ಬೆಂಗಳೂರು: ರಾಜ್ಯದ ಅನೇಕ ಜನರಿಗೆ ಈ ಮಾಹಿತಿ ಗೊತ್ತಿಲ್ಲ ಅನಿಸುತ್ತದೆ. ಈ ಹಿಂದೆ ನಾಡ ಕಚೇರಿಗೆ ಜಾತಿ-ಆದಾಯ ಪ್ರಮಾಣ ಪತ್ರದಿಂದ ಹಿಡಿದು, ಇತರೆ ಪ್ರಮಾಣ ಪತ್ರಗಳಿಗಾಗಿ ಅಲೆಯಬೇಕಾಗಿದ್ದು ಈಗ ಇಲ್ಲವೆನ್ನುವುದು. ಹಾಗಾದ್ರೇ ಹೇಗೆ ಎನ್ನುವ ಉದ್ಗಾರ ಬೇಡ. ಜಸ್ಟ್ ಕುಳಿತಲ್ಲಿಯೇ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ, ಶುಲ್ಕವನ್ನು ಸಲ್ಲಿಸಿದರೇ ಸಾಕು, ಆನ್ ಲೈನ್ ನಲ್ಲಿಯೇ ಪ್ರಮಾಣಪತ್ರಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.
ಹೌದು… ಈಗ ನಾಡ ಕಚೇರಿಯ ಬಹುತೇಕ ಸೇವೆಗಳು ನೀವು ಕುಳಿತಲ್ಲಿಯೇ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹಾಗಾದ್ರೇ ಯಾವೆಲ್ಲ ಪ್ರಮಾಣಪತ್ರ ಪಡೆಯಲು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಅನ್ನೋ ಪಟ್ಟಿ ಈ ಕೆಳಗಿದೆ.
ಈ ಎಲ್ಲಾ ಪ್ರಮಾಣಪತ್ರಕ್ಕೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ
- ಕೃಷಿ ಸೇವೆಗಳು
- ಕೃಷಿ ಕಾರ್ಮಿಕ ಪ್ರಮಾಣಪತ್ರ
- ಜಮೀನು ಇಲ್ಲದಿರುವ ಬಗ್ಗೆ ದೃಢೀಕರಣ ಪತ್ರ
- ಗೇಣಿರಹಿತ ದೃಢೀಕರಣ ಪ್ರಮಾಣಪತ್ರ
- ವ್ಯವಸಾಯಗಾರರ ಕುಟುಂಬದ ದೃಢೀಕರಣ ಪತ್ರ
- ಬೊನಾಫೈಡ್ ಪ್ರಮಾಣಪತ್ರ
- ಭೂ ಹಿಡುವಳಿ ಪ್ರಮಾಣಪತ್ರ
- ಸಣ್ಣ, ಅತಿಸಣ್ಣ ಹಿಡುವಳಿದಾರರ ಪ್ರಮಾಣಪತ್ರ
- ಸಾಲ ತೀರಿಸುವ ಶಕ್ತಿ ಪ್ರಮಾಣ ಪತ್ರ
- ಬೆಳೆ ದೃಢೀಕರಣ ಪತ್ರ
- ಜಾತಿ ಪ್ರಮಾಣಪತ್ರ
- ಜಾತಿ ಪ್ರಮಾಣಪತ್ರ
- ಆದಾಯ ಮತ್ತು ಆಸ್ತಿ ಪ್ರಮಾಣಪತ್ರ (ಇಡಬ್ಲೂಎಸ್)
- ಅಲ್ಪಸಂಖ್ಯಾತ ಪ್ರಮಾಣಪತ್ರ
- ಹಿಂದುಳಿದ ವರ್ಗಗಳ ಪ್ರಮಾಣ ಪತ್ರ( ಕೇ ಸ)
- ಜಾತಿ ಪ್ರಮಾಣ ಪತ್ರ( ಆರ್ಯವೈಶ್ಯ)
- ಜಾತಿ ಪ್ರಮಾಣಪತ್ರ( SC/ST ವಲಸಿಗ)
- ಸಾಮಾನ್ಯ ಪ್ರಮಾಣಪತ್ರಗಳು
- ಸರ್ಕಾರಿ ನೌಕರಿ ಇಲ್ಲದಿರುವ ಬಗ್ಗೆ ಪ್ರಮಾಣಪತ್ರ
- ಮರು ಮದುವೆಯಾಗದ ಪ್ರಮಾಣಪತ್ರ
- ಜನಸಂಖ್ಯಾ ಪ್ರಮಾಣಪತ್ರ
- ಮೃತ ಕುಟುಂಬದ ಸದಸ್ಯರ ದೃಢೀಕರಣ ಪತ್ರ
- ನಿರುದ್ಯೋಗಿ ದೃಢೀಕರಣ ಪತ್ರ
- ವಿಧವೆ ಪ್ರಮಾಣಪತ್ರ
- ಕುಟುಂಬ ವಂಶವೃಕ್ಷ ದೃಢೀಕರಣ ಪತ್ರ
- ಹೆಚ್.ಕೆ ಪ್ರದೇಶ ಪ್ರಮಾಣಪತ್ರಗಳು
- ಹೈದ್ರಾಬಾದ್-ಕರ್ನಾಟಕ ಅರ್ಹತಾ ಮತ್ತು ವಾಸಸ್ಥಳ ಪ್ರಮಾಣ ಪತ್ರ
- ಹೈದ್ರಾಬಾದ್-ಕರ್ನಾಟಕ ಅರ್ಹತಾ ಪ್ರಮಾಣ ಪತ್ರ
- ಆದಾಯ ಪ್ರಮಾಣಪತ್ರಗಳು
- ಆದಾಯ ಪ್ರಮಾಣಪತ್ರ
- ಮೇಲುಸ್ಥರಕ್ಕೆ ಸೇರಿಲ್ಲವೆಂದು ದೃಢೀಕರಣ ಪತ್ರ
- ವಾಸ ಸ್ಥಳ ಪ್ರಮಾಣ ಪತ್ರ
- ವಾಸ ಸ್ಥಳ ಪ್ರಮಾಣ ಪತ್ರ
- ನಿವಾಸಿ ಪ್ರಮಾಣ ಪತ್ರ
- ಸಾಮಾಜಿಕ ಭದ್ರತಾ ಯೋಜನೆಗಳು
- ಆಸಿಡ್ ದಾಳಿಗೊಳಗಾದ ಮಹಿಳೆಯ ವೇತನ
- ರೈತರ ವಿಧವಾ ವೇತನ
- ಎಂಡೋಸಲ್ಫಾನ್ ಫಲಾನುಭವಿಗಳಿಗೆ
- ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ದಾಪ್ಯ ವೇತನ
- ಮನಸ್ವಿನಿ
- ಮೈತ್ರಿ
- ರಾಷ್ಟ್ರೀಯ ಕುಟುಂಬ ಕ್ಷೇಮ ಯೋಜನೆ
- ಅಂಗವಿಕಲ ಪೋಷಣಾ ವೇತನ
- ಸಂಧ್ಯಾ ಸುರಕ್ಷಾ ಯೋಜನೆ
- ನಿರ್ಗತಿಕ ವಿಧವಾ ವೇತನ
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಕ್ರಮಗಳು | |
---|---|
![]() |
|
![]() |
|
![]() |
|
![]() |
|
![]() |
|
![]() |
ಅರ್ಜಿ ಸಲ್ಲಿಸುವುದು ಹೇಗೆ?
ಸಾರ್ವಜನಿಕರು https://ajsk.karnataka.gov.in/NK5_Online/Login/Login_Public ಈ ಲಿಂಕ್ ಕ್ಲಿಕ್ ಮಾಡಬೇಕು. ಅಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಿ, ಓಟಿಪಿಗಾಗಿ ಕೋರಿಕೆ ಸಲ್ಲಿಸಬೇಕು. ಆ ಬಳಿಕ ನಿಮ್ಮ ಮೊಬೈಲ್ ಸಂಖ್ಯೆಗೆ ಬರುವಂತ ಓಟಿಪಿ ನಮೂದಿಸಿ ಲಾಗಿನ್ ಮಾಡಬೇಕಾಗುತ್ತದೆ.
ಲಾಗಿನ್ ಆದ ಬಳಿಕ ನಿಮ್ಮ ಕೋರಿಕೆಯ ಪ್ರಮಾಣಪತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು. ಆ ಪ್ರಮಾಣ ಪತ್ರದ ಅನುಸಾರ ಕೇಳುವಂತ ಮಾಹಿತಿಯನ್ನು ಭರ್ತಿ ಮಾಡಬೇಕು. ಆ ನಂತ್ರ ಮಾಹಿತಿಯ ಅನುಸಾರ ಕೇಳುವಂತ ದಾಖಲೆಗಳನ್ನು ನಿಗದಿ ಪಡಿಸಿದಂತ MB ಪ್ರಮಾಣದಂತೆ ಸೂಕ್ತ ಫಾರ್ಮೆಟ್ ನಲ್ಲಿ ಅಪ್ ಲೋಡ್ ಮಾಡಬೇಕು.
ಇದಾದ ಬಳಿಕ ಅರ್ಜಿಯ ಶುಲ್ಕವನ್ನು ಪಾವತಿಸಿ, ಸಲ್ಲಿಸಿದರೇ ನಿಮ್ಮ ಅರ್ಜಿ ಸಲ್ಲಿಕೆಯಾದಂತೆ. ಅರ್ಜಿ ಸಲ್ಲಿಕೆಯಾದ ನಂತ್ರ ಸಕಾಲ ಯೋಜನೆಯ ನಿಗದಿತ ಸಮಯದಡಿ ಸಂಬಂಧಿಸಿದಂತ ಅಧಿಕಾರಿಗಳು ಅರ್ಜಿ ಹಾಗೂ ಅದರೊಂದಿಗೆ ಸಲ್ಲಿಸಿರುವಂತ ದಾಖಲೆಗಳನ್ನು ಪರಿಶೀಲಿಸಿ, ನೀವು ಸಲ್ಲಿಸುರುವಂತ ಪ್ರಮಾಣಪತ್ರವನ್ನು ನೀಡಲು ಅನುಮೋದಿಸಲಿದ್ದಾರೆ.
ನಿಮ್ಮ ಅರ್ಜಿಯ ಸ್ಥಿತಿಯನ್ನು ತಿಳಿಯಲು https://nadakacheri.karnataka.gov.in/NKApp/Home/index ಈ ಲಿಂಕ್ ಕ್ಲಿಕ್ ಮಾಡಿ, ನಿಮ್ಮ ಅರ್ಜಿ ಸಲ್ಲಿಕೆಯ ನಂತ್ರ ನೀಡುವಂತ ಅರ್ಜಿ ನೋಂದಣಿ ಸಂಖ್ಯೆಯನ್ನು ನಮೂದಿಸಿದರೇ ದೊರೆಯಲಿದೆ.
ನೆನಪಿಡುವ ವಿಷಯಗಳು | |
---|---|
![]() |
|
![]() |
|
![]() |
|
![]() |
|
![]() |
|
![]() |
|
![]() |
|
ಸೋ ಹೀಗೆ ಆನ್ ಲೈನ್ ಮೂಲಕ ನೀವು ನಾಡ ಕಚೇರಿಗೆ ಸಂಬಂಧಿಸಿದಂತ ಈ ಎಲ್ಲಾ ಪ್ರಮಾಣಪತ್ರಗಳಿಗೆ ಕುಳಿತಲ್ಲೇ ಸೂಕ್ತ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಿ ಪಡೆಯಬಹುದು. ಆ ಮೂಲಕ ವಿಎ, ಆರ್ ಐ ಬಳಿಯೂ ಅಲೆಯದೇ ಅವರ ಕೆಲಸ ಅವರು ಮಾಡಲು ಬಿಟ್ಟು ಪ್ರಮಾಣಪತ್ರವನ್ನು ನೀವು ಕುಳಿತಲ್ಲಿಯೇ ಪಡೆಯಿರಿ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
ಭಾರತೀಯ ಸೇನೆಗೆ ಸೇರ ಬಯಸೋರಿಗೆ ಗುಡ್ ನ್ಯೂಸ್: ಉಚಿತ ಮಾರ್ಗದರ್ಶನ, ತರಬೇತಿಗೆ ಅರ್ಜಿ ಆಹ್ವಾನ
500 ಕೋಟಿಗೂ ಹೆಚ್ಚು ಬಾರಿ ಮಹಿಳೆಯರು ಪ್ರಯಾಣ: ವಿಶ್ವ ದಾಖಲೆ ಬರೆದ ಕರ್ನಾಟಕದ ಶಕ್ತಿ ಯೋಜನೆ | Shakti Scheme