ಕೆಎನ್ ಎನ್ ನ್ಯೂಸ್ ಡೆಸ್ಕ್ : ಇಂದಿನ ದಿನದಲ್ಲಿ ಎಲ್ಲರೂ ಆರೋಗ್ಯಕರವಾಗಿ ಫಿಟ್ ಆಗಲು ಬಯಸುತ್ತಾರೆ. ಕೆಲವರು ತೂಕ ಇಳಿಸಿಕೊಳ್ಳಲು ಜಿಮ್ ಸೇರುತ್ತಾರೆ. ಆದರೆ ಸಣ್ಣ ಆಗಬೇಕೆಂದು ಜಿಮ್ ಹೋಗುವವರಲ್ಲಿ ಕೆಲವರು, ಎಷ್ಟೇ ಕಸರತ್ತು ಮಾಡಿದರೂ ಒಂದಿಷ್ಟೂ ತೂಕ ಕಡಿಮೆಯಾಗುತ್ತಿಲ್ಲ ಎಂದು ದೂರುವುದನ್ನು ನಾವು ಕೇಳಿರುತ್ತೇವೆ. ಆದರೆ ಇದಕ್ಕೆಲ್ಲಾ ಅವರು ಅನುಸರಿಸುವ ಆಹಾರ ಪದ್ಧತಿಯೇ ಕಾರಣ.
ಫೇಸ್ ಸಿರಮ್ ಖರೀದಿಸುವ ಮುನ್ನ ಮಹಿಳೆಯರೇ ಎಚ್ಚರ; ಸ್ವಲ್ಪ ಯಾಮಾರಿದ್ರಾ ಸಮಸ್ಯೆ ತಪ್ಪಿದ್ದಲ್ಲ
ಹೆಚ್ಚಿನ ಜನರಿಗೆ ಜಿಮ್ನಲ್ಲಿ ವರ್ಕೌಟ್ ಮಾಡಿದ ನಂತರ ಏನಾದರೂ ಸೇವಿಸುವ ಅಭ್ಯಾಸ ಹೊಂದಿರುತ್ತಾರೆ. ಆದರೆ ಅವುಗಳನ್ನು ತಿನ್ನುವಾಗ ಸರಿಯಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ಮಾತ್ರ ಉತ್ತಮ ಫಲಿತಾಂಶ ಬರುತ್ತದೆ. ನೀವು ತೂಕವನ್ನು ಕಳೆದುಕೊಳ್ಳಲು ಅಥವಾ ಪರಿಪೂರ್ಣ ದೇಹದ ಆಕಾರವನ್ನು ಹೊಂದಲು ಬಯಸಿರೆ, ವರ್ಕೌಟ್ ನಂತರ ಏನು ತಿನ್ನಬೇಕು ಮತ್ತು ಕುಡಿಯಬೇಕು ಎಂಬುದರ ಬಗ್ಗೆ ಕೂಡಾ ಜಾಗರೂಕರಾಗಿರಬೇಕು.
ಜಿಮ್ ನಂತರ ಸಲಾಡ್ ತಿನ್ನುವುದು ಒಳ್ಳೆಯದಲ್ಲ. ಇದರಲ್ಲಿ ನಾರಿನಂಶ ಅಧಿಕವಾಗಿದೆ. ಇದನ್ನು ಜೀರ್ಣಿಸಿಕೊಳ್ಳಲು ಹೆಚ್ಚಿನ ಶಕ್ತಿಯ ಅಗತ್ಯವಿರುತ್ತದೆ. ವರ್ಕೌಟ್ ಮಾಡಿದ ನಂತರ ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ. ಇದರಿಂದಾಗಿ ತಿಂದ ಆಹಾರ ಸುಲಭವಾಗಿ ಜೀರ್ಣವಾಗುವುದಿಲ್ಲ. ಇದರ ಬದಲಿಗೆ ಸುಲಭವಾಗಿ ಜೀರ್ಣವಾಗುವ ಬಾಳೆಹಣ್ಣು, ಪ್ರೋಟೀನ್ ಪೌಡರ್ ಸ್ಮೂಥಿಗಳನ್ನು ಕುಡಿಯುವುದು, ಕಾರ್ಬೋಹೈಡ್ರೇಟ್ ಮತ್ತು ಪ್ರೋಟೀನ್ ಆಹಾರವನ್ನು ಸೇವಿಸುವುದು ಉತ್ತಮ.
ಫೇಸ್ ಸಿರಮ್ ಖರೀದಿಸುವ ಮುನ್ನ ಮಹಿಳೆಯರೇ ಎಚ್ಚರ; ಸ್ವಲ್ಪ ಯಾಮಾರಿದ್ರಾ ಸಮಸ್ಯೆ ತಪ್ಪಿದ್ದಲ್ಲ
ಹೆಚ್ಚಿನ ಜನರು ವ್ಯಾಯಾಮದ ನಂತರ ಸ್ಪೋರ್ಟ್ಸ್ ಡ್ರಿಂಕ್ಸ್ ಕುಡಿಯುತ್ತಾರೆ. ಆದರೆ ತಜ್ಞರ ಪ್ರಕಾರ ಒಂದು ಗಂಟೆಯಿಂದ ಒಂದೂವರೆ ಗಂಟೆಯೊಳಗೆ ವರ್ಕ್ ಔಟ್ ಮಾಡಿ ಮುಗಿಸಿದರೆ ಸ್ಪೋರ್ಟ್ಸ್ ಡ್ರಿಂಕ್ ಕುಡಿಯುವ ಅವಶ್ಯಕತೆ ಇಲ್ಲ. ಆರೋಗ್ಯಕರ ಆಹಾರಗಳನ್ನು ಸೇವಿಸಿದರೆ ಸಾಕು. ಇದು ವರ್ಕೌಟ್ ಮೂಲಕ ಕಳೆದುಕೊಂಡ ಎಲೆಕ್ಟ್ರೋಲೈಟ್ಗಳನ್ನು ಪುನಃಸ್ಥಾಪಿಸುತ್ತದೆ. ಹೆಚ್ಚಿನ ಸ್ಪೋರ್ಟ್ಸ್ ಡಿಂಕ್ಸ್ಗಳಲ್ಲಿ ಸಂಸ್ಕರಿಸಿದ ಸಕ್ಕರೆಯ ಅಂಶ ಹೆಚ್ಚಿರುತ್ತದೆ. ಇದರಿಂದ ಆರೋಗ್ಯ ಹಾಳಾಗುತ್ತದೆ.