ಬೆಂಗಳೂರು: ರಾಜ್ಯದಲ್ಲಿ ಮೂವರು ಶಂಕಿತ ಉಗ್ರರನ್ನು ಎನ್ ಐ ಎ ಬಂಧಿಸಿದೆ. ಬೆಂಗಳೂರು, ಕೋಲಾರದಲ್ಲಿ ಶಂಕಿತ ಮೂವರು ಉಗ್ರರನ್ನು ಬಂಧಿಸಿರುವುದಾಗಿ ತಿಳಿದು ಬಂದಿದೆ.
ಬೆಂಗಳೂರು, ಕೋಲಾರದ ಐದು ಕಡೆಯಲ್ಲಿ ದಾಳಿ ನಡೆಸಿರುವಂತ ಎನ್ಐಎ, ಮೂವರು ಶಂಕಿತ ಉಗ್ರರನ್ನು ಬಂಧಿಸಿದೆ. ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನ ಮನೋವೈದ್ಯ ಡಾ.ನಾಗರಾಜ್, ಎಎಸ್ಐ ಆಗಿದ್ದ ಚಾಂದ್ ಪಾಷಾ ಅನೀಸ್, ಫಾತೀಮಾರನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಬಂಧಿಸಿದ್ದಾರೆ.
ಬೆಂಗಳೂರು, ಕೋಲಾರದ 5 ಕಡೆಯಲ್ಲಿ ಎನ್ಐಎ ನಡೆಸಿದಂತ ದಾಳಿಯಲ್ಲಿ 2 ವಾಕಿಟಾಕಿ, ಚಿನ್ನಾಭರಣವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
BIG NEWS: 6 ತಿಂಗಳಿಂದ ‘ನರೇಗಾ ಸಿಬ್ಬಂದಿ’ಗಿಲ್ಲ ವೇತನ: ರಾಜ್ಯಾಧ್ಯಂತ ಅಸಹಕಾರ ಪ್ರತಿಭಟನೆ, ಸೇವೆಯಲ್ಲಿ ವ್ಯತ್ಯಯ