ರಾಯಚೂರು: ತಾಲೂಕಿನ ದೇವಸುಗೂರಿನ ಸುಗೂರೇಶ್ವರ ದೇವಸ್ಥಾನ ತನ್ನ ವಿಶಿಷ್ಠ ವಾಸ್ತುಶಿಲ್ಪದಿಂದ ಗ್ರಹಣ ಮುಕ್ತವಾಗಿದೆ. ಹೀಗಾಗಿ ಕೇತುಗ್ರಸ್ತ ಸೂರ್ಯಗ್ರಹಣದ ವೇಳೆಯೂ ಎಂದಿನಂತೆ ಪೂಜಾ ಕೈಂಕರ್ಯಗಳು ನೆರವೇರುತ್ತಿವೆ.
BIGG NEWS: ಐಕ್ಯತಾ ಯಾತ್ರೆ ಈಗ ಆಂದೋಲನವಾಗಿ ಮಾರ್ಪಟ್ಟಿದೆ; ಭಾರತ್ ಜೋಡೋ ಯಾತ್ರೆ ಬಗ್ಗೆ ಡಿ.ಕೆ ಶಿವಕುಮಾರ್ ಮಾತು
ಇತ್ತ ಮಂತ್ರಾಲಯದಲ್ಲೂ ರಾಘವೇಂದ್ರ ಸ್ವಾಮಿ ಮಠ ಹಾಗೂ ರಾಯರ ಶಾಖಾ ಮಠಗಳಲ್ಲಿ ಭಕ್ತರಿಗೆ ಯಾವುದೇ ನಿರ್ಬಂಧವಿಲ್ಲ. ಎಂದಿನಂತೆ ರಾಯರ ವೃಂದಾವನ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಗ್ರಹಣದ ವೇಳೆ ದಿನನಿತ್ಯದ ಪೂಜೆ ಪುರಸ್ಕಾರಗಳಿಗೆ ಮಾತ್ರ ನಿರ್ಬಂಧ ಮಾಡಲಾಗಿದೆ. ಗ್ರಹಣದ ಬಳಿಕ ರಾಯರ ಮಠದಲ್ಲಿ ಗ್ರಹಣ ಶಾಂತಿ ಹೋಮ ನಡೆಯಲಿದೆ. ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥ ಸ್ವಾಮಿ ಗ್ರಹಣ ಶಾಂತಿ ಹೋಮ ನೆರವೇರಿಸಲಿದ್ದಾರೆ.
BIGG NEWS: ಐಕ್ಯತಾ ಯಾತ್ರೆ ಈಗ ಆಂದೋಲನವಾಗಿ ಮಾರ್ಪಟ್ಟಿದೆ; ಭಾರತ್ ಜೋಡೋ ಯಾತ್ರೆ ಬಗ್ಗೆ ಡಿ.ಕೆ ಶಿವಕುಮಾರ್ ಮಾತು
ಇನ್ನೂ ರಾಯಚೂರಿನ ಜವಾಹರ್ ನಗರದ ರಾಘವೇಂದ್ರ ಸ್ವಾಮಿಗಳ ಶಾಖಾ ಮಠ ಹಾಗೂ ಸತ್ಯನಾಥ ಕಾಲೋನಿಯ ಉತ್ತರಾಧಿ ಮಠದಲ್ಲಿ ಗ್ರಹಣದ ವೇಳೆ ಗ್ರಹಣ ಶಾಂತಿ ಹೋಮ ಹಾಗೂ ಗೋಗ್ರಾಸ ಹೋಮ ಜರುಗಲಿವೆ. ಗ್ರಹಣದ ಬಳಿಕ ದೇವಾಲಯ, ಮಠಗಳ ಸ್ವಚ್ಛತಾ ಕಾರ್ಯ ನಡೆಯಲಿದೆ.