ಮಂಡ್ಯ : ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ರೀತಿಯಾಗಿ ಸಂಪುಟ ಪುನರಚನೆ ಇಲ್ಲ ಎಂದು ಕೃಷಿ ಇಲಾಖೆಯ ಸಚಿವ ಎನ್. ಚೆಲುವರಾಯಸ್ವಾಮಿ ಸ್ಪಷ್ಟನೆ ನೀಡಿದರು.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರಿಗೂ ಅಧಿಕಾರ, ಸಚಿವ ಸ್ಥಾನ ಪಡೆದುಕೊಳ್ಳಲು ಹಕ್ಕಿದೆ.ಪಕ್ಷದಲ್ಲಿ ಎಲ್ಲರೂ ಅಧಿಕಾರ ಕೊಡಬೇಕು. ಹೀಗಾಗಿ ಸಂಪುಟ ಪುನಾರಚನೆ ಅಥವಾ ಖಾತೆ ಬದಲಾವಣೆ ಮಾಡೋದು ಸಹಜ. ಆದರೆ, ಈಗ ಆ ವಿಚಾರ ಚರ್ಚೆಯಲ್ಲಿ ಇಲ್ಲ ಎಂದು ತಿಳಿಸಿದರು.
ಇನ್ನೂ HDK ವಿರುದ್ಧ ವಾಗ್ದಾಳಿ ನಡೆಸಿದ ಅವರು,ಕುಮಾರಸ್ವಾಮಿ ಬೆಳಗ್ಗೆ ಎದ್ದರೆ ಸಾಕು ಸರ್ಕಾರ ತೆಗೀತೀವಿ ಅಂತಾರೆ. ಅದೇನು ಮಕ್ಕಳ ಆಟನಾ?. ಡಿ.ಕೆ.ಶಿವಕುಮಾರ್ ನಿಂದಿಸುವುದೇ ಕೆಲಸ ಅಂದುಕೊಂಡಿದ್ದಾರಾ. ಕುಮಾರಸ್ವಾಮಿ ಎರಡು ಬಾರಿ ಸಿಎಂ ಆದಾಗ ಅವರ ಜೊತೆ ನಿಂತಿದ್ದು ಒಕ್ಕಲಿಗರೇ. ಮೊದಲ ಬಾರಿಗೆ ಸಿಎಂ ಆದಾಗ ಒಕ್ಕಲಿಗ ಚಲುವರಾಯಸ್ವಾಮಿ ಅವರ ಜೊತೆ ನಿಂತಿದ್ದರು. ಎರಡನೇ ಬಾರಿಗೆ ಸಿಎಂ ಮಾಡಿದ್ದು ಡಿ.ಕೆ.ಶಿವಕುಮಾರ್. ಇದನ್ನು ಅವರು ಮರೆಯಬಾರದು ಎಂದು ತಿರುಗೇಟು ನೀಡಿದರು.
ನಿನ್ನೆ ಭತ್ತದ ನಾಟಿ ಮಾಡಿದ್ದಾರೆ. ನಾನು ನಾಟಿ ಅಷ್ಟೆ ಅಲ್ಲ ಉಳುಮೆ ಕೂಡ ಮಾಡುತ್ತೇನೆ.ಬೇರೆ ಕಡೆಗೆ ಹೋದಾಗ ಟ್ರ್ಯಾಕ್ಟರ್ ಎಲ್ಲಾ ಓಡಿಸುತ್ತೇನೆ. ಅದನ್ನು ರಾಜಕೀಯ ವಿಚಾರ ಮಾಡುವುದಿಲ್ಲ. ನಾನು ನಾಟಿ ಮಾತ್ರ ಮಾಡುವುದಿಲ್ಲ. ನೇಗಿಲು ಹಿಡಿದು ಉಳುಮೆನೂ ಮಾಡುತ್ತೇನೆ. ಜಿಲ್ಲೆಯ ರೈತರಿಗೆ ಹೊಸ ಮಾದರಿಯಲ್ಲಿ ನಾಟಿ ಮಾಡೋದನ್ನ ಕಲಿಸೋಕೆ ಬಂದಿದ್ದರೇನೋ ಪಾಪ.. ಮಂಡ್ಯ ಜನರಿಗೆ ಹುಟ್ಟುತ್ತಲೇ ಭತ್ತ, ಕಬ್ಬು ನಾಟಿ ಮಾಡೋದು ಗೊತ್ತಿದೆ. ಅವರು ಯುವಕರಿಗೆ ಕೆಲಸ ಕೊಡಿಸುತ್ತೇನೆ ಎಂದಿದ್ದಾರೆ ಎಂದರು.