ಕೆಎನ್ಎನ್ಡಿಜಿಟಲ್ ಡೆಸ್ಕ್ : ಜೆಡಿಯು ನಾಯಕ ಆರ್ಜೆಡಿಯ ತೇಜಸ್ವಿ ಯಾದವ್ ಮತ್ತು ಇತರ ವಿರೋಧ ಪಕ್ಷಗಳೊಂದಿಗೆ ಹೊಸ “ಮಹಾ ಮೈತ್ರಿ” ಯನ್ನು ಘೋಷಿಸಿದ ನಂತ್ರ ನಿತೀಶ್ ಕುಮಾರ್ ಇಂದು ಎಂಟನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ತೇಜಸ್ವಿ ಅವರು ಇಂದು ಬಿಹಾರದ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
#WATCH Bihar CM Nitish Kumar and Deputy CM Tejashwi Yadav greet each other after the oath-taking ceremony, in Patna pic.twitter.com/fUlTz9nGHS
— ANI (@ANI) August 10, 2022
ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೊದಲು ನಿತೀಶ್ ಕುಮಾರ್, ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರಿಗೆ ಕರೆ ಮಾಡಿದ್ದರು. ನಿತೀಶ್ ನಿರ್ಧಾರವನ್ನ ಲಾಲು ಸ್ವಾಗತಿಸಿದ್ದು, ಶುಭಾಶಯ ತಿಳಿಸಿದರು ಎಂದು ಆರ್ಜೆಡಿ ಮುಖ್ಯಸ್ಥರ ಮಗಳು ಮತ್ತು ಸಂಸದೆ ಮಿಸಾ ಭಾರತಿ ಹೇಳಿದ್ದಾರೆ.
ಬಿಜೆಪಿ ಜತೆಗಿನ ಜೆಡಿಯು ಮೈತ್ರಿಗೆ ಮಂಗಳವಾರ ತೆರೆ ಎಳೆದಿದ್ದ ಕುಮಾರ್, ರಾಜೀನಾಮೆ ನೀಡಿ, ವಿರೋಧ ಪಕ್ಷ ಮಹಾಮೈತ್ರಿಕೂಟದ ಬೆಂಬಲದೊಂದಿಗೆ ಹೊಸ ಸರ್ಕಾರ ರಚಿಸುವ ಹಕ್ಕು ಮಂಡಿಸಿದ್ದರು.
ರಾಜ್ಯಪಾಲರ ಭವನದ ಹೊರಗೆ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ನಿತೀಶ್, “ತಮ್ಮ ಎಲ್ಲಾ ಸಂಸದರು ಮತ್ತು ಶಾಸಕರು ಎನ್ಡಿಎ ತೊರೆಯಲು ಒಮ್ಮತಕ್ಕೆ ಬಂದಿದ್ದಾರೆ” ಎಂದು ಘೋಷಿಸಿದರು. ಈ ಘೋಷಣೆಯ ನಂತ್ರ, ನಿತೀಶ್ ರಾಬ್ರಿ ದೇವಿ ನಿವಾಸವನ್ನ ತಲುಪಿದರು ಮತ್ತು ತೇಜಸ್ವಿ ಅವರೊಂದಿಗೆ ಕ್ಯಾಮೆರಾದಲ್ಲಿ ಸೆರೆಯಾದರು, ಇದು ಅವರ ಪಕ್ಷದೊಂದಿಗಿನ ಮೈತ್ರಿಯ ಸುಳಿವು ನೀಡಿತು. ಅನೇಕ ಚರ್ಚೆಗಳು ಮತ್ತು ಮೈತ್ರಿ ಮಾತುಕತೆಗಳ ನಂತರ, ಇಬ್ಬರೂ ಒಪ್ಪಂದವನ್ನ ಘೋಷಿಸಿದರು.