ರಷ್ಯಾ : ಉಕ್ರೇನ್ ಮೇಲೆ ಬೃಹತ್ ಹೊಸ ದಾಳಿಗಳ ಅಗತ್ಯವಿಲ್ಲ, ರಷ್ಯಾ ದೇಶವನ್ನು ನಾಶಮಾಡಲು ನೋಡುತ್ತಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶುಕ್ರವಾರ ಹೇಳಿದರು.
‘ರಾಜ್ಯ ಸರ್ಕಾರಿ ನೌಕರ’ರಿಗೆ ದೀಪಾವಳಿ ಗಿಫ್ಟ್: ‘7ನೇ ವೇತನ ಆಯೋಗ’ ರಚನೆ ಬಗ್ಗೆ ‘ಸಿಎಂ ಬೊಮ್ಮಾಯಿ’ ಘೋಷಣೆ
ಕಝಾಕಿಸ್ತಾನ್ನಲ್ಲಿ ನಡೆದ ಶೃಂಗಸಭೆಯ ಕೊನೆಯಲ್ಲಿ ಪುಟಿನ್ ಸುದ್ದಿಗೋಷ್ಠಿಯಲ್ಲಿ, ರಷ್ಯಾದ ಮೀಸಲುದಾರರ ಕರೆ ಎರಡು ವಾರಗಳಲ್ಲಿ ಮುಗಿಯಲಿದೆ. ಮುಂದಿನ ದಿನಗಲ್ಲಿ ಸಜ್ಜುಗೊಳಿಸುವ ಯಾವುದೇ ಯೋಜನೆಗಳಿಲ್ಲ ಎಂದು ಹೇಳಿದರು.
ಉಕ್ರೇನ್ ಭಾಗವಹಿಸಲು ಸಿದ್ಧವಾಗಿದ್ದರೆ ಅವರಿಗೆ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಅಗತ್ಯವಿರುತ್ತದೆ. ಉಕ್ರೇನ್ ಜೊತೆ ಮಾತುಕತೆ ನಡೆಸಲು ರಷ್ಯಾ ಸಿದ್ಧವಾಗಿದೆ ಎಂಬ ಕ್ರೆಮ್ಲಿನ್ ನಿಲುವನ್ನು ಅವರು ಪುನರಾವರ್ತಿಸಿದರು.
Russian Pres Putin says "No" when asked if he had regrets about the conflict in Ukraine, & that Russia was doing the right thing: Reuters
Speaking at a press conference in Kazakh capital Astana, Putin said it wasn't Russia's objective to destroy Ukraine, reports the news agency. pic.twitter.com/6lC3ATt26n
— ANI (@ANI) October 14, 2022
ವಾರಗಳ ಉಕ್ರೇನಿಯನ್ ಪ್ರಗತಿ ಮತ್ತು ಗಮನಾರ್ಹ ರಷ್ಯಾದ ಸೋಲುಗಳು ಪುಟಿನ್ ಅವರನ್ನು ಕೊಂಚ ಮೇದುಗೊಳಿಸಿದೆ ಎಂದೇನಿಸುತ್ತದೆ. ಉಕ್ರೇನ್ ಮತ್ತು ರಷ್ಯಾದ ನಡುವೆ ನಡೆಯುತ್ತಿರುವ ಯುದ್ಧ 8 ನೇ ತಿಂಗಳಿಗೆ ಕಾಲಿಡುತ್ತಿದೆ.
ಕೆಲ ದಿನಗಳ ಹಿಂದೆ ರಷ್ಯಾದ ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಲು ಸಿದ್ಧ ಎಂದು ಹೇಳಿದ್ದ ಪುಟಿನ್ ,ರಷ್ಯಾದೊಂದಿಗೆ NATO ಪಡೆಗಳ ನೇರ ಘರ್ಷಣೆಯ ಸಂದರ್ಭದಲ್ಲಿ ಜಾಗತಿಕ ದುರಂತದ ಬಗ್ಗೆಯೂ ಎಚ್ಚರಿಕೆ ನೀಡಿದ್ದರು.
ಫೆಬ್ರವರಿ 24ರಿಂದ ಉಕ್ರೇನ್- ರಷ್ಯಾದ ನಡುವೆ ಯುದ್ಧ ಪ್ರಾರಂಭದಿಂದಲೂ ಕೈವ್ ಮತ್ತು ಇತರ ಉಕ್ರೇನಿಯನ್ ನಗರಗಳ ಮೇಲೆ ರಷ್ಯಾ ತನ್ನ ಭಾರೀ ಕ್ಷಿಪಣಿ ದಾಳಿಯನ್ನು ನಡೆಸುತ್ತಿದೆ. ಕೆಲ ದಿನಗಳ ಹಿಂದೆ ಉಕ್ರೇನ್ ಕ್ರೈಮಿಯಾ ಸೇತುವೆ ಮೇಲೆ ದಾಳಿ ನಡೆಸಿತ್ತು. ಇದರಿಂದ ಕೋಪಗೊಂಡಿದ್ದ ಪುಟಿನ್ ಮರುದಿನ ಉಕ್ರೇನ್ ಮೇಲೆ ಬಹು ಕ್ಷಿಪಣಿ ದಾಳಿ ನಡೆಸಿದ್ದರು. ಇದು ಕ್ರೈಮಿಯಾ ಸೇತುವೆ ಹಾನಿಗೊಳಗಾಗಿದ್ದಕ್ಕೆ ಪ್ರತಿಕಾರ ಎಂದೇಳಿದ್ದರು.
Russian President Putin says that India and China supported "peaceful dialogue" in Ukraine, a month after their leaders appeared to differ with him over the conflict at a summit in Uzbekistan last month: Reuters
(file photo) pic.twitter.com/06D64nB4O5
— ANI (@ANI) October 14, 2022
ನಾವು ಉಕ್ರೇನ್ ಅನ್ನು ನಾಶಮಾಡುವ ಉದ್ದೇಶ ಹೊಂದಿಲ್ಲ, ಖಂಡಿತ ಇಲ್ಲ ಪುಟಿನ್ ಹೇಳಿದ್ದಾರೆ.