ಶಿವಮೊಗ್ಗ: ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದ ಆರೋಪಿ ತಾರಿಕ್ ಜೊತೆಗೆ ಸಂಪರ್ಕ ಹೊಂದಿದ್ದಂತ ಹಿನ್ನಲೆಯಲ್ಲಿ, ಶಿವಮೊಗ್ಗ ನಗರದಲ್ಲಿನ ಶಂಕಿತ ವ್ಯಕ್ತಿಯ ನಿವಾಸದ ಮೇಲೆ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇಂದು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಆರೋಪಿ ತಾರಿಕ್ ಜೊತೆಗೆ ಸಂಪರ್ಕ ಹೊಂದಿದ ಆರೋಪದಲ್ಲಿ ಬೆಂಗಳೂರಿನಲ್ಲಿ ಉಜೇರ್ ಫರ್ಹಾನ್ ಬೇಗ್ ಎಂಬುವರನ್ನು ಬಂಧಿಸಲಾಗಿತ್ತು. ಈ ಬಳಿಕ ವಿಚಾರಣೆ ಕೂಡ ನಡೆಸಿತ್ತು.
ವಿಚಾರಣೆಯ ಬಳಿಕ ಉಜೇರ್ ಫರ್ಹಾನ್ ಬೇಗ್ ಅವರ ಶಿವಮೊಗ್ಗದ ಮಂಜುನಾಥ ಬಡಾವಣೆಯಲ್ಲಿರುವಂತ ನಿವಾಸದ ಮೇಲೆ ಎನ್ಐಎ ದಾಖಿ ನಡೆಸಿದೆ. ಈ ದಾಳಿಯ ವೇಳೆಯಲ್ಲಿ ಉಜೇರ್ ಫರ್ಹಾನ್ ಬೇಗ್ ಮನೆಯಲ್ಲಿ ಪೆನ್ ಡ್ರೈವ್, ಸಿಮ್, ಆಧಾರ್ ಕಾರ್ಡ್ ಸೇರಿ ಹಲವು ವಸ್ತುಗಳನ್ನು ವಶಪಡಿಸಿಕೊಂಡಿರೋದಾಗಿ ತಿಳಿದು ಬಂದಿದೆ.
BIG NEWS: ಬೆಳಗಾವಿಯಲ್ಲಿ ನಡು ರಸ್ತೆಯಲ್ಲೇ ಹೊತ್ತಿ ಉರಿದ ಸಾರಿಗೆ ಬಸ್: ಚಾಲಕನ ಸಮಯ ಪ್ರಜ್ಞೆಗೆ ತಪ್ಪಿದ ಭಾರೀ ಅನಾಹುತ
BJP ರಿಪೋರ್ಟ್ ಕಾರ್ಡ್ ಮುಂದಿಟ್ಟು ಬಹುಮತ ಸಾಧಿಸಲಿದ್ದೇವೆ – ಜೆ.ಪಿ.ನಡ್ಡಾ
BREAKING NEWS: ಕೊಪ್ಪಳದಲ್ಲಿ ನಿಂತಿದ್ದ ಲಾರಿಗೆ ಬಸ್ ಡಿಕ್ಕಿ: 10ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ