ಮಂಗಳೂರು: ನಿನ್ನೆ ನಗರದಲ್ಲಿ ನಡೆದಿದ್ದಂತ ಆಟೋದಲ್ಲಿನ ಸ್ಪೋಟ ಪ್ರಕರಣದ ಕುರಿತು ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದು, ಹಲವು ಆಯಾಮಗಳಲ್ಲಿ ಹಿರಿಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಇದೀಗ ಘಟನೆ ನಡೆದ ಸ್ಥಳಕ್ಕೆ ಹಿರಿಯ ಎನ್ ಐ ಎ (NIA) ಅಧಿಕಾರಿಗಳ ತಂಡ ಧಾವಿಸಿ ತೀವ್ರ ಶೋಧ ಕಾರ್ಯ ನಡೆಸಿದ್ದಾರೆ. ಮಂಗಳೂರಿನ ನಾಗುರಿಯಲ್ಲಿ ಸ್ಫೋಟವಾದ ಆಟೋವನ್ನು ಪರಿಶೀಲನೆ ನಡೆಸಿದ ಎನ್ ಐ ಎ ಅಧಿಕಾರಿಗಳಿಗೆ ಆಟೋ ಬ್ಲಾಸ್ಟ್ ಆದ ಬಳಿಕ ತೆಗೆದ ವಿಡಿಯೋ ಲಭ್ಯವಾಗಿದೆ. ಮೈಸೂರಿನ ಲೋಕನಾಯಕ ನಗರದಲ್ಲಿ ಮನೆ ಬಾಡಿಗೆ ಪಡೆದಿದ್ದ ಶಂಕಿತ ವ್ಯಕ್ತಿ ಮನೆಯಲ್ಲಿ ಸ್ಫೋಟಕ ತಯಾರಿಕೆಗೆ ಬೇಕಾದ ವಸ್ತುಗಳು ಪತ್ತೆಯಾಗಿದೆ. ಕುಕ್ಕರ್ ಬಾಂಬ್, ವೈರ್ ಗಳು, ಸರ್ಕ್ಯೂಟ್ ಬೋರ್ಡ್, ಸಲ್ಫೂರಿಕ್ ಆ್ಯಸಿಡ್, ಬ್ಯಾಟರಿಗಳು,ಸಣ್ಣ ಬೋಲ್ಟ್ ಗಳು, ಮೊಬೈಲ್ ಡಿಸ್ಪ್ಲೇಗಳು ಪತ್ತೆಯಾಗಿದೆ.
ಘಟನೆ ನಡೆದ ಸ್ಥಳದಲ್ಲಿ ಎನ್ ಐ ಎ ಡಿಐಜಿ ಪ್ರಕಾಶ್ ಹಾಗೂ ಎಸ್,ಪಿ ರವಿ ನೇತೃತ್ವದಲ್ಲಿ ತಂಡ ತೀವ್ರ ಶೋಧ ಕಾರ್ಯಾಚರಣೆ ನಡೆಸಿದೆ. ಸ್ಪೋಟ ಪ್ರಕರಣದಲ್ಲಿ ಉಗ್ರರ ಕೈವಾಡವಿದೆ ಎಂದು ಹೇಳಲಾಗಿದ್ದು, ಹಲವರನ್ನು ವಿಚಾರಣೆಗೊಳಪಡಿಸಲಾಗಿದೆ.
ಸ್ಪೋಟದಲ್ಲಿ ಶಂಕಿತ ವ್ಯಕ್ತಿಗೆ ಗಂಭೀರ ಗಾಯ
ಈ ಕುರಿತು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಮಾಹಿತಿ ನೀಡಿದ್ದು, ಸ್ಪೋಟದಿಂದ ಶಂಕಿತ ವ್ಯಕ್ತಿಗೆ ಗಂಭೀರ ಗಾಯಗಳಾಗಿದೆ. ಸದ್ಯ, ಆತನ ಸ್ಥಿತಿ ಗಂಭೀರವಾಗಿದೆ, ವಿಪರೀತ ಸುಟ್ಟಗಾಯವಾಗಿದ್ದರಿಂದ ಇನ್ಪೆಕ್ಷನ್ ಆಗಬಹುದು ಎಂದು ವೈದ್ಯರು ಆತನ ಜೊತೆ ಮಾತನಾಡಲು ಬಿಡುತ್ತಿಲ್ಲ, ಪ್ರಕರಣದ ಬಗ್ಗೆ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದೇವೆ, ಆಟೋ ಚಾಲಕ ಪುರುಷೋತ್ತಮ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಶಶಿಕುಮಾರ್ ಹೇಳಿದ್ದಾರೆ.
‘ದಲಿತ ಮಹಿಳೆ’ ನೀರು ಕುಡಿದಿದ್ದಕ್ಕೆ ಗೋ ಮೂತ್ರದಿಂದ ‘ಟ್ಯಾಂಕ್’ಗಳ ಸ್ವಚ್ಛ: ಈ ‘ತಹಶೀಲ್ದಾರ್’ ಮಾಡಿದ್ದೇನು ಗೊತ್ತಾ?