ಬೆಂಗಳೂರು: ಪಿಎಫ್ಐ ರಾಷ್ಟ್ರೀಯ ಕಾರ್ಯದರ್ಶಿ ಮೊಹಮ್ಮದ್ ಸಾಕಿಬ್ ಫ್ಲ್ಯಾಟ್ ಮೇಲೆಯೂ ಎನ್ಐಎ ದಾಳಿ ನಡೆಸಿತ್ತು. ಇದೀಗ ನಗರ ರಿಚ್ಮಂಡ್ ಟೌನ್ ಪ್ಲ್ಯಾಟ್ ನಲಿರುವ ಮೊಹ್ಮದ್ ಸಾಕಿದ್ ನಿವಾಸದಲ್ಲಿ ಎನ್ ಐಎ ದಾಳಿ ಅಂತ್ಯಗೊಂಡಿದೆ.
ಅವರ ನಿವಾಸದಲ್ಲಿ ಮನೆ ಅಧಿಕಾರಿಗಳು ನಡೆಸುತ್ತಿದ್ದ ಶೋಧ ಕಾರ್ಯ ಅಂತ್ಯಗೊಂಡಿದ್ದು, ಮನೆಯಲ್ಲಿದ್ದ ಕೆಲ ದಾಖಲೆಗಳನ್ನ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ವೇಳೆ PFI ಕಾರ್ಯಕರ್ತರು NIA ಗೋ ಬ್ಯಾಕ್ ಎಂದು ಘೋಷಣೆ ಕೂಗಿದ್ದಾರೆ. NIA ದಾಳಿ ವೇಳೆ ಮೊಹ್ಮದ್ ಸಾಕಿದ್ ಮನೆಯಲ್ಲಿ ಇರಲಿಲ್ಲ. ಯಾವುದೇ ನೋಟಿಸ್ ನೀಡಿದೆ ಎನ್ ಐಎ ದಾಳಿ ಮಾಡಿದೆ . ಯಾವ ರಾಜಕೀಯ ಒತ್ತಡದಿಂದ ಈ ರೀತಿ ಆಗುತ್ತಿದೆ ಗೊತ್ತಿಲ್ಲ ಏಕಾಏಕಿ ಮನೆ ಮೇಲೆ NIA ಅಧಿಕಾರಿಗಳು ದಾಳಿ ಮಾಡಿದ್ದಾರೆ ಎಂದು ಕಾರ್ಯಕರ್ತರು ಆರೋಪಿಸಿದ್ದಾರೆ.
ಇನ್ನು ಸದ್ಯ ಬೆಂಗಳೂರು, ಮಂಗಳೂರು, ಶಿರಸಿಯಲ್ಲಿ ಗುರುವಾರ ನಸುಕಿನಲ್ಲಿ ಏಕಕಾಲಕ್ಕೆ ರಾಷ್ಟ್ರೀಯ ತನಿಖಾ ದಳದ (NIA) ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಇದರಲ್ಲಿ 10 ಸ್ಥಳಗಳು ಪಿಎಫ್ಐ, ಎಸ್ಡಿಪಿಐ ಪದಾಧಿಕಾರಿಗಳ ಮನೆಗಳಾಗಿದ್ದರೆ, 2 ಸ್ಥಳಗಳು ಪಿಎಫ್ಐ ಕಚೇರಿಗಳಾಗಿವೆ. ಕೇರಳ, ತಮಿಳುನಾಡು ಮತ್ತು ಆಂಧ್ರ ಪ್ರದೇಶದ ಹಲವೆಡೆಯೂ ದಾಳಿ ನಡೆದಿದೆ.