ರಾಮನಗರ : ಲೋಕಸಭಾ ಚುನಾವಣೆಗೆ ಜಯದೇವ ಆಸ್ಪತ್ರೆಯ ನಿವೃತ್ತ ನಿರ್ದೇಶಕರಾದಂತಹ ಡಾಕ್ಟರ್ ಮಂಜುನಾಥ್ ಸ್ಪರ್ಧಿಸುವ ವಿಚಾರವಾಗಿ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಪ್ರತಿಕ್ರಿಯೆ ನೀಡಿದ್ದು ಡಿಕೆ ಸುರೇಶ್ ವಿರುದ್ಧ ಸ್ಪರ್ಧಿಸಲು ನಿಮಗೆ ಗಂಡಸ್ತನ ತಾಕತ್ ಇಲ್ವಾ ಡಾಕ್ಟರ್ ಮಂಜುನಾಥ್ ಅವರನ್ನು ಹರಕೆ ಕುರಿ ಮಾಡುತ್ತಿದ್ದೀರಾ ಎಂದು ಟಾಂಗ್ ನೀಡಿದರು.
BREAKING : ‘ಕಾಂಗ್ರೆಸ್’ಗೆ ಬಿಗ್ ಶಾಕ್ : ಬ್ಯಾಂಕ್ ಖಾತೆಗಳ ಮೇಲಿನ ‘IT ಕ್ರಮ’ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ
ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ ಕೆ ಸುರೇಶ್ ವಿರುದ್ಧ ನಿಲ್ಲಲು ನಿಮಗೆ ಗಂಡಸ್ತನ ತಾಕತ್ ಇಲ್ವಾ? ಎಂದು ಬಿಜೆಪಿ ನಾಯಕರಿಗೆ ಕೈ ಶಾಸಕ ಇಕ್ಬಾಲ್ ಹುಸೇನ್ ಟಾಂಗ್ ನೀಡಿದ್ದಾರೆ. ಪಾಪ ಡಾ. ಮಂಜುನಾಥ್ ಅವರನ್ನು ಹರಕೆಯ ಕುರಿ ಮಾಡುತ್ತಿದ್ದಾರೆ. ಮಂಜುನಾಥ್ ಒಳ್ಳೆಯ ಡಾಕ್ಟರ್ ರಾಜಕೀಯಕ್ಕೆ ಅಮಾಯಕರು ಆಗಿದ್ದಾರೆ ಎಂದು ರಾಮನಗರದಲ್ಲಿ ಕೈ ಶಾಸಕ ಇಕ್ಬಾಲ್ ಹುಸೇನ್ ಬಿಜೆಪಿಗೆ ಕೌಂಟರ್ ನೀಡಿದ್ದಾರೆ.
‘ಕಷ್ಟ ಕಾಲದಲ್ಲಿ’ ಕೇಂದ್ರ ಸರ್ಕಾರ ನಮ್ಮ ‘ಪಾಲಿನ ಹಣ’ ನಮಗೆ ನೀಡಲಿಲ್ಲ : ಡಿಸಿಎಂ ಡಿಕೆಶಿ ವಾಗ್ದಾಳಿ
ಡಿಕೆ ಸುರೇಶ್ ವಿರುದ್ಧ ಅಶ್ವತ್ ನಾರಾಯಣ ಉಸ್ತುವಾರಿ ಮಂತ್ರಿ ಆಗಿದ್ದವರು ಅವರೇ ಸ್ಪರ್ಧೆ ಮಾಡಬಹುದಾಗಿತ್ತು ಅಲ್ವಾ? ಸುರೇಶ್ ವಿರುದ್ಧ ಮಾಜಿ ಮುಖ್ಯಮಂತ್ರಿಗಳಿಗೆ ನಿಲ್ಲು ತಾಕತ್ತು ಇಲ್ವಾ? ಎಂದು ಬಿಜೆಪಿ ನಾಯಕರಿಗೆ ಹಾಗೂ ಮಾಜಿ ಮುಖ್ಯಮಂತ್ರಿ HDK ವಿರುದ್ಧ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಟಾಂಗ್ ನೀಡಿದರು.
BREAKING : ವಿಧಾನಸಭೆಯಲ್ಲಿ ‘ವಿಶ್ವಾಸಮತ’ ಗೆದ್ದ ಹರಿಯಾಣ ನೂತನ ಸಿಎಂ ‘ನಯಾಬ್ ಸೈನಿ’
ರಾಮನಗರ ಹೊಸದಾಗಿ ನಿರ್ಮಾಣ ಮಾಡುತ್ತೆನೆಂದು ಹೇಳಿದವರು ಅವರೇ, ಪಾಪ ಅಮಾಯಕ ಮಂಜುನಾಥ ಅವರನ್ನು ತಂದು ಹರಕೆಯ ಕುರಿಯನ್ನು ಮಾಡುತ್ತಿದ್ದಾರೆ. ಅವರಿಗೆ ಏನು ಗೊತ್ತು ರಾಜಕಾರಣ? ನಿಮ್ಮ ಕುಟುಂಬದಲ್ಲಿ ಬಿಟ್ರೆ ಬೇರೆ ಯಾರು ಇಲ್ವಾ? ಡಿ ಕೆ ಸುರೇಶ್ ಸೋಲಿಸಲು ನಿಮ್ಮಲ್ಲಿ ಯಾವ ಕ್ಯಾಂಡಿಡೇಟ್ ಇಲ್ಲ ಅಂತ ಅರ್ಥ. ಹಾಗಾಗಿ ನೀವು ಡಾಕ್ಟರ್ ಮಂಜುನಾಥ್ ಅವರನ್ನು ನಿಲ್ಲಿಸುತಿದ್ದೀರಾ ಎಂದು ನೇರವಾಗಿ ಹೆಚ್ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.