ಡೆಹ್ರಾಡೂನ್: ಉತ್ತರಾಖಂಡಕ್ಕೆ ಚಾರಣಕ್ಕೆಂದು ಕರ್ನಾಟಕದ ನಾಲ್ವರು ಸೇರಿದಂತೆ 9 ಮಂದಿ ಚಾರಣಿಗರು ತೆರಳಿದ್ದರು. ಇಂತಹ 9 ಮಂದಿ ಹವಾಮಾನ ವೈಪರಿತ್ಯದಿಂದಾಗಿ ಸಾವನ್ನಪ್ಪಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಈ ಬಗ್ಗೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಮಾಹಿತಿ ಹಂಚಿಕೊಂಡಿದ್ದು, ಉತ್ತರಾಖಂಡಕ್ಕೆ ಚಾರಣಕ್ಕೆ ತೆರಳಿದ್ದಂತ ಕರ್ನಾಟಕದ ಚಾರಣಿಗರು ಹವಾಮಾನ ವೈಪರಿತ್ಯದಿಂದ ಸಂಕಷ್ಟಕ್ಕೆ ಸಿಲುಕಿರೋದಾಗಿ ತಿಳಿದು ಬಂದಿದೆ. ಅವರನ್ನು ಸುರಕ್ಷತೆಗಾಗಿ ಕ್ರಮ ವಹಿಸಲಾಗಿದೆ. ಉತ್ತರಾಖಂಡ ಸರ್ಕಾರ ಹಾಗೂ ಕೇಂದ್ರ ಗೃಹ ಸಚಿವಾಲಯದೊಂದಿಗೆ ಮಾತನಾಡಿದ್ದೇವೆ ಎಂಬುದಾಗಿ ತಿಳಿಸಿದ್ದರು.
ಈ ಬೆನ್ನಲ್ಲೇ ಹವಾಮಾನ ವೈಪರಿತ್ಯದಿಂದಾಗಿ ಉತ್ತರಾಖಂಡದಲ್ಲಿ ಕರ್ನಾಟಕದ ನಾಲ್ವರು ಸೇರಿದಂತೆ 9 ಮಂದಿ ಚಾರಣಿಗರು ಮೃತಪಟ್ಟಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಬೆಂಗಳೂರಿನ ಸುಜಾತ (52), ಪದ್ಮಿನಿ ಹೆಗಡೆ(35), ಚಿತ್ರಾ (48), ಸಿಂಧು (45), ವೆಂಕಟೇಶ್ ಪ್ರಸಾದ್ (52), ಅನಿತಾ (61), ಆಶಾ ಸುಧಾಕರ್ (72) ಹಾಗೂ ಪದ್ಮನಾಭ್ ಕೆಪಿಎಸ್(50) ವಿನಾಯಕ್ ಎಂಬುವರು ಸಾವನ್ನಪ್ಪಿರೋದಾಗಿ ಹೇಳಲಾಗುತ್ತಿದೆ.
ಅಂದಹಾಗೇ ಇವರೆಲ್ಲರೂ ಬೆಂಗಳೂರಿನಿಂದ 18 ಜನರು ಚಾರಣಕ್ಕೆ ಉತ್ತರಾಖಂಡಕ್ಕೆ ತೆರಳಿದ್ದರು. ಇವರೊಂದಿಗೆ ಪುಣೆಯಿಂದ ಒಬ್ಬರು ಜೊತೆಯಾಗಿ ಇವರನ್ನು ಟ್ರೆಕ್ಕಿಂಗ್ ಗೈಡ್ ಆಗಿ ತೆರಳಿದ್ದರು. ಅಲ್ಲದೇ ಉತ್ತರ ಕಾಶಿಯ ಮೂವರು ನಿವಾಸಿಗಳು ಇವರೊಟ್ಟಿಗೆ ಚಾರಣಕ್ಕೆ ತೆರಳಿದ್ದರು. ಉತ್ತರಾಖಂಡದ ಸಹಸ್ತ್ರ ತಾಲ್ ನಲ್ಲಿ ಹವಾಮಾನ ವೈಪರಿತ್ಯಕ್ಕೆ ತಿಲುಕಿದ್ದಾಗ ಸೌಮ್ಯಾ, ವಿನಯ, ಶಿವಜ್ಯೋತಿ, ಸುಧಾಕರ್, ಸ್ಮೃತಿ, ಸೀನಾ ಎಂಬುವರನ್ನು ರಕ್ಷಿಸಲಾಗಿತ್ತು.
ಇನ್ನೂ ಈ ಘಟನೆಯಲ್ಲಿ 13 ಮಂದಿ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕಾಂಗ್ರೆಸ್ನವರು ಅಡ್ವಾನ್ಸ್ ಗ್ಯಾರಂಟಿ ಕೊಟ್ಟು ಮೋಸದಿಂದ 9 ಸ್ಥಾನ ಗೆದ್ದಿದ್ದಾರೆ : ನೂತನ ಸದಸ್ಯ ಗೋವಿಂದ್ ಕಾರಜೋಳ
ಬೆಂಗಳೂರಲ್ಲಿ ರೇವ್ ಪಾರ್ಟಿ ಪ್ರಕರಣ : ತೆಲುಗು ನಟಿ ಹೇಮಾಳನ್ನು ಕಸ್ಟಡಿಗೆ ಪಡೆಯಲು ಮುಂದಾದ ‘CCB’