ಬೆಂಗಳೂರು : ಇತ್ತೀಚೆಗೆ, ಬೆಂಗಳೂರು ನಗರದಲ್ಲಿ ಮೊಬೈಲ್ ಸ್ನ್ಯಾಚಿಂಗ್ ಹೆಚ್ಚಾಗುತ್ತಿದೆ. ಪೊಲೀಸರು ಕೂಡ ಶ್ರಮವಹಿಸಿ ಮೊಬೈಲ್ ಕಳ್ಳರನ್ನ ಬಂಧಿಸುತ್ತಲೇ ಇದ್ದಾರೆ. ಆದರೆ ಮೊಬೈಲ್ ಸ್ನ್ಯಾಚರ್ಸ್ ಹಾವಳಿ ಕಡಿಮೆಯಾಗುತ್ತಿಲ್ಲ. ಹೀಗಾಗಿ ನಗರ ಪೊಲೀಸರು ಹೊಸ ವಿಧಾನ ಕಂಡುಕೊಂಡಿದ್ದಾರೆ.
ಹೌದು ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಕಳ್ಳರಿಗೂ ಬೆಂಗಳೂರು ಪೊಲೀಸರು ಒಂದು ಅವಕಾಶವನ್ನು ನೀಡಿದ್ದು ತಾವು ಕಳ್ಳತನ ಮಾಡಿರುವ ಮೊಬೈಲ್ ಗಳನ್ನು ಠಾಣೆಗಳಿಗೆ ಪೋಸ್ಟ್ ಮಾಡಿದರೆ ಸಾಕು ಅವರ ಮೇಲೆ ಕೇಸ್ ದಾಖಲಿಸದಿರಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಾಕಿ ಟ್ರಾಫಿಕ್ ದಂಡ ಪಾವತಿಗಾಗಿ ಪ್ರಯೋಗಿಸಿದ ಡಿಸ್ಕೌಂಟ್ ಆಫರ್ ಯಶಸ್ವಿ ಬೆನ್ನಲ್ಲೇ,ಇದೀಗ ಇಂತಹ ಪ್ರಯೋಗಕ್ಕೆ ಮುಂದಾಗಿದ್ದು, ವಿಶೇಷವಾಗಿದೆ.ಈ ಮೂಲಕ ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರು ಪೊಲೀಸರು ಕಳ್ಳರಿಗೂ ಒಂದು ಅವಕಾಶವನ್ನು ನೀಡಿದ್ದಾರೆ.
ತಪ್ಪನ್ನು ಅರಿತು ಮೊಬೈಲ್ ಪೋಸ್ಟ್ ಬಾಕ್ಸ್ಗೆ ಹಾಕಬೇಕು. ಆದರೆ ಕಳ್ಳತನ ಮಾಡಿಯೂ ಪೊಲೀಸರು ಕೊಟ್ಟ ಅವಕಾಶವನ್ನ ಮಿಸ ಯೂಸ್ ಮಾಡಿದರೆ ಕ್ರಮ ಕೈಗೊಳ್ಳುತ್ತಾರೆ. ಅಕಸ್ಮಾತ್, ಮೊಬೈಲ್ ರಸ್ತೆಯಲ್ಲಿ ಸಿಕ್ಕಿದರೂ ಕೂಡ ಪೊಲೀಸ್ ಠಾಣೆಗೆ ಒಪ್ಪಿಸುವ ಪ್ರಮೇಯ ಇಲ್ಲ. ಅಂತಹ ಮೊಬೈಲ್ಗಳನ್ನೂ ಪೋಸ್ಟ್ ಬಾಕ್ಸ್ಗೆ ಹಾಕಿದರೆ ಸಾಕು. ಈ ಮೊಬೈಲ್ಗಳನ್ನು ಮಾಲೀಕರಿಗೆ ತಲುಪಿಸುವ ಜವಾಬ್ದಾರಿ ಪೊಲೀಸರದ್ದು.
ಕೆಲವೇ ಕ್ಷಣಗಳಲ್ಲಿ ಸಿಎಂ ಸಿದ್ಧರಾಮಯ್ಯ ‘ರಾಜ್ಯ ಬಜೆಟ್’ ಮಂಡನೆ ಆರಂಭ: ‘173 ಪುಟ’ಗಳ ಅಯವ್ಯಯ ಮಂಡನೆ
ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ ಸಿಎಂ ಸಿದ್ದರಾಮಯ್ಯ : ಸೂಟ್ಕೇಸ್ ಬದಲು ‘ಲೀಡ್ಕರ್ ಬ್ಯಾಗ್’ ನಲ್ಲಿ ಬಜೆಟ್ ಪ್ರತಿ