ಬೆಂಗಳೂರು: ನಗರದ ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣವನ್ನು ಎನ್ಐಎ ಅಧಿಕಾರಿಗಳು ನಡೆಸುತ್ತಿದ್ದಾರೆ. ತನ್ನ ತನಿಖೆಯನ್ನು ಚುರುಕುಗೊಳಿಸಿರುವಂತ ಎನ್ಐಎ ಅಧಿಕಾರಿಗಳಿಗೆ ಬಾಂಬರ್ ಬಗ್ಗೆ ಮಹತ್ವದ ಸುಳಿವು ಪತ್ತೆಯಾಗಿರೋದಾಗಿ ತಿಳಿದು ಬಂದಿದೆ.
ಬೆಂಗಳೂರಿನ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್.1ರಂದು ಬಾಂಬ್ ಸ್ಪೋಟಗೊಂಡಿತ್ತು. ಈ ಪ್ರಕರಣವನ್ನು ರಾಜ್ಯ ಸರ್ಕಾರ ಎನ್ಐಎ ತನಿಖೆಗೆ ವಹಿಸಿತ್ತು. ಶಂಕಿತ ಬಾಂಬರ್ ಬಗ್ಗೆ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಹಲವು ಹಂತಗಳಲ್ಲಿ ಬಂಧನಕ್ಕೆ ಬಲೆ ಬೀಸಲಾಗಿದೆ.
ಇದೀಗ ಶಂಕಿತದ್ದ ಬೇಸ್ ಬಾಲ್ ಕ್ಯಾಪ್ ನ ಜಾಡು ಹಿಡಿದು ತನಿಖೆ ನಡೆಸುತ್ತಿರುವಂತ ಎನ್ಐಎ ಅಧಿಕಾರಿಗಳು, ಶಂಕಿತನ ಪ್ರಮುಖ ಸುಳಿಪು ಪತ್ತೆ ಮಾಡಿದ್ದಾರೆ. ಕ್ಯಾಪ್ ಖರೀದಿಸಿದಂತ ವ್ಯಕ್ತಿಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಚೈನ್ನೈ ಸೆಂಟ್ರಲ್ ನಲ್ಲಿ ಜನವರಿ ತಿಂಗಳ ಅಂತ್ಯದಲ್ಲಿ ಬ್ರ್ಯಾಂಡೆಡ್ ಚಿಲ್ಲರೆ ಅಂಗಡಿಯಿಂದ ಇಬ್ಬರು ಈ ಕ್ಯಾಪ್ ಗಳನ್ನು ಖರಿದಿಸಿರೋ ಸಿಸಿಟಿವಿ ದೃಶ್ಯಾವಳಿಯನ್ನು ಸಂಗ್ರಹಿಸಿದ್ದಾರೆ. ಆ ದೃಶ್ಯಾವಳಿ ಆಧರಿಸಿ ತನಿಖೆಗೆ ಈಗ ಇಳಿಸಿದ್ದಾರೆ.
BREAKING: ಬಂಧನವನ್ನು ಪ್ರಶ್ನಿಸಿ ‘BSR ನಾಯಕಿ ಕವಿತಾ’ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ‘ಸುಪ್ರೀಂ ಕೋರ್ಟ್’
ಮಧ್ಯಪ್ರದೇಶ : ವಿವಾದಿತ ‘ಭೋಜಶಾಲ-ಕಮಲ್ ಮೌಲಾ’ ಮಸೀದಿ ಸಂಕೀರ್ಣದಲ್ಲಿ ಪುರಾತತ್ವ ಇಲಾಖೆಯಿಂದ ಸಮೀಕ್ಷೆ