ಹಾಸನ: ಕಾಂಗ್ರೆಸ್ ಪಕ್ಷಕ್ಕೆ ಶಿಸ್ತಿನ ಸಿಪಾಯಿಯಾಗಿ ಡಿ.ಕೆ ಶಿವಕುಮಾರ್ ದುಡಿದಿದ್ದಾರೆ. ಅವರಿಗೆ ಒಂದು ಬಾರಿಗೆ ಮುಖ್ಯಮಂತ್ರಿ ಅವಕಾಶ ನೀಡುವಂತೆ ಇದೇ ಮೊದಲ ಬಾರಿಗೆ ಡಿಕೆಶಿ ಪರವಾಗಿ ನಿರ್ಮಲಾನಂದ ಶ್ರೀ ಧ್ವನಿಯೆತ್ತಿದ್ದಾರೆ.
ಹಾಸನದ ಚನ್ನರಾಯಪಟ್ಟಣದ ಕುಂದೂರು ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಬೇಕು. ಇದು ಎಲ್ಲರ ಒಕ್ಕರಲ ಕೂಗಾಗಿದೆ. ಉಳಿದ ಎರಡೂವರೆ ವರ್ಷದ ಅವಧಿಯನ್ನು ಅವರಿಗೆ ಕೊಡಬೇಕು. ಆ ಮೂಲಕ ಡಿಕೆ ಶಿವಕುಮಾರ್ ವಿಷನ್ ಗೆ ಪೂರಕವಾದ ದೃಷ್ಠಿಯಿಂದ ಅಭಿವೃದ್ಧಿ ಮಾಡೋದಕ್ಕೆ ಕಾಂಗ್ರೆಸ್ ಅವಕಾಶ ಮಾಡಿಕೊಡುವಂತೆ ಒತ್ತಾಯಿಸಿದರು.
ರಾಜ್ಯವನ್ನು ಆಳಿದಂತ ಕೆಂಗಲ್ ಹನುಮಂತಯ್ಯ, ಕೆಸಿ ರೆಡ್ಡಿ ಕಾಲದಿಂದಲೂ ಕೂಡ ಅಭಿವೃದ್ಧಿ ಪಥದತ್ತ ಕೊಂಡೊಯ್ದಿದ್ದಾರೆ. ದೇವೇಗೌಡ ಪ್ರಧಾನಿಯಾಗಿ, ಎಸ್ಎಂ ಕೃಷ್ಣ, ಹೆಚ್ ಡಿ ಕುಮಾರಸ್ವಾಮಿ ಕೂಡ ಮುಖ್ಯಮಂತ್ರಿಯಾಗಿದ್ದಾರೆ. ನಮ್ಮ ಸಮುದಾಯದಿಂದ ರಾಜ್ಯವನ್ನು ಕಟ್ಟಿ ಬೆಳೆಸಿದ್ದಾರೆ ಎಂದರು.
ಸೇವೆ ಮಾಡುವ ಮನೋಭಾವನೆಯಿಂದ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ ಎನ್ನುವ ಭಾವನೆ ಎಲ್ಲರಿಗೂ ಇದೆ. ಆ ಭಾವನೆಗೆ ಪೂರಕವಾಗಿ ಹೈಕಮಾಂಡ್ ಈಡೇರಿಸುವಂತ ಕೆಲಸ ಮಾಡಲಿದೆ ಎಂಬ ಭರವಸೆ ನಮಗಿದೆ ಎಂದು ಹೇಳಿದರು.
ಸಿಎಂ ಹುದ್ದೆಗಿಂತ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದು ಮುಖ್ಯ: ಡಿಸಿಎಂ ಡಿ.ಕೆ ಶಿವಕುಮಾರ್
BIG NEWS : ರಾಜ್ಯದಲ್ಲಿ ಅವಕಾಶ ಸಿಕ್ಕರೆ ದಲಿತರನ್ನು ‘CM’ ಮಾಡುತ್ತೇವೆ : ಸಚಿವ ಕೆಜೆ ಜಾರ್ಜ್ ಹೇಳಿಕೆ








