ಗದಗ : ರಾಕಿಂಗ್ ಸ್ಟಾರ್ ಯಶ್, ಹುಟ್ಟು ಹಬ್ಬದ ದಿನದಂದು ಅತ್ಯಂತ ಘೋರ ದುರಂತ ಸಂಭವಿಸಿದೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ಸುಣದೂರು ಗ್ರಾಮದಲ್ಲಿ ನಟ ಯಶ್ ಅವರ ಇಪ್ಪತೈದು ಅಡಿ ಕಟೌಟ್ ಕಟ್ಟುವ ವೇಳೆ ವಿದ್ಯುತ್ ಶಾಕ್ ತಗುಲಿ ಮೂವರು ಯುವಕರು ಸಾವನಪ್ಪಿದ್ದು ನಾಲ್ವರು ಯುವಕರು ಗಂಭೀರವಾಗಿ ಗಾಯಗೊಂಡಿರುವಂತಹ ಘಟನೆ ಸಂಭವಿಸಿದೆ.
ಘಟನೆಯ ನಂತರ ನಟ ಯಶ್ ಅವರು ನಿನ್ನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸುಣ್ಣದೂರು ಗ್ರಾಮಕ್ಕೆ ಭೇಟಿ ನೀಡಿ ಮೃತ ಯುವಕರ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ತಾವು ಕೂಡ ಭಾವುಕರಾಗಿರುವಂತಹ ಸನ್ನಿವೇಶ ಜರುಗಿತು. ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಈ ರೀತಿ ಕಟ್ ಔಟ್ ನೀಲ್ಲಿಸುವುದು ಆಗಲಿ ಇನ್ಯಾವುದೋ ಮಾಡುವುದಾಗಲಿ ಮಾಡಬೇಡಿ ಅಭಿಮಾನ ಪ್ರೀತಿಯಿಂದ ಇರಲಿ ಆದರೆ ಈ ರೀತಿ ಘಟನೆಗಳಿಂದ ನನಗೆ ಹುಟ್ಟುಹಬ್ಬದ ಮೇಲೆ ಅಸಹ್ಯ ಹುಟ್ಟಿಕೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಂತರ ಅವರು ಗಂಭೀರವಾಗಿ ಗಾಯಗೊಂಡಂತಹ ಉಳಿದ ನಾಲ್ವರು ಯುವಕರನ್ನು ಭೇಟಿಯಾಗಲು ಗದಗ ಜಿಲ್ಲೆಯ ಜೇಮ್ಸ್ ಆಸ್ಪತ್ರೆಗೆ ತೆರಳಿದರು ಅಲ್ಲಿ ಅವರ ಆರೋಗ್ಯವನ್ನು ವಿಚಾರಿಸಿ ಮರಳುತ್ತಿದ್ದಾಗ ಪೊಲೀಸ್ ಜೀಪ್ಗೆ ಯಶ್ ಇನ್ನೊಬ್ಬ ಅಭಿಮಾನಿ ನಿಖಿಲ್ ಎನ್ನುವ ಯುವಕನ ಬೈಕ್ ಡಿಕ್ಕಿಯಾಗಿ ಆತ ಕೂಡ ಗಂಭೀರವಾಗಿ ಗಾಯಗೊಂಡಿದ್ದ. ಪೊಲೀಸ್ ವಾಹನದಲ್ಲೇ ನಿಖಿಲನು ಆಸ್ಪತ್ರೆಗೆ ದಾಖಲಿಸಲಾಯಿತು, ನಂತರ ಅಲ್ಲಿಂದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸ್ಥಳಾಂತರಿಸಲಾಯಿತು, ಆದರೆ ಚಿಕಿತ್ಸೆ ಫಲಕಾರಿಯಾಗಿದೆ ನಿಖಿಲ್ ಇಂದು ಸಾವನ್ನಪ್ಪಿದ್ದಾನೆ.
ಅಪಘಾತದಲ್ಲಿ ಮೃತಪಟ್ಟ ನಿಖಿಲ್ ಹಿನ್ನೆಲೆಯನ್ನು ತಿಳಿದುಕೊಂಡರೆ ನಿಜಕ್ಕೂ ಯಾರಿಗೆ ಆದರೂ ಕೂಡ ಬಹಳ ದುಃಖವಾಗುತ್ತದೆ ಏಕೆಂದರೆ ನಿಖಿಲ್ ಗದಗ್ನಲ್ಲಿ ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು ಅಲ್ಲದೆ ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯಕ್ಕೆ ಟಾಪರ್ ವಿದ್ಯಾರ್ಥಿ ಎನಿಸಿಕೊಂಡಿದ್ದ. ಅದೇ ರೀತಿಯಾಗಿ ಈತ ಭಾರತೀಯ ಸೇನೆಗೂ ಕೂಡ ಆಯ್ಕೆಯಾಗಿದ್ದ ಆದರೆ ಕೈಯ ಮೇಲಿರುವ ಟ್ಯಾಟೂ ಹಾಕಿಸಿಕೊಂಡಿದ್ದರಿಂದ ಕೊನೆ ಕ್ಷಣದಲ್ಲಿ ಈತನನ್ನು ರಿಜೆಕ್ಟ್ ಮಾಡಲಾಗಿತ್ತು.
ಹೀಗಾಗಿ 20 ವರ್ಷದ ನಿಖಿಲ್ ಅನ್ನು ಕಳೆದುಕೊಂಡ ಕುಟುಂಬ ಕಂಗಲಾಗಿದೆ.ಡಾಕ್ಟರ್ ಸೋಮರೆಡ್ಡಿ ಹಾಗೂ ಡಾಕ್ಟರ್ ಸೋನಿಯಾ ಕರೂರ್ ದಂಪತಿ ಪುತ್ರ ಎಂದು ಹೇಳಲಾಗುತ್ತಿದ್ದು, ಗದಗ ಜಿಲ್ಲೆಯಲ್ಲಿ ಬಿಇ ಅಂತಿಮ ವರ್ಷ ಓದುತ್ತಿದ್ದ ಎಂದು ಹೇಳಲಾಗುತ್ತಿದೆ. ಲಕ್ಷ್ಮೇಶ್ವರ ತಾಲೂಕಿನ ಅಗಡಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಿಖಿಲ್ ಓದುತ್ತಿದ್ದ ವಿಶ್ವೇಶ್ವರಯ್ಯ ಯುನಿವರ್ಸಿಟಿಗೆ ನಿಖಿಲ್ ಟಾಪರ್ ಆಗಿದ್ದ ಆತ ಕ್ಯಾಂಪಸ್ ಇಂಟರ್ವ್ಯೂನಲ್ಲಿ ಕೂಡ ಮೃತ ನಿಖಿಲ್ ಆಯ್ಕೆಯಾಗಿದ್ದ ಎಂದು ಹೇಳಲಾಗುತ್ತಿದೆ.