ಉಡುಪಿ: ಶಿವಮೊಗ್ಗ ತುಂಗಾ ತೀರದಲ್ಲಿ ನಡೆದಿದ್ದಂತ ಟ್ರಯಲ್ ಬಾಂಬ್ ಬ್ಲಾಸ್ಟ್ ಪ್ರಕರಣ ಸಂಬಂಧ ನಿನ್ನೆಯಿಂದ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಸಮರ ಸಾರಿದ್ದಾರೆ. ಇಂದು ಉಡುಪಿಯ ಬ್ರಹ್ಮಾವರದಲ್ಲಿ ಶಂಕಿತ ಉಗ್ರನ ಸ್ನೇಹಿತನನ್ನು ಎನ್ಐಎ ವಶಕ್ಕೆ ಪಡೆದಿರೋದಾಗಿ ತಿಳಿದು ಬಂದಿದೆ.
ಉಡುಪಿಯ ಬ್ರಹ್ಮಾವರದಲ್ಲಿ ಶಂಕಿತ ಉಗ್ರ ಮಾಜ್ ಮುನೀರ್ ಸ್ನೇಹಿತ ರೆಶಾನ್ ನನ್ನು ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದಿರೋದಾಗಿ ತಿಳಿದು ಬಂದಿದೆ. ಈತ ಬ್ರಹ್ಮಾವರದ ಬ್ಲಾಕ್ ಕಾಂಗ್ರೆಸ್ ಮುಖ್ಯಸ್ಥ ತಾಜುದ್ದೀನ್ ಅವರ ಪುತ್ರ ಎನ್ನಲಾಗಿದೆ.
ಬ್ರಹ್ಮಾವರದ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದಂತ ತಾಜುದ್ದೀನ್ ಪುತ್ರ ರೆಶಾನ್, ಶಂಕಿತ ಉಗ್ರ ಮಾಜ್ ಮುನೀರ್ ಜೊತೆಗೆ ಸಂಪರ್ಕ ಹೊಂದಿದ್ದ ಎಂಬ ಹಿನ್ನಲೆಯಲ್ಲಿ ಎನ್ಐಎ ಇಂದು ವಶಕ್ಕೆ ಪಡೆದಿದೆ.
BIGG NEWS: ರಾಯಚೂರಿನಲ್ಲಿ ರೋಡ್ ಶೋ ಮೂಲಕ ಶಕ್ತಿ ಪ್ರದರ್ಶಿಸಿದ ಗಾಲಿ ಜನಾರ್ದನ ರೆಡ್ಡಿ
ಹಾವೇರಿ ಸಾಹಿತ್ಯ ಸಮ್ಮೇಳನ: ಸಮ್ಮೇಳನಾಧ್ಯಕ್ಷರ ಭಾಷಣದಲ್ಲೇ ‘ಡಬಲ್ ಎಂಜಿನ್ ಸರ್ಕಾರ’ ಟೀಕಿಸಿದ ‘ಸಾಹಿತಿ ದೊಡ್ಡರಂಗೇಗೌಡ’