ಮಂಡ್ಯ: 2019ರ ಲೋಕಸಭಾ ಚುನಾವಣೆಯ ನನ್ನ ಸೋಲು ಸೋಲಾಗಿರಲಿಲ್ಲ. ನಮ್ಮಲ್ಲಾದ ತಪ್ಪುಗಳಿಂದ ಹಿನ್ನಡೆ ಆಯ್ತು ಅಂತ ಮಂಡ್ಯದಲ್ಲಿ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಇದೇ ವೇಳೇ ಅವರು ಮಾತನಾಡುತ್ತ, ಕುಮಾರಣ್ಣ ಸಿಎಂ ಆಗಿದ್ದಾಗ ರಾಜ್ಯಕ್ಕೆ ಕೊಟ್ಟ ಕೊಡುಗೆ ಅಪಾರ. ಕುಮಾರಣ್ಣ ಸ್ಪರ್ಧೆಗೆ ಕಾರ್ಯಕರ್ತರ ಆಪೇಕ್ಷೆ ಇತ್ತು. ಮಹಿಳೆಯರು, ರೈತರು, ಹಿರಿಯರು ಎಲ್ಲಾ ವರ್ಗದವರು ಕುಮಾರಣ್ಣ ಅವ್ರನ್ನ ಹೆಚ್ಚಿನ ಅಂತರದಲ್ಲಿ ಆಯ್ಕೆ ಮಾಡಿದ್ದಾರೆ. ಮುಂದಿನ 5 ವರ್ಷ ಪ್ರಮಾಣಿಕವಾಗಿ ಕುಮಾರಣ್ಣ ಕೆಲಸ ಮಾಡ್ತಾರೆ. ಕುಮಾರಣ್ಣರ ಮೇಲೆ ಇಟ್ಟಿರುವ ಗೌರವ ಪ್ರೀತಿ, ವಿಶ್ವಾಸ ಉಳಿಸಿಕೊಳ್ತೀವಿ. ಅಂತ ಹೇಳಿದರು.
ಇನ್ನೂ ಇದೇ ವೇಳೆ ಅವರು ಕಾಂಗ್ರೆಸ್ಸಿಗರ ಟೀಕೆಗಳಿಗೆ ಮಂಡ್ಯ ಜನ ಉತ್ತರ ಕೊಟ್ಟಿದ್ದಾರೆ. ಅಧಿಕಾರದಲ್ಲಿದ್ದಾಗ ಏನು ಬೇಕಾದ್ರು ಮಾತನಾಡಿದ್ರೆ ಜನ ತಕ್ಕ ಪಾಠ ಕಲಿಸುತ್ತಾರೆ. ರಾಜ್ಯವನ್ನ ಕಟ್ಟುವ ಕಲ್ಪನೆ ಕುಮಾರಣ್ಣರದ್ದು. ದೂರದೃಷ್ಟಿ ಹೊಂದಿರುವ ಕುಮಾರಣ್ಣರ ನಾಯಕತ್ವವನ್ನ ಬಿಜೆಪಿ ಬಳಸಿಕೊಳ್ಳಲಿದೆ. ಕುಮಾರಣ್ಣ ಸಚಿವ ಸ್ಥಾನಕ್ಕಾಗಿ ಡಿಮ್ಯಾಂಡ್ ಮಾಡಲ್ಲ. ಕುಮಾರಸ್ವಾಮಿ ಹಿರಿತನ ಆಧಾರದ ಮೇಲೆ ಸ್ಥಾನ ಸಿಗಲಿದೆ. ರಾಜ್ಯದಲ್ಲಿ ಎರಡು ಉಪ ಚುನಾವಣೆ ನಡೆಯಬೇಕಿದೆ. ಶಿಗ್ಗಾಂವಿ ಹಾಗೂ ಚನ್ನಪಟ್ಟಣದಲ್ಲಿ ಉಪಚುನಾವಣೆ ಆಗಬೇಕು. ಮೈತ್ರಿ ಪಕ್ಷಗಳ ನಾಯಕರು ಸಮಾಲೋಚನೆ ನಡೆಸಿ ಅಭ್ಯರ್ಥಿ ಆಯ್ಕೆ ಮಾಡ್ತಾರೆ.
\ನನ್ನ ಆಸಕ್ತಿ ಪಕ್ಷ ಸಂಘಟನೆಯಲ್ಲಿದೆ. ಚನ್ನಪಟ್ಟಣ ಉಪಚುನಾವಣೆ ವಿಚಾರ ಮಾತನಾಡುವುದು ಈಗ ಅಪ್ರಸ್ತುತ. ಸುಮಲತಾರವರು ಬಿಜೆಪಿ ಸದಸ್ಯರು. ಕುಮಾರಸ್ವಾಮಿ ಗೆಲುವನ್ನ ಅವರೂ ಬಯಸಿದ್ದರು. ಪ್ರಚಾರ ವೇದಿಕೆ ಹಂಚಿಕೊಳ್ಳಲು ಸಾಧ್ಯವಾಗದಿದ್ದರೂ ಅವರ ಬೆಂಬಲಿಗರಿಗೆ ಹೇಳಿದ್ದಾರೆ. ನಾನೇ ಸ್ವತಃ ಕಾಲ್ ಮಾಡಿ ಮಾತನಾಡಿ ಧನ್ಯವಾದ ಹೇಳ್ತೀನಿ. ಈಗ ನಾನು 24/7 ರಾಜಕಾರಣಿ. ಸಿನಿಮಾ ಸಂಪೂರ್ಣ ಬಂದ್ ಮಾಡಿದ್ದೇನೆ ಅಂಥ ಹೇಳಿದರು.