ಬೆಂಗಳೂರು: ಇಂದು ವಿಧಾನಪರಿಷತ್ತಿನಲ್ಲಿ ನಿತ್ಯ ಸುಮಂಗಲಿ ಪದ ಪ್ರತಿಧ್ವನಿಸಿತು. ವಿಪಕ್ಷ ಸದಸ್ಯ ಸಿ.ಟಿ ರವಿ ಅವರ ಪದ ಬಳಕೆಗೆ ಆಡಳಿತ ಪಕ್ಷದ ಮಹಿಳಾ ಸದಸ್ಯರು ಆಕ್ಷೇಪ ಕೂಡ ವ್ಯಕ್ತಪಡಿಸಿದ್ರು.
ವಿಧಾನಪರಿಷತ್ತಿನಲ್ಲಿ ಇಂದು ಬಿಜೆಪಿಯ ಸದಸ್ಯ ಸಿಟಿ ರವಿ ಅವರು ತಮ್ಮ ಭಾಷಣದ ವೇಳೆಯಲ್ಲಿ ನಿತ್ಯ ಸುಮಂಗಲಿ ಪದವನ್ನು ಬಳಸಿದ್ರು. ವಕ್ಫ್ ಬೋರ್ಡ್ ಅಕ್ರಮದ ಬಗ್ಗೆ ನಿನ್ನೆ ಆರೋಪ ಕೇಳಿ ಬಂದಿದೆ. ದಲಿತರ ಹಣ ಅಕ್ರವಾಗಿ ವರ್ಗಾವಣೆ ಮಾಡಲಾಗಿದೆ. ಆಡು ಮುಟ್ಟದ ಸೊಪ್ಪಿಲ್ಲದ ರೂಪದಲ್ಲಿ ಎಲ್ಲದ್ರಲ್ಲೂ ಲೂಟಿ ಮಾಡಿದ್ದಾರೆ. ಸತ್ಯ ಮರೆಮಾಚಲು ಕಾಂಗ್ರೆಸ್ ಪಕ್ಷದವರು ಅಡ್ಡಿಪಡಿಸುತ್ತಿದ್ದಾರೆ ಎಂದರು.
ಇಂತಹ ಸಿ.ಟಿ ರವಿ ಅವರ ಮಾತಿಗೆ ಪದೇ ಪದೇ ಕಾಂಗ್ರೆಸ್ ಸದಸ್ಯರು ಅಡ್ಡಿ ಪಡಿಸುತ್ತಿದ್ದರು. ಅಲ್ಲದೇ ಕಾಂಗ್ರೆಸ್ ಸದಸ್ಯ ಪುಟ್ಟಣ್ಣ ಅವರು ಕೂಡ ಅಡ್ಡಿಪಡಿಸಿದರು. ಬಿಜೆಪಿ ಸರ್ಕಾರ ಹೇಗೆ ಬಂತು ಅಂತ ಹೇಳಿ ನೋಡೋಣ ಎಂಬುದಾಗಿ ಚೇಡಿಸಿದರು. ಜೊತೆಗೆ ಬಿಜೆಪಿ ಸದಸ್ಯ ವಿಶ್ವನಾಥ್ ಅವರ ಕಾಲೆಳೆದರು.
ಕಾಂಗ್ರೆಸ್ ಸದಸ್ಯ ಪುಟ್ಟಣ್ಣ ಅವರ ಮಾತಿಗೆ ಸಿಟ್ಟಾದಂತ ಸಿ.ಟಿ ರವಿ ಅವರು, ಕೆಲವರು ನಿತ್ಯ ಸುಮಂಗಲಿಯರು ಇದ್ದಾರೆ. ಅಧಿಕಾರ ಇರೋ ಕಡೆ ನಿತ್ಯ ಸುಮಂಗಲಿಯರು ಹೋಗ್ತಾರೆ ಎಂಬುದಾಗಿ ಹೇಳಿದರು.
ಸಿ.ಟಿ ರವಿ ಅವರು ವಿಧಾನಪರಿಷತ್ತಿನಲ್ಲಿ ನಿತ್ಯ ಸುಮಂಗಲಿ ಪದ ಬಳಕೆ ಮಾಡುತ್ತಿದ್ದಂತೆ, ಕಾಂಗ್ರೆಸ್ ನ ಮಹಿಳಾ ಸದಸ್ಯ ಉಮಾಶ್ರಿ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರೋಧ ವ್ಯಕ್ತ ಪಡಿಸಿದರು. ನಿತ್ಯ ಸುಮಂಗಲಿ ಅನ್ನೋದ ಸರಿಯಲ್ಲ ಅಂತ ಆಕ್ಷೇಪಿಸಿದರು. ಅಲ್ಲದೇ ಇದು ಸಿ.ಟಿ ರವಿ ಅವರ ಮನಸ್ಥಿತಿಯನ್ನು ತೋರಿಸುತ್ತದೆ ಅಂತ ಕಿಡಿಕಾರಿದರು.
‘KSRTC ಪ್ರಯಾಣಿಕ’ರ ಗಮನಕ್ಕೆ: ಬೆಂಗಳೂರಿನಿಂದ ಈ ‘ಪ್ರವಾಸಿ ತಾಣ’ಗಳಿಗೆ ‘ಪ್ಯಾಕೇಜ್ ಟೂರ್’ ಆರಂಭ
HD ಕುಮಾರಸ್ವಾಮಿ ಸರ್ವಪಕ್ಷ ಸಭೆಗೆ ಬರದೇ ‘ಬಾಡೂಟಕ್ಕೆ’ ಹೋಗಿದ್ದು ದುರಂತ : ಸಚಿವ ಚೆಲುವರಾಯಸ್ವಾಮಿ