ಬೆಂಗಳೂರು : ಚನ್ನಪಟ್ಟಣ ಉಪಚುನಾವಣೆಗೆ ಇಂದು ನಿಖಿಲ್ ಕುಮಾರಸ್ವಾಮಿಯವರು ಬೃಹತ್ ಮೆರವಣಿಗೆಯೊಂದಿಗೆ ತಮ್ಮ ಕಾರ್ಯಕರ್ತರು ಹಾಗೂ ಮುಖಂಡರ ಬೆಂಬಲದೊಂದಿಗೆ ನಾಮಪತ್ರ ಸಲ್ಲಿಸಿದರು.ಈ ಒಂದು ವಿಚಾರವಾಗಿ ಮಾಜಿ ಸಚಿವ ಎಚ್ ಡಿ ರೇವಣ್ಣ ಅವರು ಚನ್ನಪಟ್ಟಣ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ನೂರಕ್ಕೆ ನೂರು ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿಖಿಲ್ ಅವರ ತಂದೆಗೆ ಬಲ ಭುಜವಾಗಿ ನಿಂತಿದ್ದಾರೆ. ದೇವೇಗೌಡರ ಕುಟುಂಬ ಮುಗಿದೇ ಹೋಯಿತು ಅಂದರು. ಈಗ ಕುಮಾರಣ್ಣ ಕೇಂದ್ರ ಮಂತ್ರಿ ಆಗಿಲ್ವಾ? ಇಂತಹವೆಲ್ಲ ಎದುರಿಸಿ ರಾಜಕೀಯದಲ್ಲಿ ಇನ್ನೂ ಉಳಿದಿದ್ದೇವೆ. ಹಾಸನ ಹಿಡಿತ ತೆಗೆದುಕೊಳ್ಳಲು ಕಾಂಗ್ರೆಸ್ಸಿಗರು ಹೋದರು.
ಹಾಸನದಲ್ಲಿ ಒಂದು ರಾಷ್ಟ್ರೀಯ ಪಕ್ಷಕ್ಕೆ ನಾಚಿಕೆಯಾಗಬೇಕು ಎಂಪಿ ಚುನಾವಣೆಯ ಕೊನೆಯ ನಾಲ್ಕು ದಿನ ಏನೇನು ಮಾಡಿದ್ದಾರೆ ಮುಂದೆ ಟೈಮ್ ಬಂದಾಗ ಹೇಳುತ್ತೇನೆ ನನಗೆ ದೇವರ ಮೇಲೆ ನಂಬಿಕೆ ಇದೆ ಕಾಲ ಬರುತ್ತದೆ. ಚನ್ನಪಟ್ಟಣದಲ್ಲಿ ನಿಖಿಲ್ ನೂರಕ್ಕೆ ನೂರು ಗೆಲ್ಲುತ್ತಾರೆ ಎಂದು ವಿಧಾನಸೌಧದಲ್ಲಿ ಎಚ್ ಡಿ ರೇವಣ್ಣ ತಿಳಿಸಿದರು.
ಅಧಿಕಾರಕ್ಕೆ ಅಂಟಿಕೊಂಡ ಕುಟುಂಬ ನಮ್ಮದಲ್ಲ ಚನ್ನಪಟ್ಟಣ ಅಭ್ಯರ್ಥಿ ಬಗ್ಗೆ ನೀವೇ ನಿರ್ಧರಿಸಿ ಅಂದರು ಕೇಂದ್ರದ ಬಿಜೆಪಿಯವರೇ ಜೆಡಿಎಸ್ ನವರು ಸ್ಪರ್ಧಿಸಲಿ ಅಂದರು. ಅಭ್ಯರ್ಥಿ ಇಲ್ಲದೆ ಗೊಗೊರೆಯುವ ಸ್ಥಿತಿ ಕಾಂಗ್ರೆಸ್ ಗೆ ಬಂದಿದೆ. ಕಾಂಗ್ರೆಸ್ಗೆ ಇಂಥ ಪರಿಸ್ಥಿತಿ ಬರಬಾರದಿತ್ತು ಅಧಿಕಾರಕ್ಕಾಗಿ ಯಾರ ಕೈಕಾಲು ಬೇಕಾದರೂ ಕಟ್ಟುತ್ತಾರೆ ದೇವೇಗೌಡರ ಕುಟುಂಬ ನಾಶ ಮಾಡಬೇಕೆಂಬ ಅಜೆಂಡಾ ಹೊಂದಿದ್ದಾರೆ ಎಂದು ವಾಗ್ದಾಳಿ ನಡೆಸದರು.








