡುಗಡೆಯಾಗಲಿದೆ ಎಂಬುದಾಗಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಇಂದು ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಪೀಣ್ಯದ ಹೆಚ್ ಎಂ ಟಿ ಅರಣ್ಯ ಪ್ರದೇಶದಲ್ಲಿ ಟ್ಯಾಕ್ಸಿಕ್ ಸಿನಿಮಾ ಚಿತ್ರೀಕರಣಕ್ಕಾಗಿ ಅಕ್ರಮವಾಗಿ ಮರಗಳನ್ನು ಕಡಿದಿದ್ದು ಗಮನಕ್ಕೆ ಬಂದಿತ್ತು. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಕೂಡ ನಡೆಸಿದ್ದರು ಎಂದರು.
ಈ ಹಿಂದೆ ಹೆಚ್ ಎಂ ಟಿ ಅರಣ್ಯ ಪ್ರದೇಶದಲ್ಲಿ ಮರಗಳು ಹೇಗಿದ್ದವು. ಟ್ಯಾಕ್ಸಿಕ್ ಚಿತ್ರೀಕರಣದ ಸಮಯದಲ್ಲಿ ಹೇಗಿದೆ ಎನ್ನುವ ಸ್ಯಾಟಲೈಟ್ ಚಿತ್ರಗಳನ್ನು ಬಿಡುಗಡೆ ಮಾಡಲಾಗಿತ್ತು. ಅದರಲ್ಲಿ ಅಕ್ರಮವಾಗಿ ಮರಗಳನ್ನು ಕಡಿದದ್ದು ಗಮನಕ್ಕೆ ಬಂದಿತ್ತು ಎಂದು ತಿಳಿಸಿದರು.
ಅನುಮತಿಯಿಲ್ಲದೇ ಅರಣ್ಯ ಪ್ರದೇಶದಲ್ಲಿನ ಮರಗಳನ್ನು ಕಡಿದಿದ್ದರಿಂದಾಗಿ ಟ್ಯಾಕ್ಸಿಕ್ ಚಿತ್ರತಂಡ ಸೇರಿದಂತೆ ಇತರರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಯಾರು ಮರ ಕಡಿದಿದ್ದಾರೋ ಗೊತ್ತಿಲ್ಲ. ಮರ ಕಡಿದವ ವಿರುದ್ಧ ಕಾನೂನು ಕ್ರಮವಾಗಲಿದೆ ಎಂಬುದಾಗಿ ಹೇಳಿದರು.
BREAKING : ನಾನು ಅತ್ಯಾಚಾರ ಮಾಡಿದ್ರೆ ರಕ್ತ ಕಾರಿ ಸಾಯುತ್ತೇನೆ : ಬಿಜೆಪಿ ಶಾಸಕ ಮುನಿರತ್ನ ಹೇಳಿಕೆ
BIG NEWS : ಬೆಂಗಳೂರಲ್ಲಿ ಪೋಲೀಸರ ಭರ್ಜರಿ ಕಾರ್ಯಾಚರಣೆ : 1 ತಿಂಗಳಲ್ಲಿ 140 ಕೆಜಿ ಗಾಂಜಾ ಜಪ್ತಿ, 64 ಜನ ಅರೆಸ್ಟ್!