ನವದೆಹಲಿ : ಚಂಡೀಗಢವನ್ನು ಸಂವಿಧಾನದ 240 ನೇ ವಿಧಿಯ ಅಡಿಯಲ್ಲಿ ತರುವ ಕೇಂದ್ರ ಸರ್ಕಾರದ ಪ್ರಸ್ತಾವವು ಪಂಜಾಬಿನಲ್ಲಿ ರಾಜಕೀಯ ಗದ್ದಲ ಸೃಷ್ಟಿಸಿದೆ. ಕೇಂದ್ರವು ಕೇವಲ ಶಾಸನ ಸರಳಗೊಳಿಸುವ ಬಗ್ಗೆ ಪರಿಶೀಲಿಸುತ್ತಿದೆ, ಅಂತಿಮ ನಿರ್ಧಾರವಾಗಿಲ್ಲ ಎಂದು ಸ್ಪಷ್ಟಪಡಿಸಿದೆ.
ಹೌದು ಕೇಂದ್ರ ಸರ್ಕಾರವು ಚಂಡೀಗಢವನ್ನು ಸಂವಿಧಾನದ 240 ನೇ ವಿಧಿಯ ಅಡಿಯಲ್ಲಿ ತರುವ ಬಗ್ಗೆ ಪರಿಶೀಲನೆ ನಡೆಸುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ, ಪಂಜಾಬಿನಲ್ಲಿ ರಾಜಕೀಯ ಗದ್ದಲ ಹೆಚ್ಚಾಗಿದೆ.ಚಂಡೀಗಢವನ್ನು ಸಂವಿಧಾನದ 240 ನೇ ವಿಧಿಯ ಅಡಿಯಲ್ಲಿ ತರುವ ಬಗ್ಗೆ ಪರಿಶೀಲನೆ ನಡೆಯುತ್ತಿದ್ದು, ಆದರೆ ಇದುವರೆಗೂ ಯಾವುದೇ ಅಂತಿಮ ನಿರ್ಧಾವಾಗಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಪಂಜಾಬಿನ ರಾಜಧಾನಿಯನ್ನು ಕಬಳಿಸಲು ಸಂಚು ನಡೆಸುತ್ತಿದೆ. ಚಂಡೀಗಢವು ಪಂಜಾಬಿನ ಭಾಗವಾಗಿತ್ತು, ಇದೆ ಮತ್ತು ಯಾವಾಗಲೂ ಇರುತ್ತದೆ ಎಂದು ಅವರು ಹೇಳಿದರು. ಈ ತಿದ್ದುಪಡಿಯನ್ನು ಅಂಗೀಕರಿಸಲು ರಾಜ್ಯವು ಬಿಡುವುದಿಲ್ಲ ಎಂದು ಪಂಜಾಬಿನ ಮುಖ್ಯಮಂತ್ರಿ ಭಗವಂತ್ ಮಾನ್ ಸ್ಪಷ್ಟನೆ ನೀಡಿದರು.








