ಬೆಂಗಳೂರು : ರಾಜ್ಯದ ಪ್ರತಿಷ್ಠಿತ ಸರ್ಕಾರಿ ಹಾಗೂ ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಇದೀಗ ರಾಷ್ಟ್ರೀಯ ವೈದ್ಯಕೀಯ ಆಯೋಗವು ದಂಡ ವಿಧಿಸಿದೆ. ಇದಕ್ಕೆ ಪ್ರಮುಖ ಕಾರಣ ವೈದ್ಯಕೀಯ ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯಗಳು ಇಲ್ಲದಿರುವುದನ್ನು ಗಮನಿಸಿ ಇದೀಗ ರಾಜ್ಯದ ಸರ್ಕಾರಿ ಹಾಗೂ ಖಾಸಗಿಯ ಒಟ್ಟು 27 ಕಾಲೇಜುಗಳಿಗೆ ಆಯೋಗ ದಂಡ ವಿಧಿಸಿದೆ.
ಹೌದು ಮೆಡಿಕಲ್ ಕಾಲೇಜುಗಳಲ್ಲಿ ಮೂಲಸೌಕರ್ಯದ ಕೊರತೆ ಹಿನ್ನೆಲೆಯಲ್ಲಿ ಕಾಲೇಜುಗಳಿಗೆ ದಂಡ ವಿಧಿಸಿದ ರಾಷ್ಟ್ರೀಯ ವೈದ್ಯಕೀಯ ಆಯೋಗವು ರಾಜ್ಯದ ಸರ್ಕಾರಿ ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ದಂಡ ವಿಧಿಸಿದೆ. ಒಟ್ಟು 27 ಮೆಡಿಕಲ್ ಕಾಲೇಜುಗಳಿಗೆ ಆಯೋಗದ ದಂಡ ವಿಧಿಸಿದೆ ಎನ್ನಲಾಗಿದೆ. 11 ಖಾಸಗಿ ಕಾಲೇಜು ಸೇರಿ 27 ಕಾಲೇಜು ಗಳಿಗೆ ದಂಡ ವಿಧಿಸಲಾಗಿದೆ ಒಟ್ಟು 2 ಲಕ್ಷದಿಂದ 15 ಲಕ್ಷದವರೆಗೆ ದಂಡ ವಿಧಿಸಲಾಗಿದೆ.
ಯಾವ್ಯಾವ ಕಾಲೇಜುಗಳಿಗೆ ದಂಡ?
1) ಬೆಂಗಳೂರಿನ ESI ಆಸ್ಪತ್ರೆ, ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜು ಮತ್ತು ಅಂಬೇಡ್ಕರ್ ಮೆಡಿಕಲ್ ಕಾಲೇಜು.
2) ಗುಲ್ಬರ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ,ESI ಆಸ್ಪತ್ರೆ, ಮಹದೇವಪ್ಪ ರಾಂಪುರೆ ಕಾಲೇಜು
3) ಚಿಕ್ಕಮಂಗಳೂರು ವೈದ್ಯಕೀಯ ವಿಜ್ಞಾನ ಸಂಸ್ಥೆ,
4) ಚಿತ್ರದುರ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ,
5) ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆ,
6) ಯಾದಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆ,
7) ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆ,
8) ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ,
9) ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ,
10) ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ,
11) ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ.
12) ರಾಯಚೂರಿನ ನವೋದಯ ಮೆಡಿಕಲ್ ಕಾಲೇಜು, ಸೇರಿದಂತೆ ಒಟ್ಟು 27 ಕಾಲೇಜುಗಳಿಗೆ ರಾಷ್ಟೀಯ ವೈದ್ಯಕೀಯ ಆಯೋಗ ದಂಡ ಹಾಕಿದೆ.