ನವದೆಹಲಿ: ಡಿಸೆಂಬರ್ 23, 2021 ರ ಪಂಜಾಬ್ನ ಲೂಧಿಯಾನ ಕೋರ್ಟ್ ಕಟ್ಟಡ ಸ್ಫೋಟದ ಸಂಚುಕೋರ ಮತ್ತು ಭಯೋತ್ಪಾದಕ ಹರ್ಪ್ರೀತ್ ಸಿಂಗ್ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಗುರುವಾರ ಬಂಧಿಸಿದೆ ಎಂದು ವರದಿಯಾಗಿದೆ.
ಮಲೇಷ್ಯಾದ ಕೌಲಾಲಂಪುರದಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಆಗಮಿಸಿದ ಹರ್ಪ್ರೀತ್ ಸಿಂಗ್ನನ್ನು ಎನ್ಐಎ ಬಂಧಿಸಿದೆ ಎಂದು ಸುದ್ದಿ ಸಂಸ್ಥೆಯೊಂದು ಶುಕ್ರವಾರ ತಿಳಿಸಿದೆ.
NIA had declared a reward of Rs 10 lakh on Harpreet Singh against whom a non-bailable warrant from the Special NIA court had been issued and a Look Out Circular was opened: NIA
— ANI (@ANI) December 2, 2022
ಈತ ಪಾಕಿಸ್ತಾನ ಮೂಲದ ಸ್ವಯಂ-ಘೋಷಿತ ಇಂಟರ್ನ್ಯಾಷನಲ್ ಸಿಖ್ ಯೂತ್ ಫೆಡರೇಶನ್ (ಐಎಸ್ವೈಎಫ್) ಮುಖ್ಯಸ್ಥ ಹರ್ಪ್ರೀತ್ ರೋಡ್ನ ಸಹವರ್ತಿಯಾಗಿದ್ದು, ಲೂಧಿಯಾನ ಕೋರ್ಟ್ ಸ್ಫೋಟದ ಸಂಚುಕೋರರಲ್ಲಿ ಒಬ್ಬರು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಡಿಸೆಂಬರ್ 2021 ಲುಧಿಯಾನ ಕೋರ್ಟ್ ಕಟ್ಟಡ ಸ್ಫೋಟದಲ್ಲಿ ಒಬ್ಬರು ಮೃತಪಟ್ಟು ಆರು ಮಂದಿ ಗಾಯಗೊಂಡಿದ್ದರು.
ಬಂಧಿತ ಆರೋಪಿಯು ಸ್ಫೋಟಕಗಳು, ಶಸ್ತ್ರಾಸ್ತ್ರಗಳು ಮತ್ತು ಮಾದಕವಸ್ತುಗಳ ಕಳ್ಳಸಾಗಣೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮತ್ತು ಇವನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಕೊನೆಗೂ ಈಗ ಆರೋಪಿ ಪೊಲೀಸರ ಅತಿಥಯಾಗಿದ್ದಾನೆ.
ಇದಕ್ಕೂ ಮೊದಲು, ಹರ್ಪ್ರೀತ್ ಸಿಂಗ್ಗೆ ಬಗ್ಗೆ ಮಾಹಿತಿ ನೀಡಿದವರಿಗೆ ಎನ್ಐಎ 10 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿತ್ತು. ಅವರ ವಿರುದ್ಧ ವಿಶೇಷ ಎನ್ಐಎ ನ್ಯಾಯಾಲಯದಿಂದ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿತ್ತು.
Good News : ಹಾಲು ಉತ್ಪಾದಕರಿಗೆ ಗುಡ್ ನ್ಯೂಸ್ : ಹಾಲು ಖರೀದಿ ದರ ಮತ್ತೆ 2 ರೂ. ಹೆಚ್ಚಳ
BIGG NEWS : ಡಿ.3ರಂದು ಬೆಂಗಳೂರಿನಲ್ಲಿ ಗಣಿ ಹೂಡಿಕೆದಾರರ ಸಮಾವೇಶ : ಸಚಿವ ಪ್ರಹ್ಲಾದ್ ಜೋಶಿ | Pralhad Joshi
Good News : ಹಾಲು ಉತ್ಪಾದಕರಿಗೆ ಗುಡ್ ನ್ಯೂಸ್ : ಹಾಲು ಖರೀದಿ ದರ ಮತ್ತೆ 2 ರೂ. ಹೆಚ್ಚಳ