ಆಂಧ್ರಪ್ರದೇಶ: ಇಲ್ಲಿನ ಕಡಪ ಜಿಲ್ಲೆಯಲ್ಲಿ ತೆಲಂಗಾಣ ಪೊಲೀಸರು ಹಾಗೂ ಎನ್ಐಎ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಓರ್ವ ಶಂಕಿತ ಉಗ್ರನನ್ನು ಬಂಧಿಸಿದ್ದಾರೆ.
ಕಳೆದ 25 ದಿನಗಳಿಂದ ಆಂಧ್ರಪ್ರದೇಶದ ಚೆರ್ಲೋಪಲ್ಲಿ ಬಳಿಯ ಮಸೀದಿಯೊಂದರಲ್ಲಿ ಶಂಕಿತ ಓರ್ವ ಉಗ್ರ ಅಡಗಿರೋ ಮಾಹಿತಿಯನ್ನು ತಿಳಿದಂತ ಎನ್ಐಎ ಹಾಗೂ ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ.
ನಿಷೇಧಿತ ಪಿಎಫ್ಐ ಸಂಘಟನೆಗ ಸೇರಿದಂತ್ತೆ ಉತ್ತರ ತೆಲಂಗಾಣದ ಕಾರ್ಯದರ್ಶಿಯಾಗಿ ಅಬ್ದುಲ್ ಸಲೀಂ ಕಾರ್ಯ ನಿರ್ವಹಿಸುತ್ತಿದ್ದನು. ತಲೆಮರೆಸಿಕೊಂಡಿದ್ದಂತ ಆತ ಆನ್ ಲೈನ್ ಮೂಲಕ ಕರೆ ಮಾಡುತ್ತಿದ್ದನು.
ಈ ಎಲ್ಲಾ ಮಾಹಿತಿಯನ್ನು ಕಲೆಹಾಕಿ ಆಂಧ್ರಪ್ರದೇಶ ಕಡಪ ಜಿಲ್ಲೆಯ ಮೈದುೂಕೊರು ಮಂಡಲದ ಚೆರ್ಲೋಪಲ್ಲಿ ಬಳಿಯ ಮಸೀದಿಯೊಂದರಲ್ಲಿ ಬಂಧಿಸಿದ್ದಾರೆ. ಇದೀಗ ಬಂಧಿತ ಶಂಕಿತ ಉಗ್ರನನ್ನು ಹೈದರಾಬಾದಿಗೆ ಕರೆದೊಯ್ಯುತ್ತಿದ್ದು, ಅಲ್ಲಿ ವಿಚಾರಣೆಯನ್ನು ನಡೆಸಲಿದ್ದಾರೆ.
ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಸಂಬಂಧವೂ ಶಂಕಿತ ಉಗ್ರನನ್ನು ಎನ್ಐಎ ಅಧಿಕಾರಿಗಳ ವಿಚಾರಣೆ ನಡೆಸೋ ಸಾಧ್ಯತೆ ಇದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಇನ್ಮುಂದೆ ರಾಜ್ಯದಲ್ಲಿ ‘ಆರ್ಥಿಕವಾಗಿ ದುರ್ಬಲ’ರಾದವರ ವ್ಯಾಜ್ಯಗಳು ‘6 ತಿಂಗಳ ಕಾಲಮಿತಿ’ಯಲ್ಲಿ ಇತ್ಯರ್ಥ
Good News: ‘ಸಕಾಲ’ದಡಿ ಅರ್ಜಿ ಸ್ವೀಕೃತಿಯಿಂದ ‘ಸೇವೆ’ಯವರೆಗೆ ಎಲ್ಲವೂ ‘ಡಿಜಿಟಲೀಕರಣ’ಗೊಳಿಸಿ- ಸಚಿವ ಕೃಷ್ಣ ಬೈರೇಗೌಡ